ರಾಮೇಶ್ವರಂ ಕೆಫೆಗಿಂತ ದೊಡ್ಡ ಬಾಂಬ್; ವಿಮಾನ ನಿಲ್ದಾಣದ ಸ್ಫೋಟದ ಬೆದರಿಕೆ
ಕೋಲ್ಕತ್ತಾ; ರಾಮೇಶ್ವರಂ ಕೆಫೆಯಲ್ಲಿ ಇಟ್ಟ ಬಾಂಬ್‌ಗಿಂತ ದೊಡ್ಡ ಬಾಂಬ್ ಇಟ್ಟಿದ್ದು, ವಿಮಾನ ನಿಲ್ದಾಣ ಶೀಘ್ರದಲ್ಲೇ ಸ್ಫೋಟಗೊಳ್ಳುವುದಾಗಿ ಬೆದರಿಕೆ ಇ-ಮೇಲ್ ಬಂದಿದೆ.. ಪಶ್ಚಿಮ ಬಂಗಾಲದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಈ ಬೆದರಿಕೆ ಬಂದಿದ್ದು, ವಿಮಾನ ನಿಲ್ದಾಣದ ಹಲವು ಸ್ಥಳಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್‌ನಲ್ಲಿ ಹೇಳಲಾಗಿದೆ.. ಇದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.. ಆದ್ರೆ ಪರಿಶೀಲನೆಯ ನಂತರ ಅದು ಫೇಕ್ ಇ-ಮೇಲ್ ಅನ್ನೋದು ಗೊತ್ತಾಗಿದೆ..
ಇದನ್ನೂ ಓದಿ; ತುಮಕೂರಿನಲ್ಲಿ ಬಿರಿಯಾನಿ ಹೋಟೆಲ್‌ಗೆ ಬೆಂಕಿ!; 25 ಲಕ್ಷ ರೂ. ನಷ್ಟ..!
ಶುಕ್ರವಾರ ಮಧ್ಯಾಹ್ನ 11.30ರ ಸುಮಾರಿಗೆ ಈ ಇ-ಮೇಲ್ ಬಂದಿದೆ.. ಇದರಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ತಂಡವೇ ಇಲ್ಲೂ ಕೂಡಾ ಕೆಲಸ ಮಾಡಿದೆ.. ರಾಮೇಶ್ವರಂ ಕೆಫೆಗಿಂತ ದೊಡ್ಡ ಬಾಂಬ್‌ಗಳನ್ನು ಅಲ್ಲಲ್ಲಿ ಅಡಗಿಸಿಟ್ಟಿದ್ದೇವೆ.. ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಇಡಲಾಗಿದೆ.. 12.55ಕ್ಕೆ ಸರಿಯಾಗಿ ವಿಮಾನ ನಿಲ್ದಾಣ ಸ್ಫೋಟಗೊಳ್ಳುತ್ತೆ ಎಂದು ಬರೆಯಲಾಗಿತ್ತು.. ಹೀಗಾಗಿ ಕೆಲಕಾಲ ಆತಂಕ ವಾತಾವರಣ ನಿರ್ಮಾಣವಾಗಿತ್ತು.. ಬಾಂಬ್ ಸ್ಕ್ವಾಡ್ ಹಾಗೂ ಡಾಗ್ ಸ್ವ್ಕಾಡ್ ಪರಿಶೀಲನೆ ನಡೆಸಿತು.. ಸ್ಥಳದಲ್ಲೇ ಯಾವುದೇ ಬಾಂಬ್ ಪತ್ತೆಯಾಗಿಲ್ಲ..
ಇದನ್ನೂ ಓದಿ; ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮೊಬೈಲ್ ಬ್ಲಾಸ್ಟ್; ಮಹಿಳೆ ದಾರುಣ ಸಾವು!
ಈ ಹಿಂದೆಯೂ ಕೂಡಾ ಇಂತಹ ಫೇಕ್ ಇ-ಮೇಲ್‌ಗಳು ಸಾಕಷ್ಟು ಬಂದಿವೆ.. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದವು.. ಅದಾದ ಕೆಲ ತಿಂಗಳ ನಂತರ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಲಾಗಿತ್ತು..
ಇದನ್ನೂ ಓದಿ; ಪಟಾಕಿ ಕಿಡಿಯಿಂದ ಮದುವೆ ಚಪ್ಪರಕ್ಕೆ ಬೆಂಕಿ; ಒಂದೇ ಕುಟುಂಬದ ಆರು ಮಂದಿ ದುರ್ಮರಣ!