ಹಳಿ ತಪ್ಪಿದ ಎಕ್ಸ್‌ಪ್ರೆಸ್ ರೈಲು – 7ಜನ ಸಾವು, 45 ಮಂದಿಗೆ ಗಾಯ
ಕೋಲ್ಕತ್ತ : ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ದೊಮೊಹಾನಿ ಬಳಿ ಬಿಕನೇರ್ ಮತ್ತು ಗುವಾಹಟಿ ನಡುವ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ಈ ದುರ್ಘಟನೆಯಲ್ಲಿ ಸತ್ತವರ ಸಂಖ್ಯೆ 7ಕ್ಕೆ ಏರಿದೆ.
1053 ಪ್ರಯಾಣಿಕರನ್ನು ಹೊತ್ತು ಹೋಗುತ್ತಿದ್ದ ರೈಲು, ಗುರುವಾರ ಸಂಜೆ ಹಳಿ ತಪ್ಪಿದೆ. ಈ ಅಪಘಾತದಲ್ಲಿ 45ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. 12 ರೈಲು ಬೋಗಿಗಳು ನೆಲಕ್ಕುರುಳಿದ್ದಾವೆ ಎಂದು ಈಶಾನ್ಯ ಫ್ರಂಟಿಯರ್ ರೈಲ್ವೆ ವಕ್ತಾರ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಇನ್ನು ರಕ್ಷಣಾ ಕಾರ್ಯ ನಡೆಯುತ್ತಿದೆ, ನಾಲ್ಕು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಗಾಯಾಳುಗಳ ಪೃಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಏರುವ ಭೀತಿಯಿದೆ.
GM/NFR, Shri Anshul Gupta arrived on derailment site at 00:08 and line restoration work post passenger relief operation started under his supervision @RailMinIndia pic.twitter.com/1ED5q8On6K
— Northeast Frontier Railway (@RailNf) January 13, 2022