CrimeNational

ಭಾರೀ ಪ್ರಮಾಣದ ಮಾನವ ಕಳ್ಳಸಾಗಣೆ; ಅಧಿಕಾರಿಗಳಿಂದ 95 ಮಕ್ಕಳ ರಕ್ಷಣೆ..!

ಲಖನೌ; ಭಾರೀ ಪ್ರಮಾಣದ ಮಾನವ ಕಳ್ಳ ಸಾಗಣೆ ಯತ್ನ ನಡೆದಿದ್ದು, ಬರೋಬ್ಬರಿ 95 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.. ಬಿಹಾರದಿಂದ 95 ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.. ಈ ಬಗ್ಗೆ ಮಾಹಿತಿ ತಿಳಿದ ಉತ್ತರ ಪ್ರದೇಶದ ಬಾಲ ಆಯೋಗದ ಅಧಿಕಾರಿಗಳು, 95 ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ..

ಇದನ್ನೂ ಓದಿ; ಸಿಗರೇಟ್‌ ಕೊಡಲಿಲ್ಲ ಅಂತ ಇಬ್ಬರು ಯುವಕರ ಕೊಲೆ..!

ಮಕ್ಕಳನ್ನು ಬಿಹಾರದಿಂದ ಉತ್ತರ ಪ್ರದೇಶಕ್ಕೆ ಕರೆದೊಯ್ಯಲಾಗುತ್ತಿತ್ತು.. ಎಲ್ಲರೂ ಕೂಡಾ ಶಾಲೆಗೆ ಹೋಗಬೇಕಿದ್ದ ಪುಟಾಣಿ ಮಕ್ಕಳಾಗಿದ್ದರು.. ಅಯೋಧ್ಯೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಸರ್ವೇಶ್​​ ಅವಸ್ತಿ, ಮಕ್ಕಳ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ಅವರಿಗೆ ಈ ಬಗ್ಗೆ ಮಾಹಿತಿ ಬಂದಿತ್ತು.. ಕೂಡಲೇ ಅಧಿಕಾರಿಗಳು ಅಲರ್ಟ್‌ ಆಗಿದ್ದಾರೆ.. ಬಾಲ ಆಯೋಗದ ಅಧಿಕಾರಿಗಳು ದಾಳಿ ನಡೆಸಿದಾಗ ಮಕ್ಕಳ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ..

ಇದನ್ನೂ ಓದಿ; ಟೈರ್‌ ಬ್ಲಾಸ್ಟ್‌ ಆಗಿ ಕಾರು ಪಲ್ಟಿ; ಇಬ್ಬರ ದುರ್ಮರಣ, 7 ಮಂದಿಗೆ ಗಾಯ!

ಎಲ್ಲಾ 95 ಮಕ್ಕಳನ್ನೂ ರಕ್ಷಣೆ ಮಾಡಲಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.. ಮಕ್ಕಳನ್ನು ಎಲ್ಲಿಂದ ತರಲಾಗಿದೆ..? ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ತೀವ್ರಗೊಂಡಿದೆ..

ಇದನ್ನೂ ಓದಿ; ರಾಮೇಶ್ವರಂ ಕೆಫೆಗಿಂತ ದೊಡ್ಡ ಬಾಂಬ್‌; ವಿಮಾನ ನಿಲ್ದಾಣದ ಸ್ಫೋಟದ ಬೆದರಿಕೆ

Share Post