International

qatar; ಕತಾರ್‌ನಲ್ಲಿ ಮರಣದಂಡನೆ; ಭಾರತೀಯರನ್ನು ಪಾರು ಮಾಡಿದ್ದು ಶಾರುಖ್ ಖಾನ್‌ ಅಂತೆ ಹೌದಾ..?

ನವದೆಹಲಿ; ಭಾರತೀಯ ನೌಕಾಪಡೆಯ ಎಂಟು ಮಾಜಿ ನಾವಿಕರಿಗೆ ಕತಾರ್‌ ಸರ್ಕಾರ ಮರಣ ದಂಡನೆ ವಿಧಿಸಿತ್ತು.. ಆದ್ರೆ ರಾಜತಾಂತ್ರಿಕ ಹೋರಾಟದ ನಂತರ 18 ತಿಂಗಳಿಗೆ ಎಲ್ಲರನ್ನೂ ಬಚಾವ್‌ ಮಾಡಲಾಗಿದೆ. ಎಂಟು ಮಂದಿಯಲ್ಲಿ ಏಳು ಮಂದಿ ಈಗ ಭಾರತಕ್ಕೆ ಬಂದಿದ್ದಾರೆ.. ಆದ್ರೆ. ಇವರನ್ನು ಬಿಡುಗಡೆ ಮಾಡಲು ಬಾಲಿವುಡ್‌ ನಟ ಶಾರುಖ್‌ ಖಾನ್‌ ಮಧ್ಯಸ್ಥಿಕೆ ವಹಿಸಿದ್ದರೇ..? ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಮಾಡಿರುವ ಟ್ವೀಟ್‌.

ವಿವಾದಾತ್ಮಕ ಟ್ವೀಟ್‌ ಮಾಡಿದ ಸುಬ್ರಮಣಿಯನ್‌ ಸ್ವಾಮಿ;

ವಿವಾದಾತ್ಮಕ ಟ್ವೀಟ್‌ ಮಾಡಿದ ಸುಬ್ರಮಣಿಯನ್‌ ಸ್ವಾಮಿ; ಸುಬ್ರಮಣಿಯನ್‌ ಸ್ವಾಮಿಯವರು ಯಾವಾಗಲೂ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಸ್ವಪಕ್ಷದ ವಿರುದ್ಧವೇ ಆಗಾಗ ಮಾತನಾಡುತ್ತಿರುತ್ತಾರೆ. ಇದೀಗ ಅವರು ಮಾಡಿರುವ ಟ್ವೀಟ್‌ ವಿವಾದಕ್ಕೆ ಈಡಾಗಿದೆ. ಯಾಕಂದ್ರೆ, ಕತಾರ್‌ನಲ್ಲಿ ಮರಣದಂಡನೆ ಈಡಾಗಿದ್ದ ನೌಕಾಪಡೆಯ ಮಾಜಿ ನಾವಿಕರನ್ನು ಬಿಡಿಸಿಕೊಂಡು ಬರಲು ಭಾರತ ಸರ್ಕಾರ ಸಾಕಷ್ಟು ಶ್ರಮವಹಿಸಿತ್ತು. ಬರೋಬ್ಬರಿ 18 ತಿಂಗಳ ಕಾಲ ರಾಜತಾಂತ್ರಿಕ ಹೋರಾಟ ನಡೆಸಿತ್ತು. ಆದ್ರೆ ಸುಬ್ರಮಣಿಯನ್‌ ಸ್ವಾಮಿ, ಇವರನ್ನು ಬಿಡುಗಡೆ ಮಾಡಲು ನಟ ಶಾರುಖ್‌ ಖಾನ್‌ ಮಧ್ಯಸ್ಥಿಕೆ ವಹಿಸಿದ್ದರು ಎಂದು ಟ್ವೀಟ್‌ ಮಾಡಿ ವಿವಾದಕ್ಕೀಡಾಗಿದ್ದಾರೆ.

ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ನಲ್ಲಿ ಏನಿದೆ..?;

ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌ನಲ್ಲಿ ಏನಿದೆ..?; ಕತಾರ್‌ ಭೆಟಿ ನೀಡುತ್ತಿರುವ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದರು.. ಅದಕ್ಕೆ ರಿಪ್ಲೈ ಕೊಟ್ಟಿರುವ ಸುಬ್ರಮಣಿಯನ್‌ ಸ್ವಾಮಿ, ಕತಾರ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದ ಮಾಜಿ ನೌಕಾಪಡೆಯ ಅಧಿಕಾರಿಗಳ ಬಿಡುಗಡೆಗೆ ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ ವಿಫಲವಾಗಿತ್ತು. ಆಗ ಈ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸುವಂತೆ ಬಾಲಿವುಡ್ ನಟ ಶಾರುಖ್‌ ಖಾನ್ ಅವರಿಗೆ ಮನವಿ ಮಾಡಿದ್ದರು. ನಟ ಶಾರುಖ್‌ ಖಾನ್ ಅವರು ಮಧ್ಯಪ್ರವೇಶ ಮಾಡಿದ್ದರಿಂದ ನೌಕಾಪಡೆಯ ಮಾಜಿ ಅಧಿಕಾರಿಗಳ ಬಿಡುಗಡೆಯಾಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಕತಾರ್‌ ಪ್ರವಾಸಕ್ಕೆ ಹೋಗುವಾಗ ಶಾರುಖ್ ಖಾನ್ ಅವರನ್ನು ಕೂಡಾ ಕರೆದುಕೊಂಡು ಹೋಗಬೇಕು ಎಂದು ಸುಬ್ರಮಣಿಯನ್‌ ಸ್ವಾಮಿ ರಿಪ್ಲೈ ಕೊಟ್ಟಿದ್ದರು.

ವಿವಾದಕ್ಕೆ ತೆರೆ ಎಳೆದ ನಟ ಶಾರುಖ್‌ ಖಾನ್‌;

ವಿವಾದಕ್ಕೆ ತೆರೆ ಎಳೆದ ನಟ ಶಾರುಖ್‌ ಖಾನ್‌; ಸುಬ್ರಮಣಿಯನ್‌ಸ್ವಾಮಿ ಟ್ವೀಟ್‌ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ ನಟ ಶಾರುಖ್‌ ಖಾನ್‌ ಸ್ಪಷ್ಟನೆ ಕೊಟ್ಟಿದ್ದಾರೆ. ಕತಾರ್‌ ಜೈಲಿನಿಂದ ಬಿಡುಗಡೆಯಾದ ಮಾಜಿ ನಾವಿಕರ ವಿಚಾರದಲ್ಲಿ ನನ್ನ ಪಾತ್ರ ಏನೇನೂ ಇಲ್ಲ. ನಾನು ಮಧ್ಯಸ್ಥಿಕ ವಹಿಸಿದ್ದೇನೆ ಅನ್ನೋದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ಈ ಬಗ್ಗೆ ಶಾರುಖ್‌ ಖಾನ್‌ ಕಚೇರಿಯಿಂಧ ಅಧಿಕೃತ ಹೇಳಿಕೆ ಕೂಡಾ ರಿಲೀಸ್‌ ಮಾಡಲಾಗಿದೆ.

Share Post