CrimeDistricts

ಟೈರ್‌ ಬ್ಲಾಸ್ಟ್‌ ಆಗಿ ಕಾರು ಪಲ್ಟಿ; ಇಬ್ಬರ ದುರ್ಮರಣ, 7 ಮಂದಿಗೆ ಗಾಯ!

ಬೆಳಗಾವಿ; ಕಾರಿನ ಹಿಂಬದಿ ಟೈರ್‌ ಬ್ಲಾಸ್ಟ್‌ ಆಗಿ, ಕಾರು ಪಲ್ಟಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.. ಕಾರು ಪಲ್ಟಿಯಾಗುವುದಕ್ಕೂ ಮೊದಲು ದ್ವಿಚಕ್ರ ವಾಹನವೊಂದಕ್ಕೆ ಗುದ್ದಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.. ಬೆಳಗಾವಿ ಜಿಲ್ಲೆ ಖಾನಾಪೂರ ಪಟ್ಟಣದ ರೇಲ್ವೆ ಬ್ರಿಡ್ಜ್ ಬಳಿಯ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ; ರಾಮೇಶ್ವರಂ ಕೆಫೆಗಿಂತ ದೊಡ್ಡ ಬಾಂಬ್‌; ವಿಮಾನ ನಿಲ್ದಾಣದ ಸ್ಫೋಟದ ಬೆದರಿಕೆ

ಅತಿವೇಗವಾಗಿ ಚಲಿಸುತ್ತಿದ್ದ ಕಾರಿನ ಹಿಂಬದಿ ಟೈರ್‌ ಬ್ಲಾಸ್ಟ್‌ ಆಗಿದ್ದು, ಆಗ ಚಾಲಕನ ನಿಯಂತ್ರಣ ತಪ್ಪಿದೆ.. ಇದರಿಂದಾಗಿ ಅದು ಎದುರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.. ಘಟನೆಯಲ್ಲಿ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.. ಕಾರು ನಜ್ಜುಗುಜ್ಜಾಗಿದೆ..

ಇದನ್ನೂ ಓದಿ; ತುಮಕೂರಿನಲ್ಲಿ ಬಿರಿಯಾನಿ ಹೋಟೆಲ್‌ಗೆ ಬೆಂಕಿ!; 25 ಲಕ್ಷ ರೂ. ನಷ್ಟ..!

ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೂ ಅವರ ಗುರುತು ಪತ್ತೆಯಾಗಿಲ್ಲ..

ಇದನ್ನೂ ಓದಿ; ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಮೊಬೈಲ್‌ ಬ್ಲಾಸ್ಟ್‌; ಮಹಿಳೆ ದಾರುಣ ಸಾವು!

Share Post