ನಗರಸಭೆ ಅಧಿಕಾರಿ ಮನೆಯಲ್ಲಿ ಬರೋಬ್ಬರಿ 3 ಕೋಟಿ ನಗದು!
ನಿಜಾಮಾಬಾದ್; ಎಸಿಬಿ ಅಧಿಕಾರಿಗಳು ನಿಜಾಮಾಬಾದ್ ನಗರಸಭೆ ಕಂದಾಯ ಅಧೀಕ್ಷನ ಮನೆ ಮೇಲೆ ರೇಡ್ ಮಾಡಿದ್ದು, ಭಾರಿ ಪ್ರಮಾಣದ ನಗದು ಪತ್ತೆಯಾಗಿದೆ.. ಕಂತೆ ಕಂತೆ 500 ರೂಪಾಯಿ ನೋಟುಗಳು ಸಿಕ್ಕಿದ್ದು, ನೋಟು ಎಣಿಸುವ ಯಂತ್ರಗಳನ್ನು ತರಿಸಿ ಗಂಟೆಗಟ್ಟಲೆ ಎಣಿಸಲಾಗಿದೆ.. ಅಲ್ಲಿ ಬರೋಬ್ಬರಿ 2 ಕೋಟಿ 93 ಲಕ್ಷದ 81 ಸಾವಿರ ರೂಪಾಯಿ ಸಿಕ್ಕಿದೆ.
ಇದನ್ನೂ ಓದಿ; ಬೆಕ್ಕು ಕಚ್ಚಿ ಶಿವಮೊಗ್ಗದಲ್ಲಿ ಮಹಿಳೆ ಸಾವು!; ಬೆಕ್ಕು ಸಾಕೋ ಮುಂಚೆ ಹುಷಾರ್!
ನಿಜಾಮಾಬಾದ್ ನಗರಸಭೆ ಕಚೇರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ದೂರು ಕೇಳಿಬಂದಿತ್ತು.. ಹೀಗಾಗಿ ಕಂದಾಯ ಅಧೀಕ್ಷಕ ದಾಸರಿ ನರೇಂದರ್ ಅವರ ಮನೆಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.. ಈ ವೇಳೆ ಕೋಟಿ ಕೋಟಿ ನಗದು ಪತ್ತೆಯಾಗಿದೆ.. ಜೊತೆಗೆ ಅರ್ಧ ಕೆಜಿ ಚಿನ್ನಾಭರಣ ಸೇರಿದಂತೆ ಒಟ್ಟು 6 ಕೋಟಿ 7 ಲಕ್ಷ ರೂಪಾಯಿ ಬೆಲೆಬಾಳುವ ಆಸ್ತಿ ಪತ್ತೆಯಾಗಿದೆ..