CrimeLifestyleNational

5 ತಿಂಗಳ ಮಗುವನ್ನು ಕೊಂದ ಅದೇ ಮನೆಯ ಸಾಕು ನಾಯಿ!

ವಿಕಾರಾಬಾದ್‌; ಮನೆಯ ಕಾವಲಿಗಾಗಿ ನಾಯಿಯನ್ನು ಸಾಕಲಾಗುತ್ತದೆ.. ನಾಯಿಗಿಂತ ನಿಯತ್ತಿನ ಪ್ರಾಣಿ ಯಾವುದೂ ಇಲ್ಲ ಎಂದು ಎಲ್ಲರೂ ಹೇಳುತ್ತಾರೆ.. ಆದ್ರೆ ಈಲ್ಲಿ ನಾವು ಹೇಳ್ತಾರೋ ಇರೋ ನಾಯಿಗೆ ನಿಯತ್ತಿಲ್ಲದಂತೆ ಕಾಣುತ್ತಿದೆ.. ಯಾಕಂದ್ರೆ, ಅನ್ನ ಹಾಕಿದ ಮನೆ ಮಾಲೀಕನ ಮಗುವನ್ನೇ ಅದು ಕಚ್ಚಿ ಸಾಯಿಸಿದೆ..

ತೆಲಂಗಾಣದ ವಿಕಾರಾಬಾದ್‌ ಜಿಲ್ಲೆಯ ತಾಂಡೂರಿನ ಬಸವೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.. ದತ್ತು ಹಾಗೂ ಲಾವಣ್ಯ ದಂಪತಿ ಒಂದು ನಾಯಿಯನ್ನು ಸಾಕಿಕೊಂಡಿದ್ದರು.. ಇವರಿಗೆ ಐದು ತಿಂಗಳ ಗಂಡು ಮಗು ಕೂಡಾ ಇತ್ತು.. ಮಗುವನ್ನು ಮನೆಯ ಆವರಣದಲ್ಲಿ ಬಿಟ್ಟು ಅವರು ತಮ್ಮ ಕೆಲಸದಲ್ಲಿ ನಿರತರಾಗಿದ್ದರು.. ಈ ವೇಳೆ ಸಾಕು ನಾಯಿ ಇದ್ದಕ್ಕಿದ್ದಂತೆ ಮಗುವಿನ ಮೇಲೆ ದಾಳಿ ಮಾಡಿದೆ.. ಮಗುವನ್ನು ಕಚ್ಚಿ ದಾರುಣವಾಗಿ ಸಾಯಿಸಿದೆ..

ಮಗುವಿನ ಕಿರುಚಾಟ ಕೇಳಿ ಪೋಷಕರು ಅಲ್ಲಿಗೆ ಧಾವಿಸಿದ್ದರು. ಆದ್ರೆ ಅಷ್ಟರಲ್ಲಾಗದೇ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು.. ಇದರಿಂದ ಅವರ ಗೋಳಾಟ ಮುಗಿಲುಮುಟ್ಟಿತ್ತು.. ಇದೇ ಸಿಟ್ಟಿನಲ್ಲಿ ಮನೆಯವರು, ಸ್ಥಳೀಯರು, ಸಂಬಂಧಿಕರೆಲ್ಲಾ ಸೇರಿಕೊಂಡು ನಾಯಿಯನ್ನೂ ಸಾಯಿಸಿ ಸೇಡು ತೀರಿಸಿಕೊಂಡಿದ್ದಾರೆ..

 

Share Post