International

ಭಾರತದಲ್ಲಿ ಡೆಲ್ಟಾದಿಂದ ಸತ್ತವರು 2.40 ಲಕ್ಷ : ವಿಶ್ವಸಂಸ್ಥೆ ವರದಿ

ವಿಶ್ವಸಂಸ್ಥೆ : ವಿಶ್ವ ಸಂಸ್ಥೆಯು ʼವಿಶ್ವ ಆರ್ಥಿಕ ಸ್ಥಿತಿ ಹಾಗೂ ಮುನ್ನೋಟʼ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ವೈರಸ್‌ನ ರೂಪಾಂತರಿ ತಳಿಯಾಗಿದ್ದ ಡೆಲ್ಟಾದಿಂದ ಭಾರತದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿತ್ತು.

ಕಳೆದ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಭಾರತವು ಕೋವಿಡ್‌ ಎರಡನೇ ಅಲೆಗೆ ತುತ್ತಾಗಿತ್ತು. ದಿನಕ್ಕೆ ಲಕ್ಷಗಟ್ಟಲೇ ಕೇಸ್‌ ಬರುತ್ತಿದ್ದ ಕಾರಣ ಬಹುತೇಕ ರಾಜ್ಯಗಳು ಮತ್ತೆ ಲಾಕ್‌ಡೌನ್‌ ಅಸ್ತ್ರ ಪ್ರಯೋಗಿಸಿತ್ತು. ಇದರಿಂದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ಎದುರಾಗಿತ್ತು.

ಈಗ ವಿಶ್ವ ಸಂಸ್ಥೆ ಬಿಡುಗಡೆ ಮಾಡಿರುವ ʼ ವಿಶ್ವ ಆರ್ಥಿಕ ಸ್ಥಿತಿ ಹಾಗೂ ಮುನ್ನೋಟʼ ಎಂಬ ವರದಿಯಲ್ಲಿ,  ಭಾರತದಲ್ಲಿ ಎರಡನೇ ಅವಧಿಯ ಸಮಯದಲ್ಲಿ ಡೆಲ್ಟಾದಿಂದ ಸಾವಿಗೀಡಾದವರ ಸಂಖ್ಯೆ 2.40ಲಕ್ಷಕ್ಕೂ ಹೆಚ್ಚು ಎಂದು ತಿಳಿದು ಬಂದಿದೆ.

ಭಾರತದಲ್ಲಿ ಈಗ ಓಮಿಕ್ರಾನ್‌ ಹರಡುವಿಕೆ ವೇಗ ಪಡೆದಿದೆ. ಸಮುದಾಯಕ್ಕೆ ಹಬ್ಬಿರುವ ಕಾರಣ ಮೂರನೇ ಅಲೆ ಎರಡನೇ ಅಲೆಗಿಂತ ತೀವ್ರವಾಗಿರಲಿದೆ ಎನ್ನಲಾಗ್ತಿದೆ. ಇದರಿಂದ ಭಾರತದ ಆರ್ಥಿಕ ಪರಿಸ್ಥಿತಿಗೆ ಮತ್ತೊಮ್ಮೆ ಪೆಟ್ಟು ಬೀಳುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

Share Post