LifestyleNational

176 Feet Hanuman Statue; ರಾಜಾನಗರದಲ್ಲಿ ವಿಶ್ವದ ಅತಿ ಎತ್ತರ ಹನುಮಾನ್‌ ಪ್ರತಿಮೆ!

ಆಂಧ್ರಪ್ರದೇಶ; ಆಂಧ್ರಪ್ರದೇಶದಲ್ಲಿ ವಿಶ್ವದ ಅತಿ ಎತ್ತರದ ಹನುಮಾನ್ ಪ್ರತಿಮೆ ತಲೆ ಎತ್ತಲಿದೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಾನಗರದಲ್ಲಿ ಈ ಬೃಹತ್‌ ಆಂಜನೇಯ ಮೂರ್ತಿ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿದೆ. ಶ್ರೀಕಾಕುಳಂ ಜಿಲ್ಲೆಯಲ್ಲಿ ಕೂಡಾ ಬೃಹತ್‌ ಆಂಜನೇಯನ ವಿಗ್ರಹ ಸ್ಥಾಪಿಸಲಾಗಿತ್ತು. ಇದೀಗ ಅದಕ್ಕಿಂತ ದೊಡ್ಡ ಆಂಜನೇಯನ ವಿಗ್ರಹ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. (anjaneya statue)

ಶಂಕು ಸ್ಥಾಪನೆ ನೆರವೇರಿಸಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ (ganapati sachidananda)

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಂಜನೇಯನ ಬೃಹತ್ ಮೂರ್ತಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇಲ್ಲಿ ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ 178 ಅಡಿ ಎತ್ತರದ ಹನುಮಾನ್ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ. ಮಹಾವೀರ ಹನುಮಾನ್ ಟ್ರಸ್ಟ್ ಈ ಬೃಹತ್ ಪ್ರತಿಮೆ ಸ್ಥಾಪನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆದರೆ ಪ್ರಸ್ತುತ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ ಕೂಡಾ ಆಂಧ್ರಪ್ರದೇಶದಲ್ಲಿಯೇ ಇದೆ.

ಆಂಧ್ರಪ್ರದೇಶದಲ್ಲೇ ಇದೆ ವಿಶ್ವದ ಅತಿದೊಡ್ಡ ವಿಗ್ರಹ

ಪ್ರಸ್ತುತ ವಿಶ್ವದ ಅತಿ ಎತ್ತರದ ಹನುಮಂತನ ಪ್ರತಿಮೆ ಕೂಡಾ ಆಂಧ್ರಪ್ರದೇಶದಲ್ಲಿಯೇ ಇದೆ. ಶ್ರೀಕಾಕುಳಂ ಜಿಲ್ಲೆಯ ಮಂಡಪಂ ಗ್ರಾಮದಲ್ಲಿ ವಂಶಧಾರಾ ನದಿಯ ದಡದಲ್ಲಿ 176 ಅಡಿ ಎತ್ತರದ ಆಂಜನೇಯನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದಕ್ಕೂ ಎತ್ತರದ ಆಂಜನೇಯನ ವಿಗ್ರಹ ಸ್ಥಾಪನೆಗೆ ಸಿದ್ಧತೆಗೆ ನಡೆದಿದೆ. ಇಂದಿನಿಂದ ಕಾಮಗಾರಿ ಶುರುವಾಗಿದೆ.

ಶ್ರೀಕಾಕುಳಂ ಜಿಲ್ಲೆಗಿಂತ ದೊಡ್ಡ ಪ್ರತಿಮೆಯನ್ನು ರಾಜಾನಗರದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಬೃಹತ್ ಪ್ರತಿಮೆಗೆ ಶಂಕುಸ್ಥಾಪನೆ ನೆರವೇರಿಸಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿದ್ದಾರೆ. ಪ್ರತಿಮೆ ಸ್ಥಾಪನೆಯ ನಂತರ ರಾಜಾನಗರ ಆಧ್ಯಾತ್ಮಿಕ ಕೇಂದ್ರದ ವಿಳಾಸವಾಗಲಿದೆ. ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ಸಾಧಕನಾದ ಆಂಜನೇಯ ಸ್ವಾಮಿಯ ಕೃಪೆ ಇರಬೇಕು ಎಂದು ಸಚ್ಚಿದಾನಂದ ಸ್ವಾಮೀಜಿ ಹೇಳಿದರು. ಹನುಮಂತನನ್ನು ಪೂಜಿಸುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ ಈ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಆದರೆ, ಜೈ ಶ್ರೀಕಾಂತ್ ಚಾರಿ ನೇತೃತ್ವದ ಹನುಮಾನ್ ಪ್ರತಿಮೆ ಸಮಿತಿ ಶ್ರೀಕಾಕುಳಂ ಜಿಲ್ಲೆಯಲ್ಲಿ ಬೃಹತ್ ಹನುಮಾನ್ ಪ್ರತಿಮೆಯನ್ನು ಸ್ಥಾಪಿಸಿದೆ. ಈ ಪ್ರತಿಮೆಯ ಮೂಲಕ ಯುವಕರಲ್ಲಿ ಹಿಂದೂ ಧರ್ಮ ಪ್ರಚಾರ ಮಾಡುವ ಗುರಿ ಹೊಂದಲಾಗಿದೆ ಎಂದು ಸಮಿತಿಯು ಅಂದು ಘೋಷಿಸಿತು. ಇತ್ತೀಚೆಗಷ್ಟೇ ಪೂರ್ವ ಗೋದಾವರಿ ಜಿಲ್ಲೆಯಲ್ಲೂ ಮತ್ತೊಂದು ಪ್ರತಿಮೆ ಸ್ಥಾಪನೆಯಾಗುತ್ತಿದೆ. ವಿಶ್ವದ ಅತಿ ಎತ್ತರದ ಎರಡೂ ಹನುಮಾನ್ ವಿಗ್ರಹಗಳನ್ನು ಆಂದ್ರಪ್ರದೇಶದಲ್ಲೇ ಇರೋದು ವಿಶೇಷ.

ಕರ್ನಾಟಕದಲ್ಲೂ ಇನ್ನೂ ದೊಡ್ಡ ಪ್ರತಿಮೆ ಸ್ಥಾಪನೆಗೆ ಪ್ರಯತ್ನ

ಕರ್ನಾಟಕದಲ್ಲಿ 215 ಅಡಿ ಎತ್ತರದ ಆಂಜನೇಯನ ಪ್ರತಿಮೆ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿವೆ. ಕರ್ನಾಟಕದಲ್ಲಿ ಅಂದುಕೊಂಡು ದೊಡ್ಡ ಆಂಜನೇಯನ ಪ್ರತಿಮೆ ಸ್ಥಾಪನೆಯಾದರೆ ಆಂಧ್ರಪ್ರದೇಶದ ದಾಖಲೆಯನ್ನು ಮುರಿಯಲಿದೆ.

Share Post