ಹುಲಿ ಉಗುರಿನ ಪೆಂಡೆಂಟ್ ತಂದ ಸಂಕಷ್ಟ; ವರ್ತೂರ್ ಸಂತೋಷ್ ಅರೆಸ್ಟ್
ಬೆಂಗಳೂರು; ಬಿಗ್ ಬಾಸ್ ಸ್ಪರ್ಧಿ ಹಾಗೂ ಹಳ್ಳಿಕಾರ್ ಒಡೆಯ ಎಂದೇ ಖ್ಯಾತಿಯಾಗಿರಯವ ವರ್ತೂರ್ ಸಂತೋಷ್ ಅವರನ್ನು ಬಂಧಿಸಲಾಗಿದೆ. ಬಿಗ್‌ಬಾಸ್ ಮನೆಯಲ್ಲೇ ರಾಮೋಹಳ್ಳಿ ವ್ಯಾಪ್ತಿಯ ಅರಣ್ಯಾಧಿಕಾರಿಗಳು ವರ್ತೂರ್ ಸಂತೋಷ್ ಅವರನ್ನು ಬಂಧಿಸಿದ್ದಾರೆ.
ವರ್ತೂರ್ ಸಂತೋಷ್ ಅವರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಅವರು ಕತ್ತಿಗೆ ಹಾಕಿದ್ದ ಚೈನ್‌ನಲ್ಲಿನ ಪೆಂಡೆಂಟ್ ದೊಡ್ಡ ಸುದ್ದಿ ಮಾಡಿತ್ತು. ಯಾಕಂದ್ರೆ ಆ ಚೈನ್‌ನಲ್ಲಿ ಹುಲಿಯ ಉಗುರಿನ ಪೆಂಡೆಂಟ್ ಇತ್ತು. ಈ ಬಗ್ಗೆ ಮಾಹಿತಿ ಅರಿತ ಅರಣ್ಯ ಇಲಾಖೆ ಅಧಿಕಾರಿಗಳು, ಬಿಗ್ ಬಾಸ್ ಮನೆಗೇ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೆಂಡೆಂಟ್‌ನಲ್ಲಿರುವ ಉಗುರು ನಿಜವಾಗಿಯೂ ಹುಲಿಯದ್ದೇ ಎಂಬುದು ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ವರ್ತೂರ್ ಸಂತೋಷ್ ಅವರನ್ನು ಬಂಧಿಸಿ ಕರೆತರಲಾಗಿದೆ. ರಾಮೋಹಳ್ಳಿ ಅರಣ್ಯಾಧಿಕಾರಿಗಳೇ ಸುಮೋಟೋ ಕೇಸ್ ಹಾಕಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆ್ಯಕ್ಟ್ ಅಡಿಯಲ್ಲಿ ಈ ಬಂಧನ ನಡೆದಿದೆ.