Hijab controversy: ಮಹಿಳೆಯರ ಬಟ್ಟೆ ನೋಡಿ ಪುರುಷರು ಉದ್ವೇಗಕ್ಕೆ ಒಳಗಾಗ್ತಾರೆ-ರೇಣುಕಾಚಾರ್ಯ
ದೆಹಲಿ: ಇಡೀ ದೇಶದಲ್ಲಿ ಕರ್ನಾಟಕದ ಹಿಜಾಬ್(Hijab) ವಿವಾದ ಭುಗಿಲೆದ್ದಿದೆ. ರಾಜಕೀಯ ಗಣ್ಯರು, ಸೆಲಬ್ರಟಿಗಳು, ಈ ಬಗ್ಗೆ ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಂದೆಡೆ ಶಾಲೆ-ಕಾಲೇಜುಗಳಿಗೆ ಸಿಎಂ ರಜೆ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ ವಿವಾದ ಕೋರ್ಟ್‌ನಲ್ಲಿ ವಾದ-ಪ್ರತಿವಾದ ನಡೆಯುತ್ತಿದೆ. ಕಾಲೇಜುಗಳು ರಣರಂಗವಾಗುತ್ತಿದೆ. ಹಲವೆಡೆ 144ಸೆಕ್ಷನ್(144section) ಜಾರಿ ಮಾಡಲಾಗಿದೆ. ಕಾಲೇಜುಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಅಚಾತುರ್ಯ ಘಟನೆ ನಡೆಯದಂತೆ ಇಷ್ಟಲ್ಲಾ ಕ್ರಮ ಕೈಗೊಂಡಿರುವಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ(Renukacharya) ನೀಡಿರುವ ಹೇಳಿಕೆ ಮತ್ತೊಂದು ದುರಂತಕ್ಕೆ ದಾರಿ ಮಾಡಿಕೊಡುವುದರಲ್ಲಿ ಸಂಶಯವೇ ಇಲ್ಲ.
ಹಿಜಾಬ್ ವಿವಾದ ಕುರಿತಂತೆ ದೆಹಲಿಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಹಿಳೆಯರು ಧರಿಸುವ ಕೆಲವು ಉಡುಪುಗಳು ಪುರುಷರನ್ನು ಉದ್ವೇಗಕ್ಕೆ ಒಳಗಾಗುವಂತೆ ಮಾಡುತ್ತದೆ. ಇಂದು ನಡೆಯುತ್ತಿರುವ ಅತ್ಯಾಚಾರಗಳು ಮಹಿಳೆಯರು ಧರಿಸುವ ಉಡುಪಿನಿಂದಲೇ ಆಗುತ್ತಿವೆ ಎಂದು ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಕಡ್ಡಾಯ ಎಂಬ ನಿಯಮ ಹೊರಡಿಸಿದೆ ಅದರಂತೆ ಸಮವಸ್ತ್ರ ಧರಿಸಿ ಎಂದು ಹೇಳಿದ ಬಳಿಕ ಮಹಿಳೆಯರ ಉಡುಪಿನ ಬಗೆಗೆ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.