CrimeInternational

ಲ್ಯಾಂಡಿಂಗ್‌ಗೂ ಮುಂಚೆ ಪತನಗೊಂಡ ವಿಮಾನ; 70 ಮಂದಿ ದುರ್ಮರಣ!

ಬ್ರೆಜಿಲ್;‌ ಕಳೆದ ತಿಂಗಳು ನೇಪಾಳದಲ್ಲಿ ವಿಮಾನ ಪತನಗೊಂಡು 19 ಮಂದಿ ಸಾವನ್ನಪ್ಪಿದ್ದರು.. ಹೀಗಿರುವಾಗಲೇ ಬ್ರೆಜಿಲ್‌ನಲ್ಲಿ ದೊಡ್ಡ ವಿಮಾನ ದುರಂತ ನಡೆದಿದೆ.. ರೀಸನಲ್‌ ಟರ್ಬೊಪ್ರೊಪ್‌ ವಿಮಾನ ಪತನಗೊಂಡಿದ್ದು, 62 ಮಂದಿ ಪ್ರಯಾಣಿಕರು ಸೇರಿ ವಿಮಾನದಲ್ಲಿದ್ದ ಎಲ್ಲಾ 70 ಮಂದಿಯೂ ಸಾವನ್ನಪ್ಪಿದ್ದಾರೆ.. ವಿಮಾನ ಪತನವಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದರಿಂದ ಈ ದುರಂತ ನಡೆದಿದೆ.

ಇದನ್ನೂ ಓದಿ; ನಗರಸಭೆ ಅಧಿಕಾರಿ ಮನೆಯಲ್ಲಿ ಬರೋಬ್ಬರಿ 3 ಕೋಟಿ ನಗದು!

ಬ್ರೆಜಿಲ್‌ನ ಸಾವೋ ಪೌಲೋದಲ್ಲಿ ಈ ದರ್ಘಟನೆ ನಡೆದಿದೆ.. ವಿಮಾನ ಪರಾನಾ ರಾಜ್ಯದ ಕ್ಯಾಸ್ಕಾವೆಲ್‌ನಿಂದ ಸಾವೊ ಪಾಲೊದಲ್ಲಿನ ಗೌರುಲ್ಹೋಸ್‌ ಲ್ಯಾಂಡ್‌ ಆಗಬೇಕಿತ್ತು.. ಲ್ಯಾಂಡಿಂಗ್‌ ಕೆಲ ಕ್ಷಣಗಳ ಮುಂಚೆ ಹೀಗೆ ಇದ್ದಕ್ಕಿದ್ದಂತೆ ಪತನಗೊಂಡಿದೆ.. ಪಕ್ಕದಲ್ಲೇ ಜನವಸತಿ ಪ್ರದೇಶವಿತ್ತು.. ಅಲ್ಲೇನಾದರೂ ಬಿದ್ದಿದ್ದರೆ ಇನ್ನೂ ದೊಡ್ಡ ಅನಾಹುತವಾಗುತ್ತಿತ್ತು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಈ ಕಾಗೆಗಳು ಮಾತನಾಡುತ್ತದೆ, ಹಾಡುಗಳನ್ನೂ ಹಾಡುತ್ತವೆ!

 

Share Post