National

ಪ್ರಾಥಮಿಕ ವರದಿಯಲ್ಲಿ ಬಯಲಾಯ್ತು ಗುವಾಹಟಿ ರೈಲಿನ ಅಪಘಾತಕ್ಕೆ ಕಾರಣ

ಪಶ್ಚಿಮ ಬಂಗಾಳ:  ಬಿಕಾನೇರ್-ಗುವಾಹಟಿ ಎಕ್ಸ್‌ಪ್ರೆಸ್‌ ರೈಲು ದುರಂತ ಪ್ರಕರಣದಲ್ಲಿ ರೈಲಿನ ಹನ್ನೆರಡು ಬೋಗಿಗಳು ಹಳಿ ತಪ್ಪಿ ಒಂಭತ್ತು ಜನರು ಸಾವನ್ನಪ್ಪಿ ಮೂವತ್ತಾರು ಮಂದಿ ಗಾಯಗೊಂಡು ಆಸ್ಪತ್ರೆ ಪಾಲಾಗಿರುವ ಘಟನೆ ನಡೆದಿತ್ತು. ಈ ದುರಂತಕ್ಕೆ ರೈಲಿನ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಅಪಘಾತದಲ್ಲಿ ಬೋಗಿಗಳು ಹಳಿ ತಪ್ಪುವುದರ  ಜೊತೆಗೆ ಎರಡು ಬೋಗಿಗಳು ಒಂದರ ಮೇಲೆ ಒಂದು ಹತ್ತಿದ್ದವು. ಇದಕ್ಕೆ ಮುಖ್ಯ ಕಾರಣ  15633 ಬಿಕಾನೆರ್-ಗುವಹಾಟಿ ರೈಲಿನ ಡಬ್ಲ್ಯೂಎಪಿ-4 ಎಂಜಿನ್ನಿನ  ನಾಲ್ಕು ಟ್ರ್ಯಾಕ್ಷನ್ ಮೋಟಾರುಗಳಲ್ಲಿ ಒಂದು ವಿಫಲಗೊಂಡಿದ್ದರಿಂದ ಲೊಕೊ ಪೈಲಟ್​ಗಳು ತುರ್ತು ಬ್ರೇಕ್​ಗಳನ್ನು ಅದುಮಬೇಕಾಯಿತು. ಅದರ ಪರಿಣಾಮವಾಗೇ ವೇಗವಾಗಿ ಚಲಿಸುತ್ತಿದ್ದ ರೈಲಿನ 12 ಬೋಗಿಗಳು ಹಳಿ ತಪ್ಪಿ ಮತ್ತು 2 ಬೋಗಿಗಳು ಒಂದರ ಮೇಲೆ ಮತ್ತೊಂದು ಹತ್ತಿದವು. ರೇಲ್ವೇ ಸುರಕ್ಷತೆ ಕಮೀಶನರ್ ಅವರು ರೈಲು ದುರಂತದ ಬಗ್ಗೆ ಒಂದು ಸಮಗ್ರ ವರದಿಯನ್ನು ಸಲ್ಲಿಸುವಂತೆ ತಜ್ಞರ ತಂಡಕ್ಕೆ ಆದೇಶ ನೀಡಿದ್ದು ಸದರಿ ತಂಡವು ಶೀಘ್ರದಲ್ಲೇ ವರದಿ ಸಲ್ಲಿಸಲಿದೆ ಎಂದು ಹೇಳಲಾಗಿದೆ.

Share Post