National

ಶ್ರೀರಾಮನಿಗಾಇ ಮೋದಿ ವ್ರತ; ಈ 11 ದಿನ ಮೋದಿ ಆಚರಣೆಗಳು ಹೇಗಿರುತ್ತವೆ..?

ನವದೆಹಲಿ; ಅಯೋಧ್ಯೆಯಲ್ಲಿ ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ವ್ರತಾಚರಣೆ ಮಾಡಲಿದ್ದಾರೆ. 11 ದಿನಗಳ ಕಾಲ ಮೋದಿಯವರು ವ್ರತ ಮಾಡಲಿದ್ದಾರೆ. ಈ ವೇಳೆ ಅವರು ಏನೆಲ್ಲಾ ಮಾಡ್ತಾರೆ..? ಯಾವ್ಯಾವ ಆಚರಣೆಗಳಲ್ಲಿ ತೊಡಗಿಕೊಳ್ತಾರೆ ಎಂಬುದರ ವಿವರ ಇಲ್ಲಿದೆ. 

ಮೋದಿ ವ್ರತಾಚರಣೆ ವೇಳೆ ಏನು ಮಾಡ್ತಾರೆ..?

  • ಪ್ರತಿ ದಿನ ಪ್ರಾಣಾಯಾಮ, ಯೋಗ ಮಾಡುತ್ತಾರೆ
  • ಮಿತ ಆಹಾರ ಮಾತ್ರ ಸೇವನೆ ಮಾಡಿ ಬಹುತೇಕ ಉಪವಾಸ ಇರುತ್ತಾರೆ
  • ಬಹುತೇಕ ಸಮಯದಲ್ಲಿ ಭಗವಂತನ ನಾಮ ಸ್ಮರಣೆ ಮಾಡುತ್ತಾರೆ
  • ಸಾಧು, ಸಜ್ಜನರೊಡನೆ ಸತ್ಸಂಗ
  • ಬ್ರಹ್ಮ ಮೂಹೂರ್ತ ಜಾಗರಣೆಯ ಜೊತೆಗೆ ಮುಂಜಾನೆ ದೇವರ ಪ್ರಾರ್ಥನೆ ಮಾಡುತ್ತಾರೆ
Share Post