Sports

IPL 2022 ಆಯೋಜಿಸಲು ಪ್ಲಾನ್‌ ಬಿ ರೆಡಿ : ಬಿಸಿಸಿಐ

ಮುಂಬೈ : ಕಳೆದ ಎರಡು ಸೀಸನ್‌ಗಳಿಂದಲೂ ಐಪಿಎಲ್‌ಗೆ ಕೊರೊನಾ ಬೆಂಬಿಡದೆ ಕಾಡ್ತಿದೆ. ಮೊದಲ ಅಲೆ ಮತ್ತು ಎರಡನೇ ಅಲೆಗೆ ತತ್ತರಿಸಿದ ಐಪಿಎಲ್‌ ಈ ಬಾರಿ ಪ್ಲಾನ್‌ ಬಿ ರೆಡಿ ಮಾಡಿಕೊಂಡು ಸಜ್ಜಾಗಿದೆ. ಓಮಿಕ್ರಾನ್‌, ಮೂರನೇ ಅಲೆ ಭಾರತಾದ್ಯಂತ ಹರಡುತ್ತಿದೆ. ದೇಶಾದ್ಯಂತ ಲಕ್ಷಗಟ್ಟಲೆ ಕೇಸ್‌ಗಳು ಬರ್ತಿವೆ. ಎಚ್ಚೆತ್ತ ರಾಜ್ಯ ಸರ್ಕಾರಗಳು ಕಠಿಣ ಕ್ರಮಗಳನ್ನು ಜರುಗಿಸಲು ಮುಂದಾಗಿವರ.

ಏಪ್ರಿಲ್‌ ಹೊತ್ತಿಗೆ ಕೊರೊನಾ ಕಮ್ಮಿ ಆದರೆ ಈ ಬಾರಿಯ ಐಪಿಎಲ್‌ ಭಾರತದಲ್ಲಿಯೇ ನಡೆಯಲಿದೆ. ಒಂದು ವೇಳೆ ಕಮ್ಮಿ ಆಗದಿರುವ ಪಕ್ಷದಲ್ಲಿ ಸಂಪೂರ್ಣ ಟೂರ್ನಿಯನ್ನು ಹೊರದೇಶಕ್ಕೆ ಶಿಫ್ಟ್‌ ಮಾಡುವ ಪ್ಲಾನ್‌ ಅನ್ನು ಸಿದ್ದ ಪಡಿಸಿಕೊಂಡಿದೆ ಬಿಸಿಸಿಐ.

ಮಹಾರಾಷ್ಟ್ರದಲ್ಲಿರುವ ಮೂರು ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸುವ ಸಾಧ್ಯತೆ ಇದೆ. ವಾಂಖೆಡೆ, ಡಿವೈ ಪಾಟೀಲ್ ಸ್ಟೇಡಿಯಂ, ಹಾಗೂ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸುವ ಪ್ಲಾನ್‌ ಮಾಡಿಕೊಂಡಿದೆ  ಬಿಸಿಸಿಐ. ಒಂದು ವೇಳೆ ಸರ್ಕಾರ ಅನುಮತಿ ನೀಡದಿದ್ದರೆ ಸಂಪೂರ್ಣ ಟೂರ್ನಿಯನ್ನು ಹೊರದೇಶಕ್ಕೆ ಶಿಫ್ಟ್‌ ಮಾಡಲಿದ್ದಾರೆ.

ಆದರೆ ಈ ಬಾರಿ ಯುಎಇ ಯಲ್ಲಿ ಪಂದ್ಯವನ್ನು ಆಯೂಜಿಸುವುದಿಲ್ಲ ಎಂಬ ಮಾಹಿತಿ ಲಭ್ಯವಾಗ್ತಿದೆ. ದುಬೈ, ಅಬುದಾಭಿಯಂತಹ ದುಬಾರಿ ನಗರಗಳಲ್ಲಿ ಪಂದ್ಯ ಆಯೋಜಿಸಿದರೆ ಆರ್ಥಿಕ ಲಾಭಕ್ಕೆ ಕತ್ತರಿ ಬೀಳಲಿದೆ ಎಂದು ಬಿಸಿಸಿಐ ಚಿಂತಿಸಿದೆ. ಇದರಿಂದ ಪಂದ್ಯವನ್ನು ಶ್ರೀಲಂಕಾ ಅಥವಾ ದ.ಆಫ್ರಿಕಾಗೆ ಸ್ಥಳಾಂತರಿಸಲು ಯೋಜನೆ ನಡೆಸಿದೆ.

ದ.ಆಫ್ರಿಕಾದಲ್ಲಿ ಸದ್ಯದ ಮಟ್ಟಿಗೆ ಓಮಿಕ್ರಾನ್‌ ಕೇಸ್‌ಗಳು ಹೆಚ್ಚಾಗುತ್ತಲೇ ಇದೆ, ಆದರೆ ಅವರು ಭಾರತ ಮತ್ತು ದ.ಆಫ್ರಿಕಾ ನಡುವಿನ ಪಂದ್ಯಗಳನ್ನು ಆಯೋಜಿಸಿರುವ ರೀತಿಯನ್ನು ಬಿಸಿಸಿಐನ ಇಂಪ್ರೆಸ್‌ ಮಾಡಿದೆ. 2009ರಲ್ಲಿ ಚುನಾವಣೆಯ ಕಾರಣ ಪಂದ್ಯಗಳನ್ನು ದ.ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಕಾದು ನೋಡಬೇಕು.

ಇನ್ನು ಶ್ರೀಲಂಕಾ ಕೂಡ ಇನ್ನೊಂದು ಆಪ್ಷನ್‌ ಆಗಿದೆ. ಕೊರೊನಾ ಕಂಟ್ರೋಲ್‌ ಮಡಿರುವ ಶ್ರೀಲಂಕಾ ಕಳೆದ ಬಾರಿಯೇ ಪತ್ರ ಬರೆದಿತ್ತು. ಈಗ ಬಿಸಿಸಿಐ ಇದನ್ನು ಪರಿಗಣಿಸುವ ಸಾಧ್ಯತೆ ಹೆಚ್ಚಿದೆ.

Share Post