Cinema

ಸ್ಮಗ್ಲರ್‌ ಸಿನಿಮಾ ಮಾಡಿ ಸಮಾಜಕ್ಕೆ ಏನು ಸಂದೇಶ ಕೊಡ್ತೀರಿ: ಲೇಖಕ ಗರಂ

ಹೈದರಾಬಾದ್:‌   ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ರನ್ನು ಐಕಾನ್ ಸ್ಟಾರ್ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದ ಚಿತ್ರ ಪುಷ್ಪ. ಬನ್ನಿ ಕೆರಿಯರ್ ನಲ್ಲಿ ಬಿಗ್ಗ್ ಬ್ಲಾಕ್ ಬಸ್ಟರ್ ಎನಿಸಿಕೊಂಡ ಪುಷ್ಪ ಚಿತ್ರದ ಎರಡನೇ ಭಾಗ ಈಗ ತಯಾರಾಗುತ್ತಿದೆ ಎಂದು ತಿಳಿದು ಬಂದಿದೆ. ಅದೇ ವೇಳೆ .. ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕ ನಟನಾಗಿ ರಕ್ತ ಚಂದನ ಸ್ಮಗ್ಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ  ತೆಲುಗು ಸಾಹಿತ್ಯ ಭವಿಷ್ಯವಾಣಿಯ ಲೇಖಕ ಗರಿಕಪತಿ ನರಸಿಂಹರಾವ್ ಆಕ್ರೋಶ ವ್ಯಕ್ತಪಡಿಸಿದರು.

ಪುಷ್ಪ ಸಿನಿಮಾದಲ್ಲಿ ಸ್ಮಗ್ಲರ್ ಒಬ್ಬನನ್ನು ಹೀರೋ ಮಾಡಿ ನಾಯಕ ಮತ್ತು ನಿರ್ದೇಶಕ ಸಮಾಜಕ್ಕೆ ಯಾವ ಸಂದೇಶ ಕೊಡಲು ಬಯಸುತ್ತೀರಿ? ದಾಕ್ಕೋ ದಾಕ್ಕೋ ಮೇಕಾ ಹಾಡಿನ ಬಗ್ಗೆ ಕೂಡ ವ್ಯಂಗ್ಯವಾಡಿರುವ ಅವರು, ಈ ಹಾಡಿನ ನಿರ್ದೇಶಕ ಸುಕುಮಾರ್ ಈ ಸೃಷ್ಟಿಯಲ್ಲಿ ಯಾವುದೇ ತಪ್ಪಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.. ಇಡೀ ಸಿನಿಮಾದಲ್ಲಿ ಕೆಟ್ಟದ್ದನ್ನ ತೋರಿಸಿ ಕೊನೆಯ 5 ನಿಮಿಷದಲ್ಲಿ ಒಳ್ಳೆಯದನ್ನು ತೋರಿಸುತ್ತೇವೆ ಅಂದ್ರೆ ಹೇಗೆ?ಇದರ ಜೊತೆಗೆ ಪುಷ್ಪ 2 ತೆಗೆಯಲು ರೆಡಿಯಾಗಿದ್ದಾರೆ. ನೀವು ತೆಗೆಯುವ ಮುನ್ನ ಸಮಾಜ ಹಾಳಾಗಬೇಕಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲ ಆತ ಕಳ್ಳಸಾಗಣೆದಾರ ಅದರ ಜೊತೆಗೆ ʻತಗ್ಗೆದೆಲೆʼ ಎಂಬ ಡೈಲಾಗ್‌ ಬೇರೆ ಇದೆ.  ಈ ಸಂಭಾಷಣೆಯಿಂದ ಸಮಾಜದಲ್ಲಿ ಕ್ರೈಂ, ದೌರ್ಜನ್ಯಗಳು ಹೆಚ್ಚಾಗುತ್ತಿವೆ.ಇದಕ್ಕೆ ನಾಯಕ ಮತ್ತು ನಿರ್ದೇಶಕರೇ ಹೊಣೆಯಾಗಬೇಕು. ಗರಿಕಪತಿಯವರ ಕಾಮೆಂಟ್‌ಗಳು ಈಗ ತೆಲುಗು ಇಂಡಸ್ಟ್ರಿಯಲ್ಲಿ ಹಾಟ್ ಟಾಪಿಕ್ ಆಗಿವೆ.. ಸಾಮಾಜಿಕ ಜಾಲತಾಣಗಳಲ್ಲಿ ಅವರ ಪ್ರಶ್ನೆಗಳು ಸಖತ್‌ ವೈರಲ್‌ ಆಗಿವೆ.

Share Post