ದಿನಗೂಲಿ ನೌಕರನೊಬ್ಬ ಈಗ ಮಾಡೆಲ್, 60ಹರೆಯದಲ್ಲೂ ಖದರ್ ಲುಕ್
ಕೇರಳ: ಕೂಲಿ ಮಾಡಿದ್ರೆ ಮಾತ್ರ ಆ ದಿನದ ಜೀವನ ನಡೆಸುವ ದಿನಗೂಲಿ ನೌಕರನೊಬ್ಬ ಈಗ ಮಾಡೆಲ್ ಆಗಿದ್ದಾನೆ. 60ರ ಹರೆಯದಲ್ಲೂ ತನ್ನ ಖದರ್ ಲುಕ್‌ನೊಂದಿಗೆ ಇತರೆ ಪ್ರೊಫೆಷನಲ್ ಮಾಡೆಲ್‌ಗಳಿಗಿಂತ ಕಮ್ಮಿ ಏನಿಲ್ಲ ಎಂದು ತೋರಿಸಿಕೊಟ್ಟಿದ್ದಾನೆ. ಸೂಟ್ ಮತ್ತು ಬೂಟ್ ಹಾಕಿ ಶ್ರೀಮಂತ ವ್ಯಕ್ತಿಯಂತೆ ಕಂಡ ಈತನ ಹಿನ್ನೆಲೆ ತಿಳಿದು ಜನ ಶಾಕ್ ಆಗಿದ್ದಾರೆ. ಆತ ಒಬ್ಬ ದಿನಗೂಲಿ ನೌಕರ ಎಂದು ತಿಳಿದು ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಕೇರಳದ ಕೋಝಿಕ್ಕೋಡ್‌ನ 60 ವರ್ಷದ ಮಮ್ಮಕ್ಕ ಎಂಬ ವ್ಯಕ್ತಿ ಕೂಲಿ ಕೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದಾನೆ. ಜೀವನದಲ್ಲಿ ಬದಲಾವಣೆ ಸಹಜ ಎಂದು ಎಲ್ಲರೂ ಹೇಳುತ್ತಾರೆ. ಮಮ್ಮಕ್ಕ ತನ್ನ ಕನಸಿನಲ್ಲಿಯೂ ಈ ಅನಿರೀಕ್ಷಿತ ಬದಲಾವಣೆಯನ್ನು ಊಹಿಸಿರಲಿಲ್ಲ. ಅವನ ಮೈಮೇಲಿನ ಅಂಗಿ ಮತ್ತು ಲುಂಗಿ ಮಾಯವಾಗು ಸೂಟು, ಬೂಟು ಬಂದಿದೆ. ಇದೆಲ್ಲಾ ಒಬ್ಬ ಛಾಯಾಗ್ರಾಹಕನ ಕೈಚಳಕ ಅಂದ್ರೆ ತಪ್ಪಾಗಲ್ಲ. ಮಮ್ಮಕ್ಕನನ್ನು ಕಂಡ ಕೂಲೇ ಛಾಯಾಗ್ರಾಹಕ ಶಾರಿಕ್ ವಯೋಲಿನ್‌ಗೆ ಏನೋ ಒಂದು ಅದ್ಭುತ ಕ್ರಿಯೇಟ್ ಮಾಡಬಹುದು ಎಂದೆನಿಸಿದೆ.
ಕೂಡಲೇ ಆತನಿಗೆ ಸೂಟು, ಬೂಟು ಹಾಕಿ, ಕೈಗೆ ಒಂದು ಐಪಾಡ್ ಕೊಟ್ಟು ಕೆಲವು ಫೋಟೋಗಳನ್ನು ತಸೆರೆಹಿಡಿದರು. ಆ ಫೋಟೋಗಳಲ್ಲಿ ಆತ ಥೇಟ್ ಮಾಡಲ್ ಹಾಗಿ ಕಾಣಿಸಿಕೊಂಡಿದ್ದಾನೆ. ಸೂಟ್ ಮತ್ತು ಬೂಟು ಧರಿಸಿದ ವೃತ್ತಿಪರ ರೂಪದರ್ಶಿಯಂತೆ ಮಿಂಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಛಾಯಾಗ್ರಾಹಕ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಆ ಫೋಟೋಗಳು ಭಾರೀ ಕ್ರೇಜ್ ಹುಟ್ಟು ಹಾಕಿದೆ. ಆ ಫೋಟೋದಲ್ಲಿರುವವರು ಯಾರು ಎಂದು ಬಹಳಷ್ಟು ಜನರಿಗೆ ಆಶ್ಚರ್ಯಚಕಿತರಾಗಿದ್ದಾರೆ. ಅವರನ್ನು ಸಿನಿಮಾ ನಟ ವಿನಾಯಕನ್‌ಗೆ ಹೋಲಿಸತೊಡಗಿದರು. ಆದರೆ, ಮಮ್ಮಿಕ ತನ್ನ ಲುಕ್‌ನಲ್ಲಿನ ಬದಲಾವಣೆಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಛಾಯಾಗ್ರಾಹಕ ಶಾರಿಕ್ ವಯೋಲಿನ್ ಮತ್ತು ಮೇಕಪ್ ಕಲಾವಿದರಾದ ಮಜ್ನಾಸ್, ಆಶಿಕ್ ಫೌದ್ ಮತ್ತು ಶಬೀಬ್ ವಯೋಲಿನ್ ಅವರ ಕೈಚಳಕ ನನ್ನ ಜೀವನವನ್ನು ಬದಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
ನಿತ್ಯ ಕೂಲಿ ಕೆಲಸದಿಂದ ಮಾಡೆಲ್ ಆಗಿ ಬೆಳೆದಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾನೆ. ಸುತ್ತಮುತ್ತಲಿನವರಿಗೆಲ್ಲ ಈ ವ್ಯಕ್ತಿಯ ನೈಜ ಜೀವನವನ್ನು ಕಂಡುಹಿಡಿಯಲು ಆಗಿಲ್ಲ ಅಂತಾರೆ ಛಾಯಾಗ್ರಾಹಕ ಶಾರಿಕ್ ವಯಾಲಿಲ್..