Sports

Ind Vs Sa Test – ಮೊದಲ ಇನ್ನಿಂಗ್ಸ್ ಭಾರತ 202‌ ರನ್‌ಗೆ ಆಲೌಟ್

ಜೋಹನ್ಸ್‌ಬರ್ಗ್‌: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ ಆಫ್ರಿಕಾದ ಬಿಗಿ ಬೌಲಿಂಗ್‌ ದಾಳಿಗೆ ತತ್ತರಿಸಿದೆ. ಭಾರತ ತಂಡ ಮೊದಲ ಇನ್ನಿಂಗ್ಸ್ 202 ರನ್‍ಗೆ ಆಲೌಟ್‌ ಆಗಿದೆ. ವಿರಾಟ್‌ ಗಾಯಾಳು ಆದ ಕಾರಣ ಕೆ ಎಲ್‌ ರಾಹುಲ್‌  ನಾಯಕತ್ವ ವಹಿಸಿಕೊಂಡಿದ್ದರು.

ಉತ್ತಮ ಆರಂಭ ಸಿಗುವ ಮುನ್ನವೇ ಮಯಾಂಕ್‌ (೨೬ರನ್) ವಿಕೇಟ್‌ ಒಪ್ಪಿಸಿದರು.‌ ಪೂಜಾರಾ ಮತ್ತು ಅಜಿಂಕ್ಯ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಈ ನಡುವೆ ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದರು. ಇನ್ನು ತಂಡಕ್ಕೆ ಆರ್‌ ಅಶ್ವಿನ್‌ (೪೬ರನ್) ಅವರು ಕೂಡ ಆಸರೆ ಆಗಿ ನಿಂತರು,

ಇನ್ನು ದ.ಆಫ್ರಿಕಾ ಬ್ಯಾಟಿಂಗ್‌ ಆರಂಭಿಸಿ, ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 35ರನ್‌ಗಳಿಸಿದೆ. ಮೊಹಮ್ಮದ ಶಮಿ ಮಾರ್ಕ್ರಮ್‌ ವಿಕೆಟ್‌ ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದರು. ಡೀನ್ ಎಲ್ಗರ್ ಮತ್ತು ಮತ್ತು ಕೀಗನ್ ಪೀಟಸರ್ನ್ ವಿಕೆಟ್‌ ಕಾಯ್ದುಕೊಂಡಿದ್ದಾರೆ.

Share Post