National

ಅಸ್ಸಾಂನಲ್ಲಿ ಬೆಳ್ಳಂಬೆಳಗ್ಗೆಯೇ ನಡುಗಿತು ಭೂಮಿ; ಜನರಲ್ಲಿ ಆತಂಕ

ಗುವಾಹಟಿ; ಇತ್ತೀಚಿನ ಕೆಲ ತಿಂಗಳುಗಳಿಂದ ಉತ್ತರ ಭಾರತದ ಹಲವೆಡೆ ಭೂಮಿ ನಡುಗುತ್ತಿದೆ. ಇದರಿಂದಾಗಿ ಜನರಲ್ಲಿ ಭೀತಿ ಹೆಚ್ಚಾಗಿದೆ. ಈ ನಡುವೆ ಅಸ್ಸಾಂನಲ್ಲಿ ಇವತ್ತು ಬೆಳಗಿನ ಜಾವ ಭೂಮಿ ನಡುಗಿದೆ. ರಿಕ್ಟರ್‌ ಮಾಪಕದಲ್ಲಿ 3.4 ತೀವ್ರತೆ ದಾಖಲಾಗಿದೆ. ತೇಜ್‌ಪುರ್‌ ಜಿಲ್ಲೆಯ ಹಲವು ಪ್ರದೇಶದಲ್ಲಿ ಭೂಮಿ ನಡುಗಿದ ಅನುಭವವಾಗಿದೆ.

ಬೆಳಗ್ಗೆ 5.53ಕ್ಕೆ ಸರಿಯಾಗಿ ಕೆಲ ಸೆಕೆಂಡ್‌ಗಳ ಕಾಲ ಭೂಮಿ ನಡುಗಿದೆ. ಇದರಿಂದಾಗಿ ಮನೆಗಳಲ್ಲಿದ್ದ ಹಲವು ವಸ್ತುಗಳ ಕೆಳಗೆ ಬಿದ್ದಿವೆ. ಇದರಿಂದ ಆತಂಕಗೊಂಡ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಯಾವುದೇ ಆಸ್ತಿಪಾಸ್ತಿ ಅಥವಾ ಪ್ರಾಣಹಾನಿ ಸಂಭವಿಸಿಲ್ಲ.

ಡಿಸೆಂಬರ್‌ 7ರಂದು ಕೂಡಾ ಅಸ್ಸಾಂನ ಗುವಾಹಟಿಯಲ್ಲಿ ಭೂಕಂಪನ ಸಂಭವಿಸಿತ್ತು. ಇದೀಗ ಮತ್ತೆ ಅದೇ ರಾಜ್ಯದಲ್ಲಿ ಭುಮಿ ನಡುಗಿದೆ. ಇದರಿಂದಾಗಿ ಆತಂಕ ಮನೆಮಾಡಿದೆ.

 

Share Post