CrimeDistrictsHealth

ಟ್ರೆಕ್ಕಿಂಗ್‌ಗೆ ಹೋಗಿದ್ದ ಯುವಕನಿಗೆ ಹೃದಯಾಘಾತ; ಬೆಟ್ಟದ ಮೇಲೇ ಸಾವು!

ಮಡಿಕೇರಿ; ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿವೆ. ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನ್ನಪ್ಪುವವರು ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಅದೇ ರೀತಿ ಮಡಿಕೇರಿಯಲ್ಲಿ ಟ್ರೆಕ್ಕಿಂಗ್‌ ಬಂದಿದ್ದ ಯುವಕನೊಬ್ಬ ಎದೆನೋವು ಕಾಣಿಸಿಕೊಂಡು ಬೆಟ್ಟದ ಮೇಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.

ಹರಿಯಾಣದ ಮೂಲದ 25 ವರ್ಷದ ಜತಿನ್‌ ಕುಮಾರ್‌ ಸಾವನ್ನಪ್ಪಿರುವ ಯುವಕ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಈತ ಮಡಿಕೇರಿ ಬಳಿ ತಡಿಯಂಡಮೋಳು ಬೆಟ್ಟಕ್ಕೆ ಟ್ರೆಕ್ಕಿಂಗ್‌ ಬಂದಿದ್ದ. ಸ್ನೇಹಿತರೊಂದಿಗೆ ಜತಿನ್‌ ಗೆ ಬೆಟ್ಟ ಹತ್ತುವಾಗ ಎದೆನೋವು ಕಾಣಿಸಿಕೊಂಡಿದೆ.

ಕೆಲಹೊತ್ತು ವಿಶ್ರಾಂತಿ ಪಡೆದರೂ ಕೂಡಾ ಸರಿಯಾಗಿಲ್ಲ. ಆತ ಇದ್ದಕ್ಕಿಂತೆ ಕುಸಿದುಬಿದ್ದಿದ್ದಾನೆ. ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೂಡಲೇ ಆತನ ಜೊತೆ ಬಂದಿದ್ದ ಸ್ನೇಹಿತರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬೆಟ್ಟದ ತುದಿಯಿಂದ ಪೊಲೀಸರು ಹರಸಾಹಸಪಟ್ಟು ಮೃತದೇಹವನ್ನು ಕೆಳಗೆ ತಂದಿದ್ದಾರೆ.

 

Share Post