National

ಭಾರತದ ಮೊಟ್ಟ ಮೊದಲ ವರದಿಗಾರ್ತಿ, ಈ ಪುಟ್ಟ ಬಾಲಕಿ: ಹೇಳಿದ್ದೇನು?

ಕಾಶ್ಮೀರ:  ಸಾಮಾಜಿಕ ಜಾಲತಾಣಗಳು ಜನರಿಗೆ ಎಷ್ಟು ಅಪಾಯಕಾರಿಯೋ ಅಷ್ಟೇ ಉಪಕಾರಿ ಕೂಡ. ಯಾವುದೇ ಒಂದು ಸುದ್ದಿಯನ್ನು ಮಾಧ್ಯಮಗಳು ಮಾತ್ರ ವರದಿ ಮಾಡಬೇಕೆಂದೇನಿಲ್ಲ. ತಮ್ಮ ಸಮಸ್ಯೆಗಳನ್ನು ವಿಡಿಯೋ ಮಾಡಿ ಟ್ವಿಟ್ಟರ್‌, ಫೇಸ್ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿ ಪ್ರಪಂಚ್‌ ಗಮನಕ್ಕೆ ತರುವಂತೆ ಮಾಡ್ತಾರೆ. ಕೆಲವೊಂದು ಗಂಭೀರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುವ ಉದಾಹರಣೆಗಳೂ ಇವೆ.

ಅದರಂತೆಯೇ ಇಲ್ಲೊಬ್ಬ ಪುಟ್ಟ ಬಾಲಕಿ ತಾವು ವಾಸ ಮಾಡ್ತಿರುವ ಮನೆಯ ಹದಗೆಟ್ಟ ರಸ್ತೆ ಬಗ್ಗೆ ವಿಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅತ್ಯಂತ ಸಣ್ಣ ವಯಸ್ಸಿಗೆ ತನ್ನ ಸಮಸ್ಯೆಯನ್ನು ಎತ್ತಿಹಿಡಿಯುತ್ತಾ ಅಧಿಕಾರಿಗಳ ಗಮನಕ್ಕೆ ಬರುವಂತೆ ಮಾಡಿದ್ದಾಳೆ. ಇಷ್ಟು ಪುಟ್ಟ ವಯಸ್ಸಿಗೆ ಅನುಭವ ಇರುವ ವರದಿಗಾರರಂತೆ ಪುಟ್ಟ ಮೈಕ್‌ ಹಿಡಿದು ಕೆಸರಿನಿಂದ ಕೂಡಿರುವ ರಸ್ತೆ ಬಗ್ಗೆ ವಿವರಣೆ ನೀಡಿದ್ದಾಳೆ. ನಮ್ಮ ಮನೆಗೆ ಬರುವ ದಾರಿ ಸಂಪೂರ್ಣ ಗುಂಡಿ ಬಿದ್ದು, ಕೆಸರಿನಿಂದ ಕೂಡಿದೆ. ರಸ್ತೆ ಹಾಳಾಗಿರುವುದರಿಂದ ನಮ್ಮ ಮನೆಗೆ ಬಂಧುಗಳು ಬರುವುದಿಲ್ಲ. ಎಷ್ಟು ಕೆಟ್ಟದಾಗಿ ಅಂದ್ರೆ ರಸ್ತೆ ತುಂಬೆಲ್ಲಾ ನೀರು ನಿಂತು ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆ. ಸ್ಥಳೀಯರು ಕಸವನ್ನು ರಸ್ತೆಗೆ ಎಸೆದು ಸ್ವಚ್ಛಂದ ಪರಿಸರವನ್ನು ಹಾಳು ಮಾಡ್ತಿದಾರೆ ಎಂದು ರಸ್ತೆ ಉದ್ದಗಲಕ್ಕೂ ನಡೆದು ಸಂಪೂರ್ಣ ವಿವರಣೆಯನ್ನು ನೀಡಿದ್ದಾಳೆ. ಬಾಲಕಿ ಈ ಕಾರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.

 

Share Post