National

ಕೇಂದ್ರ ಬಜೆಟ್‌ ಮೇಲೆ ಚರ್ಚೆ; ಬಿಜೆಪಿ ಕಾರ್ಯಕರ್ತರ ಜೊತೆ ಮೋದಿ ಸಂವಾದ

ನವದೆಹಲಿ: ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಮೇಲೆ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ಏರ್ಪಡಿಸಲಾಗಿದೆ. ದೆಹಲಿಯ ಅಂಬೇಡ್ಕರ್‌ ಭವನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಆನ್‌ಲೈನ್‌ ಮೂಲಕ ದೇಶದ ಹಲವು ಭಾಗದ ಬಿಜೆಪಿ ಕಾರ್ಯಕರ್ತರು ಈ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ.

ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ದೇಶದ ಸರಿಯಾದ ದಾರಿಯಲ್ಲಿ ಮುನ್ನಡೆಯುತ್ತಿದೆ. ಆರ್ಥಿಕವಾಗಿ ಸಬಲವಾಗುತ್ತ ದೇಶ ಹೆಜ್ಜೆ ಇಡುತ್ತಿದೆ. ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಜೆಟ್‌ ಮಂಡನೆ ಮಾಡಲಾಗಿದೆ ಎಂದು ಹೇಳಿದರು.

ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ಬಜೆಟ್‌ ಜನಪರ ಬಜೆಟ್‌ ಆಗಿದೆ. ಬಜೆಟ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸಲಾಗಿದೆ. ಈ ಯೋಜನೆಗಳು ದೇಶದ ಆರ್ಥಿಕತೆ ಉತ್ತಮವಾಗಲು ಹಾಗೂ ದೇಶದ ಜನಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಕೊರೊನಾದಿಂದಾಗಿ ಇಡೀ ಪ್ರಪಂಚವೇ ನಲುಗಿದೆ. ಭಾರತ ಕೂಡಾ ಕೊರೊನಾ ಸಂಕಷ್ಟವನ್ನು ಎದುರಿಸುತ್ತಿದೆ. ಆದ್ರೆ ಮುಂದೆ ಇಂತಹ ಕಷ್ಟದ ಪರಿಸ್ಥಿತಿ ಇರೋದಿಲ್ಲ. ಆಧುನಿಕ ಭಾರತವನ್ನು ನಿರ್ಮಾಣ ಮಾಡುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ನಾವು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಬಜೆಟ್‌ ದೇಶವನ್ನು ಆಧುನಿಕ ದಿಕ್ಕಿನತ್ತ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ಭಾಷಣದ ಮುಖ್ಯಾಂಶಗಳು

  1. ಕೊರೊನಾ ಬಳಿಕ ಈ ದೇಶ ಸಂಪೂರ್ಣ ಬದಲಾಗಲಿದೆ
  2. ವಿಶ್ವವೇ ಇದೀಗ ಭಾರತದತ್ತ ತಿರುಗಿ ನೋಡುತ್ತಿದೆ
  3. ಆಧುನಿಕ ಭಾರತವನ್ನು ನಾವೆಲ್ಲಾ ನಿರ್ಮಿಸಬೇಕಿದೆ
  4. ಹೊಸ ಸಂಕಲ್ಪಗಳನ್ನು ಮಾಡುವ ಸಮಯ ಇದಾಗಿದೆ
  5. ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳಿವೆ
  6. ಭಾರತದವನ್ನು ವಿಶ್ವದ ಜನರು ನೋಡುವ ದೃಷ್ಟಿ ಬದಲಾಗಿದೆ
  7. 2013-14ರಲ್ಲಿದ್ದ ರಫ್ತಿಗಿಂತ ಈಗ ನಾಲ್ಕು ಲಕ್ಷ ಕೋಟಿ ಹೆಚ್ಚಾಗಿದೆ
  8. ಬಜೆಟ್‌ನಲ್ಲಿ ಬಡವರು ಹಾಗೂ ಮಧ್ಯಮವರ್ಗದವರನ್ನು ಕೇಂದ್ರೀಕರಿಸಲಾಗಿದೆ
  9. ಭಾರತವನ್ನು ಮತ್ತಷ್ಟು ಸದೃಢವಾಗಿ ನೋಡಲು ದೇಶ ಬಯಸುತ್ತಿದೆ
  10. ಆತ್ಮನಿರ್ಭರ ಭಾರತ ಸಂಕಲ್ಪದೊಂದಿಗೆ ದೇಶ ಮುನ್ನಡೆಯುತ್ತಿದೆ
  11. ಈ ಬಜೆಟ್‌ ಬಡವರು, ಯುವಕರು ಹಾಗೂ ಕೃಷಿಕರಿಗೆ ಹೆಚ್ಚು ಅನುಕೂಲ ಕಲ್ಪಿಸಲಿದೆ
  12. ನದಿ ನೀರು ವ್ಯರ್ಥವಾಗದಂತೆ ತಡೆಯಲು ನದಿ ಜೋಡಣೆಗೆ ಒತ್ತು ನೀಡಲಾಗಿದೆ
  13. ಗ್ರಾಮೀಣ ಪ್ರದೇಶದಲ್ಲಿ ಎಷ್ಟೋ ಜನಕ್ಕೆ ಕುಡಿಯುವ ನೀರು ಸಿಗುತ್ತಿರಲಿಲ್ಲ
  14. ಈಗ ಗ್ರಾಮೀಣ ಜನರ ಬಡವರ ಮನೆಗಳಿಗೆ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದೆ
  15. ಹಿಂದಿನ ಸರ್ಕಾರಗಳು ಮಾಡಿದ ತಪ್ಪುಗಳನ್ನು ನಾವು ಸರಿ ಮಾಡುತ್ತಿದ್ದೇವೆ
  16. ನಾಲ್ಕು ಕೋಟಿ ಮನೆಗಳಿಗೆ ನಲ್ಲಿಗಳ ಮೂಲಕ ನೀರು ಒದಗಿಸುತ್ತೇವೆ
  17. ಭಾರತ ದೇಶ ಬಡತನದಿಂದ ಮುಕ್ತವಾಗಬೇಕು. ಇದೇ ನಮ್ಮ ಗುರಿ
  18. ಭಾರತದ ಆರ್ಥಿಕ ವ್ಯವಸ್ಥೆಯ ಗಾತ್ರ ಹೆಚ್ಚಾಗಿದೆ
  19. ಬಡತನದ ನಿರ್ಮೂಲನೆಗೆ ನಮ್ಮ ಸರ್ಕಾರ ಕಂಕಣಬದ್ಧವಾಗಿದೆ
  20. ಬಡವರಿಗೆ 80 ಲಕ್ಷ ಮನೆಗಳು ನಿರ್ಮಾಣವಾಗಲಿವೆ
  21. ಈಗಾಗಲೇ 9 ಕೋಟಿ ಗ್ರಾಮೀಣ ಮನೆಗಳಿಗೆ ನೀರು ಒದಗಿಸುತ್ತಿದ್ದೇವೆ
  22. ನಿನ್ನೆ ಮಂಡಿಸಿದ ಬಜೆಟ್‌ನಿಂದ ದೇಶದ ಮೂಲಸೌಕರ್ಯ ಹೆಚ್ಚಿಸಲಿದೆ
  23. ದೇಶದ ಪ್ರವಾಸಿತಾಣಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತದೆ
  24. ನಾವು ಮಹಿಳೆಯರನ್ನು ಮನೆ ಮಾಲೀಕರನ್ನಾಗಿ ಮಾಡುತ್ತಿದ್ದೇವೆ
  25. ಆರ್ಥಿಕ ಸೂಚ್ಯಂಕ ಏರಿಯಾಗುತ್ತಿರುವ ದೇಶಗಳ ಪಟ್ಟಿಯಲ್ಲಿ ಭಾರತ ಕೂಡಾ ಇದೆ
  26. ಬಡವರಿಗೆ ಮನೆ ನೀಡಲು ಮುಂದಾಗಿದ್ದೇವೆ. ಬಡವರಿಗೆ ಸೂರು ಸಿಕ್ಕರೆ ಅವರ ಜೀವನ ಬದಲಾಗುತ್ತದೆ
  27. ಏಳು ವರ್ಷಗಳಲ್ಲಿ ಮೂರು ಕೋಟಿ ಜನರಿಗೆ ಮನೆ ಕಟ್ಟಿಸಿಕೊಟ್ಟಿದ್ದೇವೆ
  28. ವೆಬ್ರೆಂಟ್‌ ಯೋಜನೆ ಜಾರಿ ಮಾಡಲಾಗುತ್ತಿದ್ದು, ಇದ್ರಿಂದ ಪ್ರತಿ ಹಳ್ಳಿಗೂ ಅನುಕೂಲವಾಗಲಿದೆ
  29. ಬಡವರಿಗೆ ಮನೆ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ
  30. ದೇಶದ ಗಡಿಗಳಲ್ಲಿರುವ ಗ್ರಾಮಗಳನ್ನು ಉದ್ಧಾರ ಮಾಡಬೇಕೆನ್ನುವುದು ನಮ್ಮ ಗುರಿ
  31. ಪ್ರವಾಸಿಗರು ಹಾಗೂ ತೀರ್ಥಯಾತ್ರೆ ಮಾಡುವವರಿಗೆ ಅನುಕೂಲ ಕಲ್ಪಿಸಲಿದ್ದೇವೆ
  32. ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಹೆಚ್ಚು ಮಾಡಲು ಕ್ರಮ ಕೈಗೊಳ್ಳುತ್ತೇವೆ
  33. ಏಳು ವರ್ಷಗಳಲ್ಲಿ ದೇಶದ ಜಿಡಿಪಿ ದುಪ್ಪಟ್ಟಾಗಿದೆ
  34. ಗಡಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿದರೆ, ಗಡಿ ಜನರಿಗೆ ಅನುಕೂಲವಾಗುತ್ತದೆ
  35. ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಿದರೆ ದೇಶದ ಆದಾಯ ಹೆಚ್ಚಾಗಲಿದೆ
  36. ಕೃಷಿ ಕ್ಷೇತ್ರದ ಅಭಿವೃದ್ಧಿ ನಮ್ಮ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ
  37. ರಾಸಾಯನಿಕ ಮುಕ್ತ ಹಾಗೂ ನೈಸರ್ಗಿಕ ಕೃಷಿ ನಾವು ಹೆಚ್ಚು ಒತ್ತು ನೀಡಿದ್ದೇವೆ
  38. ಔಷಧಿ ಸಿಂಪಡಣೆಗಾಗಿ ಡ್ರೋನ್‌ ಬಳಕೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ
  39. ಜನ್‌ಧನ್‌ ಖಾತೆಗಳಿಂದ ಬಡ ಜನರಿಗೆ ಸಾಕಷ್ಟು ಅನುಕೂಲವಾಗಿದೆ
  40. ದೇಶದ ಕೃಷಿ ಕ್ಷೇತ್ರವನ್ನು ಹೈಟೆಕ್‌ ಮಾಡಲಾಗುತ್ತಿದೆ, ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಲಾಗಿದೆ
  41. ಜೈ ಜವಾನ್‌, ಜೈ ಕಿಸಾನ್‌ ಘೋಷಣೆಯನ್ನು ನಾವು ಸಕಾರ ಮಾಡಲು ಹೊರಟಿದ್ದೇವೆ
  42. ರೈತನಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನಮ್ಮ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ
  43. ರೈತರಿಗೆ ಸೋಲಾರ್‌ ಪಂಪ್‌ಸೆಟ್‌ಗಳನ್ನು ನೀಡುವುದಕ್ಕೆ, ಸೋಲಾರ್‌ ಪಂಪ್‌ ಬಳಸುವುದಕ್ಕೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತದೆ
  44. ಪರ್ವತ ಮಾಲಾ ಯೋಜನೆಯಿಂದ ದೇಶದ ಜನಕ್ಕೆ ಸಾಕಷ್ಟು ಅನುಕೂಲವಾಗಲಿದೆ
  45. ನ್ಯಾನೋ ರಾಸಾಯನಿಕ ಗೊಬ್ಬರಗಳ ಪೂರೈಕೆ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ
  46. ಇದರ ಜೊತೆಜೊತೆಗೆ ನೈಸರ್ಗಿಕ ಕೃಷಿಗೆ ನಾವು ಹೆಚ್ಚು ಒತ್ತು ನೀಡುತ್ತೇವೆ, ರೈತರನ್ನು ಇದ್ದಾಗಿ ಪ್ರೋತ್ಸಾಹಿಸುತ್ತೇವೆ
  47. ರೈತರಿಗೆ ವೈಜ್ಞಾನಿಕ ಬೆಂಬಲ ಬೆಲೆ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ
  48. 68 ಸಾವಿರ ಕೋಟಿ ರೂಪಾಯಿಯನ್ನು ರೈತರ ಖಾತೆಗಳಿಗೆ ನೇರವಾಗಿ ಜಮೆ ಮಾಡಲಾಗಿದೆ
  49. ಪ್ರಧಾನಮಂತ್ರಿ ಗ್ರಾಮ್‌ ಸಡಕ್‌ ಯೋಜನೆಗೆ ಅನುದಾನ ಹೆಚ್ಚಿಸಲಾಗಿದೆ
  50. ಈ ಬಜೆಟ್‌ನಲ್ಲಿ ಸ್ಟಾರ್ಟಪ್‌ಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ
  51. ನಾಲ್ಕು ರಾಜ್ಯಗಳಲ್ಲಿ ಸಾವಯನ ಕೃಷಿ ಕಾರಿಡಾರ್‌ ನಿರ್ಮಾಣ ಮಾಡಲಾಗುತ್ತದೆ
  52. ನಮ್ಮ ಸರ್ಕಾರ ಎಂದಿಗೂ ರೈತರ ಪರವಾಗಿ ನಿಲ್ಲಲಿದೆ, ಅವರ ಪರವಾಗಿ ಕೆಲಸ ಮಾಡಲಿದೆ
  53. ಖೇಲೋ ಇಂಡಿಯಾ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ

 

 

LIVE: Parliament Budget Session | Live Coverage | NewsX – YouTube

Share Post