ಪ್ರೇಯಸಿ ಜೊತೆ ಸಿಕ್ಕಿಬಿದ್ದ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್; ರೆಡ್‌ಹ್ಯಾಂಡಾಗಿ ಹಿಡಿದ ಪತ್ನಿ ರಂಪಾಟ..!
ರಾಯಚೂರು; ಪತ್ನಿ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ ಪತಿ ಹೆಡ್ ಕಾನ್ಸ್‌ಟೇಬಲ್.. ಮೊದಲಿಗೆ ಸಂಸಾರ ಏನೋ ಚೆನ್ನಾಗಿಯೇ ಇತ್ತು.. ಆದ್ರೆ ಇವರಿಬ್ಬರ ನಡುವೆ ಮತ್ತೊಬ್ಬಳು ಎಂಟ್ರಿ ಕೊಟ್ಟಿದ್ದಾಳೆ.. ಪತ್ನಿಗೆ ಹೇಗೋ ಅನುಮಾನ ಬಂದಿದೆ.. ಕಾದು ಕುಳಿತಿದ್ದಾಳೆ.. ಕೊನೆಗೂ ಬೇರೊಬ್ಬಳ ಜೊತೆ ಗಂಡ ಇರೋದನ್ನು ತಿಳಿದು ರೆಡ್‌ಹ್ಯಾಂಡಾಗಿ ಹಿಡಿದಿದ್ದಾಳೆ.. ರಾಯಚೂರು ಜಿಲ್ಲೆ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ಶೀಘ್ರದಲ್ಲೇ ಅಂಗನವಾಡಿ ಕಾರ್ಯಕರ್ತೆಯ ಗೌರವಧನ ಹೆಚ್ಚಳ; ಹೆಬ್ಬಾಳ್ಕರ್
ಹೆಡ್‌ಕಾನ್ಸ್‌ಟೇಬಲ್ ರಾಜ್ ಮಹಮದ್ ಈಗಾಗಲೇ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರನ್ನು ಮದುವೆಯಾಗಿದ್ದಾರೆ.. ಆದ್ರೆ ರಾಜ್ ಮಹಮದ್‌ಗೆ ಮತ್ತೊಬ್ಬಳ ಜೊತೆ ಸ್ನೇಹವಾಗಿದೆ.. ಈ ಕಾರಣದಿಂದಾಗಿ ಪತ್ನಿಯನ್ನು ನೆಗ್ಲೆಕ್ಟ್ ಮಾಡಲು ಶುರು ಮಾಡಿದ್ದಾನೆ.. ಇದ್ರಿಂದಾಗಿ ಜಗಳಳಾಗಿ ನಾಲ್ಕು ವರ್ಷದಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸಲು ಶುರು ಮಾಡಿದ್ದರು.. ಈ ನಡುವೆ ರಾಜ್ ಮಹಮದ್ ಬೇರೊಬ್ಬ ಮಹಿಳೆಯನ್ನು ಮನೆಗೆ ಕರೆದುಕೊಂಡು ಬರುತ್ತಿದ್ದಾನೆ ಅನ್ನೋ ವಿಷಯ ಗೊತ್ತಾಗಿದೆ.. ಆಕೆ ಬರುವುದನ್ನೇ ಕಾದು ಕುಳಿತಿದ್ದ ಪತ್ನಿ, ಇಬ್ಬರೂ ಮನೆ ಸೇರಿದ ಮೇಲೆ ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ.. ಗಂಡನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ..
ಇದನ್ನೂ ಓದಿ; ಬಾಸ್..ಬಾಸ್.. ಅಂತಿದ್ದರು, ಯಾರು ಬಾಸ್ ನನಗೆ ಗೊತ್ತಿಲ್ಲ; ಡಿ.ಕೆ.ಶಿವಕುಮಾರ್
ಸಿರವಾರದ ತಮ್ಮ ಮನೆಯಲ್ಲೇ ಹೆಡ್ ಕಾನ್ಸ್‌ಸ್ಟೇಬಲ್ ರಾಜ್ ಮಹಮದ್ ಸಿಕ್ಕಿಬಿದ್ದಿದ್ದಾನೆ.. ಇದೇ ಪ್ರೇಯಸಿಗಾಗಿ ನನ್ನನ್ನು ದೂರ ಮಾಡಿದ್ದ ಎಂದು ಗಂಡನ ವಿರುದ್ಧ ಪ್ಯಾರಿ ಬೇಗಂ ಆರೋಪ ಮಾಡಿದ್ದಾರೆ..