ಕಲ್ಲಿದ್ದಲು ಗಣಿ ಕುಸಿತ ಪ್ರಕರಣ – 13 ಮಂದಿ ಬಲಿ
ರಾಂಚಿ : ಅಕ್ರಮ ಕಲ್ಲಿದ್ದಲು ಗಣಿ ನಡೆಯುತ್ತಿದ್ದ ಜಾಗದಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು. ಈಗ 13 ಮಂದಿ ಸಾವನ್ನಪ್ಪಿದ್ದು ಇನ್ನು ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. ಈ ಅಕ್ರಮ ಗಣಿಯಲ್ಲಿ ಪುರುಷರು, ಮಹಿಳೆಯರ ಜೊತೆ ಹೆಚ್ಚು ಮಕ್ಕಳು ಕೂಡ ಬರುತ್ತಿದ್ದರು ಎಂದು ಹೇಳಲಾಗ್ತಿದೆ.
ಈ ಅಕ್ರಮ ಗಣಿ ಜಾರ್ಖಂಡ್ ರಾಜ್ಯದ ಧನ್‌ಬಾದ್‌ನ ನಿರ್ಸಾ ಬ್ಲಾಕ್‌ನ ಇಸಿಎಲ್ ಮುಗ್ಮಾ ಪ್ರದೇಶದಲ್ಲಿದೆ. ಗಣಿಗಾರಿಕೆಗೆ ಬಳಸುತ್ತಿದ್ದ ಉಪಕರಣ 20 ಅಡಿಯಿಂದ ಬಿದ್ದ ಕಾರಣ ಈ ಅವಘಡ ಸಂಭವಿಸಿದೆ. ಗಣಿ ಕೊರೆದಿದ್ದರಿಂದ ಕುಸಿದಿದೆ. ಸಾಕಷ್ಟು ಜನರು ಇದರಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿತ್ತು.
13 ಮಂದಿ ಸಾವನ್ನಪ್ಪಿದ್ದು ಈಗ ಇನ್ನು 10 ಕ್ಕೂ ಹೆಚ್ಚು ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗ್ತಿದೆ. ಘಟನೆ ನಡೆದ ತಕ್ಷಣ ಕೆಲವರನ್ನು ರಕ್ಷಿಸಲಾಗಿದೆ. ಕೆಲವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವಶೇಷಗಳಡಿ ಸಿಕ್ಕಿಬಿದ್ದಿರುವವರನ್ನು ರಕ್ಷಣಾ ಪಡೆಗಳು ಹೊರತೆಗೆಯಲು ಪ್ರಯತ್ನ ಪಡುತ್ತಿದ್ದಾರೆ.