ಸಿದ್ದರಾಮಯ್ಯ ಮನೆಗೆ ಹೋಗೋ ಕಾಲ ಬಂದಿದೆ; ಯಡಿಯೂರಪ್ಪ
ಮೈಸೂರು; ಬಿಜೆಪಿ – ಜೆಡಿಎಸ್ ಪಾದಯಾತ್ರೆ 7ನೆ ದಿನಕ್ಕೆ ಕಾಲಿಟ್ಟಿದೆ.. ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಸಿದ್ದರಾಮಯ್ಯ ಮನೆಗೆ ಹೋಗೋ ಕಾಲ ಹತ್ತಿರವಾಗಿದೆ.. ಅದಕ್ಕೆ ಅವರು ಮಾನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ..
ನಿವೃತ್ತಿ ಪಡೆಯುವಾಗ ಇನ್ನೊಬ್ಬರ ಬಗ್ಗೆ ಮಾತನಾಡುವುದು ಸಹಜ.. ಯಾರು ನಿವೃತ್ತಿ ಪಡೆಯುತ್ತಾರೆ ಅನ್ನೋದು ಶೀಘ್ರವೆ ಗೊತ್ತಾಗುತ್ತೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು..
ಪೊಕ್ಸೋ ಕೇಸ್‌ನಲ್ಲಿ ನಾಳೆ ಕೋರ್ಟ್‌ನಲ್ಲಿ ತೀರ್ಮಾನ ಆದಾಗ ಎಲ್ಲಾ ಬಹಿರಂಗವಾಗುತ್ತೆ. ಅಲ್ಲಿಯವರೆಗೆ ನಾನು ಏನು ಮಾತಾಡಲ್ಲ ಎಂದೂ ಸಿದ್ದರಾಮಯ್ಯ ಹೇಳಿಕೆಗೆ ಯಡಿಯೂರಪ್ಪ ಟಾಂಗ್ ಕೊಟ್ಟಿದ್ದಾರೆ..