CinemaNational

ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದರು; ನಟಿ ಚಾರ್ಮಿಳಾ ಆರೋಪ

ತಿರುವನಂತಪುರಂ; ನನ್ನೊಂದಿಗೆ ನಟರು, ನಿರ್ದೇಶಕರು, ನಿರ್ಮಾಪಕರು ಸೇರಿ 28 ಮಂದಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಚಾರ್ಮಿಳಾ ಆರೋಪ ಮಾಡಿದ್ದು, ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ.. ಕೇರಳದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಹೇಮಾ ಸಮಿತಿ ವರದಿ ನೀಡಿದ ಮೇಲೆ ಹಲವಾರು ನಟಿಯರು ತಮಗಾದ ಕಹಿ ಘಟನೆಗಳನ್ನು ವಿವರಿಸಿದ್ದಾರೆ.. ಈಗ ಚಾರ್ಮಿಳಾ ಕೂಡಾ ಆರೋಪ ಮಾಡಿದ್ದಾರೆ.

ಅರ್ಜುನನ್ ಪಿಳ್ಳೈ ಅಂಚು ಮಕ್ಕಳುಂ ಚಿತ್ರ 1997ರಲ್ಲಿ ತೆರೆಕಂಡಿತ್ತು.. ಇದ್ರ ನಿರ್ಮಾಪಕ ಎಂಪಿ ಮೋಹನನ್ ಮತ್ತು ಅವರ ಸ್ನೇಹಿತರು ತನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದರು ಚಾರ್ಮಿಳಾ ಆರೋಪ ಮಾಡಿದ್ದಾರೆ..

   ನನ್ನ ಮೇಲೆ ಎಲ್ಲರು ಸೇರಿಕೊಂಡು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದರು.. ಆದ್ರೆ ತಪ್ಪಿಸಿಕೊಂಡು ಬಂದೆ. ಅವರು ನನ್ನ ಸೀರೆಯನ್ನು ಎಳೆಯಲು ಪ್ರಯತ್ನಿಸಿದರು ಎಂದು ಚಾರ್ಮಿಳಾ ಹೇಳಿದ್ದಾರೆ..

 

Share Post