LifestyleNational

ವರಲಕ್ಷ್ಮೀ ವ್ರತದ ಪೂಜಾ ಸಮಯ ಏನು..?; ವ್ರತದ ವಿಧಾನ ಹೇಗೆ..?

ಬೆಂಗಳೂರು; ವರಲಕ್ಷ್ಮೀ ವ್ರತ.. ಇದು ಮಹಿಳೆಯರಿಗೆ ಸೌಭಾಗ್ಯವನ್ನು ತರಿಸುವ ಪೂಜೆ.. ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಮನೆಗಳಲ್ಲೂ ವೈಭವದಿಂದ ಈ ಲಕ್ಷ್ಮೀ ವ್ರತವನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ.. ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಲಕ್ಷ್ಮೀ ವ್ರತ ಆಚರಣೆ ಮಾಡಲಾಗುತ್ತದೆ.. ಹಿಂದೂ ಧರ್ಮದಲ್ಲಿ ವರಲಕ್ಷ್ಮೀ ವ್ರತಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಎಲ್ಲರ ಮನೆಯಲ್ಲೂ ಶ್ರದ್ಧಾಭಕ್ತಿಯಿಂದ ವ್ರತಾಚರಣೆ ಮಾಡಲಾಗುತ್ತದೆ..
ಲಕ್ಷ್ಮೀದೇವಿಯ ಆಶೀರ್ವಾದ ಹಾಗೂ ಮನೆಯ ಸಂಪತ್ತು ಈ ವ್ರತಾಚರಣೆಯಿಂದ ಬರುತ್ತದೆ ಎಂಬ ನಂಬಿಕೆ ಇದೆ.. ದೀರ್ಘಾಯುಷ್ಯ, ಮಕ್ಕಳ ಉಜ್ವಲ ಭವಿಷ್ಯ ಮತ್ತು ಕುಟುಂಬದ ಸಂತೋಷದ ಜೀವನಕ್ಕಾಗಿ ಮಹಿಳೆಯರು ವರಲಕ್ಷ್ಮಿ ವ್ರತವನ್ನು ಆಚರಣೆ ಮಾಡುತ್ತಾರೆ..

ಇದನ್ನೂ ಓದಿ; ಹೆಚ್ಚು ಪ್ಯಾರಾಸಿಟಮಾಲ್‌ ಸೇವಿಸಿದರೆ ಲಿವರ್‌ ಡ್ಯಾಮೇಜ್‌!

ವರಲಕ್ಷ್ಮಿ ವ್ರತ ಆಚರಣೆಯ ಸಮಯ ಏನು..?
===========================
– ಈ ವರ್ಷದ ಆಗಸ್ಟ್‌ 16ರ ಶುಕ್ರವಾರ ಲಕ್ಷ್ಮೀ ವ್ರತಾಚರಣೆ ನಡೆಸಲಾಗುತ್ತದೆ
– ಸಿಂಹ ಲಗ್ನ ಪೂಜೆ ಮುಹೂರ್ತ; 05:57 AM – 08:14 AM (ಅವಧಿ–2 ಗಂಟೆ 17 ನಿಮಿಷ)
– ವೃಶ್ಚಿಕ ಪೂಜೆ ಮುಹೂರ್ತ; 12:50 PM – 03:08 PM (ಅವಧಿ-2 ಗಂಟೆ 19 ನಿಮಿಷ)
– ಕುಂಭ ಲಗ್ನ ಪೂಜೆ ಮುಹೂರ್ತ; 06:55 PM – 08:22 PM (ಅವಧಿ-1 ಗಂಟೆ 27 ನಿಮಿಷ)
– ವೃಷಭ ಲಗ್ನ ಪೂಜೆ ಮುಹೂರ್ತ; 11:22 PM – 01:18 PM ಆಗಸ್ಟ್ 17 (ಅವಧಿ–1 ಗಂಟೆ 56 ನಿಮಿಷ)

ಇದನ್ನೂ ಓದಿ; ಲ್ಯಾಂಡಿಂಗ್‌ಗೂ ಮುಂಚೆ ಪತನಗೊಂಡ ವಿಮಾನ; 70 ಮಂದಿ ದುರ್ಮರಣ!

ವರಲಕ್ಷ್ಮೀ ವ್ರತದ ಪೂಜಾ ವಿಧಾನ ಹೇಗಿರಬೇಕು..?;
ವರಲಕ್ಷ್ಮೀ ವ್ರತದ ದಿನ ಬೆಳಗ್ಗೆ ಬೇಗ ಎದ್ದು ಮನೆಯನ್ನು ಶುಚಿಗೊಳಿಸಬೇಕು.. ಸ್ನಾನ ಮಾಡಿ, ಮನೆಯಲ್ಲಿನ ಪೂಜಾ ಕೊಠಡಿ ಹಾಗೂ ವ್ರತ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಬೇಕು. ಅದಕ್ಕೂ ಮುಂಚೆ ಮನೆ ಮುಂದಿನ ಆವರಣ ಸ್ವಚ್ಛಗೊಳಿಸಬೇಕು.. ನಂತರ ವರಲಕ್ಷ್ಮೀ ದೇವಿಯ ಸ್ಮರಣೆ ಮಾಡುತ್ತಾ ಉಪವಾಸ ಪ್ರತಿಜ್ಞೆ ಮಾಡಬೇಕು. ನಂತರ ಮರದ ಪೀಠವನ್ನು ತೆಗೆದುಕೊಂಡು ಅದರ ಮೇಲೆ ಶುದ್ಧವಾದ ಕೆಂಪು ಬಟ್ಟೆಯನ್ನು ಹರಡಿ ಅದರ ಮೇಲೆ ಲಕ್ಷ್ಮಿ ಮತ್ತು ಗಣಪತಿಯ ವಿಗ್ರಹ ಅಥವಾ ಚಿತ್ರವನ್ನು ಇರಿಸಬೇಕು. ಲಕ್ಷ್ಮಿ ದೇವಿಯ ವಿಗ್ರಹದ ಬಳಿ ಸ್ವಲ್ಪ ಅಕ್ಕಿಯನ್ನು ಇರಿಸಿ ಮತ್ತು ಅದರ ಮೇಲೆ ನೀರು ತುಂಬಿದ ಕಲಶವನ್ನು ಇಡಬೇಕು.

ಇದನ್ನೂ ಓದಿ; ನಗರಸಭೆ ಅಧಿಕಾರಿ ಮನೆಯಲ್ಲಿ ಬರೋಬ್ಬರಿ 3 ಕೋಟಿ ನಗದು!

ಗಣೇಶ ಹಾಗೂ ಲಕ್ಷ್ಮಿ ಮೂರ್ತಿಗಳ ಮುಂದೆ ತುಪ್ಪದಿಂದ ದೀಪಾರಾಧನೆ ಮಾಡಬೇಕು. ಧೂಪದೀಪಗಳನ್ನು ಹಚ್ಚಿ, ಗಣಪತಿಗೆ ಮೊದಲು ಪೂಜೆ ಮಾಡಬೇಕು. ಹೂವು, ದರ್ಭೆ, ತೆಂಗಿನಕಾಯಿ, ಶ್ರೀಗಂಧ, ಅರಿಶಿನ, ಕುಂಕುಮ, ಅಕ್ಷತೆ, ಹೂವಿನ ಮಾಲೆ ಇತ್ಯಾದಿಗಳನ್ನು ಅರ್ಪಿಸಬೇಕು. ಇದಾದ ನಂತರ ವರಲಕ್ಷ್ಮಿ ದೇವಿ ಪೂಜೆ ಮಾಡಿ, ಅಮ್ಮನಿಗೆ ಹದಿನಾರು ಆಭರಣಗಳ ಜೊತೆಗೆ ಅರಿಶಿನ, ಕುಂಕುಮ, ಅಕ್ಷತೆ ಮತ್ತು ಹೂವಿನ ಮಾಲೆಯನ್ನು ಅರ್ಪಿಸಬೇಕು. ಒಂಬತ್ತು ಬಗೆಯ ಅಥವಾ ಐದು ಬಗೆಯ ಆಹಾರ ಪದಾರ್ಥಗಳನ್ನು ಅಮ್ಮನಿಗೆ ಅರ್ಪಿಸಬೇಕು.. ಪುಳಿಯೋಗರೆ, ಪಾಯಸ, ಕಡಲೆಯಿಂದ ಮಾಡಿದ ಪಲ್ಯ ಮುಂತಾದವನ್ನು ದೇವಿಗೆ ಅರ್ಪಿಸಬೇಕು. ಲಕ್ಷ್ಮೀದೇವಿಯ ಅಷ್ಟೋತ್ತರ ಶತನಾಮಾವಳಿ ಮಂತ್ರಗಳೊಂದಿಗೆ ಪೂಜೆಯನ್ನು ಆರಂಭಿಸಬೇಕು. ಪೂಜೆಯ ಸಮಯದಲ್ಲಿ ವರಲಕ್ಷ್ಮೀ ವ್ರತದ ಕಥರ ಪಠಿಸಬೇಕು. ಕೊನೆಗೆ ದೇವಿಗೆ ಆರತಿಯನ್ನು ಮಾಡಿ ಪೂಜೆ ಮುಗಿಸಿ, ಎಲ್ಲರಿಗೂ ಪ್ರಸಾದವನ್ನು ವಿತರಿಸಬೇಕು. ಮುತ್ತೈದೆಯರಿಗೆ ಅರಿಶಿನ ಕುಂಕುಮ ಮತ್ತು ಮೆಂತ್ಯ ತಾಂಬೂಲದೊಂದಿಗೆ ಬಡಿಸುವುದು.

ಇದನ್ನೂ ಓದಿ; ಬೆಕ್ಕು ಕಚ್ಚಿ ಶಿವಮೊಗ್ಗದಲ್ಲಿ ಮಹಿಳೆ ಸಾವು!; ಬೆಕ್ಕು ಸಾಕೋ ಮುಂಚೆ ಹುಷಾರ್‌!

ಲಕ್ಷ್ಮೀ ವ್ರತ ಮಾಡುವುದರಿಂದ ಏನೆಲ್ಲಾ ಪ್ರಾಪ್ತಿ..?;
ವರಲಕ್ಷ್ಮೀ ವ್ರತಾಚರಣೆ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.. ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ಕೂಡಾ ನೆಲೆಸುತ್ತದೆ.. ವಿವಾಹಿತ ಸ್ರ್ತೀಯದಲ್ಲಿ ಸುಖ-ಶಾಂತಿ ಸಿಗುತ್ತದೆ.. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ, ಮಕ್ಕಳ ಆರೋಗ್ಯ ವೃದ್ಧಿಯಾಗುತ್ತದೆ.. ವರಲಕ್ಷ್ಮೀ ವ್ರತಾಚರಣೆಯಿಂದ ದಾರಿದ್ರ್ಯ ತೊಲಗಿ ಮನೆಗೆ ಲಕ್ಷ್ಮೀ ಕಾಲಿಡುತ್ತಾಳೆ.. ಯಾವಾಗಲೂ ಸುಖಶಾಂತಿ ನಿಮ್ಮದಾಗಲಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ಮನೆಗೆ ಹೋಗೋ ಕಾಲ ಬಂದಿದೆ; ಯಡಿಯೂರಪ್ಪ

Share Post