CrimeNational

ತಂಗಿಗೆ ಉಂಗುರು, ಟಿವಿ ಕೊಡಿಸಿದ ಗಂಡ; ಹೊಡೆದು ಕೊಂದ ಪತ್ನಿ!

ಲಖನೌ;  ತಂಗಿಯ ಮದುವೆ ಇತ್ತು.. ಗಿಫ್ಟ್‌ ಅಂತ ಆಕೆಯ ಅಣ್ಣ ಟಿವಿ ಹಾಗೂ ಉಂಗುರು ಕೊಡಿಸಿದ್ದ.. ಇದರಿಂದ ಆತನ ಹೆಂಡತಿ ಕುಪಿತಗೊಂಡಿದ್ದಾಳೆ.. ನಿನ್ನ ತಂಗಿಗೆ ಯಾಕೆ ಅಷ್ಟೊಂದು ಗಿಫ್ಟ್‌ ಕೊಟ್ಟೆ ಎಂದು ಜಗಳ ತೆಗೆದಿದ್ದಾಳೆ.. ಪತಿ ಎಂದೂ ನೋಡದೇ ಚೆನ್ನಾಗಿ ಹೊಡೆದು ಸಾಯಿಸಿಬಿಟ್ಟಿದ್ದಾಳೆ.. ಉತ್ತರ ಪ್ರದೇಶದ ಬಾರಬಂಕಿ ಎಂಬಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. 

ಬಾರಬಂಕಿಯ ಚಂದ್ರ ಪ್ರಕಾಶ್‌ ಮಿಶ್ರಾ ಎಂಬಾತನೇ ತನ್ನ ಪತ್ನಿ ಕೈಯಲ್ಲಿ ಕೊಲೆಯಾದ ವ್ಯಕ್ತಿಯಾಗಿದ್ದಾನೆ.. ಚಂದ್ರ ಪ್ರಕಾಶ್‌ ತಂಗಿಯ ವಿವಾಹವಿದ್ದು, ವಿವಾಹದ ದಿನ ತಂಗಿಗೆ ಚಿನ್ನದ ಉಂಗುರ ಹಾಗೂ ಟಿವಿ ಗಿಫ್ಟ್‌ ಕೊಟ್ಟಿದ್ದಾನೆ.. ಇದರಿಂದ ಚಂದ್ರಪ್ರಕಾಶ್‌ ಮಿಶ್ರಾ ಪತ್ನಿ ಚಾಬಿ ಕೋಪಗೊಂಡಿದ್ದಾಳೆ.. ಇದೇ ವಿಚಾರ ಇಟ್ಟುಕೊಂಡು ಮನೆಗೆ ಬಂದ ಮೇಲೆ ಜಗಳ ತೆಗೆದಿದ್ದಾಳೆ..

ಅನಂತರ ತನ್ನ ಸಹೋದರನನ್ನು ಕರೆಸಿಕೊಂಡಿದ್ದಾಳೆ.. ಇಬ್ಬರೂ ಸೇರಿ ಚಂದ್ರಪ್ರಕಾಶ್‌ಗೆ ಚೆನ್ನಾಗಿ ಬಡಿದಿದ್ದಾರೆ.. ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ಚಂದ್ರಪ್ರಕಾಶ್‌ ಮಿಶ್ರಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.. ಪ್ರಕರಣ ಸಂಬಂಧ ಪೊಲೀಸರು ಚಂದ್ರ ಪ್ರಕಾಶ್‌ ಪತ್ನಿ ಚಾಬಿ, ಆಕೆಯ ಸಹೋದರ ಸೇರಿ ಐದು ಮಂದಿಯನ್ನು ಬಂಧಿಸಲಾಗಿದೆ..

 

Share Post