ಬೆಕ್ಕು ಕಚ್ಚಿ ಶಿವಮೊಗ್ಗದಲ್ಲಿ ಮಹಿಳೆ ಸಾವು!; ಬೆಕ್ಕು ಸಾಕೋ ಮುಂಚೆ ಹುಷಾರ್!
ಶಿವಮೊಗ್ಗ; ಸಾಕು ಬೆಕ್ಕೊಂದು ಕಚ್ಚಿದ್ದರಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ತರಲಘಟ್ಟದಲ್ಲಿ ನಡೆದಿದೆ… ಎರಡು ತಿಂಗಳ ಹಿಂದೆ ಬೆಕ್ಕು ಮಹಿಳೆಗೆ ಕಚ್ಚಿತ್ತು.. ಆದ್ರೆ ಆಕೆ ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ.. ಹೀಗಾಗಿ ರೇಬೀಸ್ ಕಾಯಿಲೆಗೆ ತುತ್ತಾಗಿ ಮಹಿಳೆ ಸಾವನ್ನಪ್ಪಿದ್ದಾಳೆ..
ಇದನ್ನೂ ಓದಿ; ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ!
ಮಹಿಳೆ ಗಂಗೀಬಾಯಿ ಎಂಬುವವರೇ ಸಾವನ್ನಪ್ಪಿದವರು.. ಅವರ ಕಾಲಿಗೆ ಬೆಕ್ಕು ಕಚ್ಚಿತ್ತು.. ಹೀಗಾಗಿ ಅವರು ಐದು ಇಂಜೆಕ್ಷನ್ ಪಡೆಯಬೇಕಿತ್ತು.. ಆದ್ರೆ ಒಂದು ಇಂಜೆಕ್ಷನ್ ಮಾತ್ರ ಪಡೆದು ಸುಮ್ಮನಾಗಿದ್ದರು.. ಚೇತರಿಕೆ ಕಂಡಿದ್ದರಿಂದ ಇಂಜೆಕ್ಷನ್ ಪಡೆಯದೆ ಸುಮ್ಮನಾಗಿದ್ದಳು.. ಆದ್ರೆ ಕೃಷಿ ಚುವಟಿಕೆಯಲ್ಲಿ ತೊಡಗಿಸಿಕೊಂಡ ಕಾರಣ ಕಚ್ಚಿ ಜಾಗದಲ್ಲಿ ನೀರು ತಾಗಿದೆ.. ಇದರಿಂದಾಗಿ ರೇಬೀಸ್ ಕಾಯಿಲೆಗೆ ಮಹಿಳೆ ತುತ್ತಾಗಿದ್ದಾಳೆ.. ಇದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ..