CinemaHealth

ಮೆಟಲ್‌ ಮೈಮೇಲಿದ್ರೂ ಹೇಗೆ ಸ್ಕ್ಯಾನ್‌ ಮಾಡಿದ್ರು..?; ಜಗ್ಗೇಶ್‌ ಆಸ್ಪತ್ರೆ ಫೋಟೋಸ್‌ ಫುಲ್‌ ಟ್ರೋಲ್‌

ಬೆಂಗಳೂರು; ಕರ್ನಾಟಕ ಬಂದ್‌ಗೆ ಚಿತ್ರರಂಗ ಬೆಂಬಲ ಕೊಟ್ಟಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಪ್ರತಿಭಟನಾ ಧರಣಿ ನಡೆಸಿತ್ತು. ಶಿವರಾಜ್‌ ಕುಮಾರ್‌ ಅವರು ಇದರ ನೇತೃತ್ವ ವಹಿಸಿದ್ದರು. ಆದ್ರೆ ಇದರಲ್ಲಿ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್‌ ಭಾಗಿಯಾಗಿರಲಿಲ್ಲ. ಈ ನಡುವೆ, ಸ್ಕ್ಯಾನಿಂಗ್‌ ಮಾಡಿಸಿಕೊಳ್ಳುತ್ತಿರುವ ಜಗ್ಗೇಶ್‌ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಈ ಫೋಟೋ ಸಾಕಷ್ಟು ಟ್ರೋಲ್‌ಗೆ ಒಳಗಾಗಿದೆ.

ಪತ್ನಿಯ ಜೊತೆ ಪ್ರವಾಸದಲ್ಲಿದ್ದ ಜಗ್ಗೇಶ್‌ಗೆ ವಿಪರೀತ ಬೆನ್ನುನೋವು ಬಂದಿತ್ತು. ಎಲ್‌೪ಎಲ್‌೫ ಸಮಸ್ಯೆಯಾಗಿದ್ದರಿಂದ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ. ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಹೀಗಾಗಿ ಜಗ್ಗೇಶ್‌ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ ಎಂದು ಸುದ್ದಿಯಾಗಿತ್ತು.

ಆದ್ರೆ ಇದರ ಜೊತೆ ಹಾಕಿದ್ದ ಫೋಟೋ ಈಗ ಟ್ರೋಲ್‌ಗೆ ಒಳಗಾಗಿದೆ. ಜಗ್ಗೇಶ್‌ ಅವರು ಸ್ಕ್ಯಾನಿಂಗ್‌ ಮಷಿನ್‌ನಲ್ಲಿ ಮಲಗಿರುವ ಫೋಟೋ ಅದಾಗಿದೆ. ಸಾಮಾನ್ಯವಾಗಿ ಬೆನ್ನುಹುರಿ ಸಮಸ್ಯೆ ಇದ್ದರೆ, ಸಿಟಿ ಸ್ಕ್ಯಾನ್‌ ಅಥವಾ ಎಂಆರ್‌ಐ ಸ್ಕ್ಯಾನ್‌ ಮಾಡಲಾಗುತ್ತದೆ. ಈ ಸ್ಕ್ಯಾನ್‌ ಮಾಡಬೇಕಾದರೆ, ಮೆಟಲ್‌ ವಸ್ತುಗಳು ಯಾವುವೂ ಮೈಮೇಲೆ ಇರಬಾರದು. ಆದ್ರೆ ಮಷಿನ್‌ ಒಳಗೆ ಜಗ್ಗೇಶ್‌ ಮಲಗಿದ್ದು, ಅವರ ಕೈಯಲ್ಲಿ ಉಂಗುರ ಹಾಗೂ ಮಿವಿಯಲ್ಲಿ ಓಲೆ ಹಾಗೆಯೇ ಇದೆ. ಇದು ಹೇಗೆ ಸಾಧ್ಯ ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ಇನ್ನು ಸಿಟಿ ಸ್ಕ್ಯಾನ್‌ ಅಥವಾ ಎಂಆರ್‌ಐ ಸ್ಕ್ಯಾನ್‌ ಮಾಡುವಾಗ ಹಾಕಿರುವ ಬಟ್ಟೆ ತೆಗೆದು ಅವರೇ ಕೊಡುವ ಗೌನ್‌ ಹಾಕಿಕೊಳ್ಳಬೇಕು. ಆದ್ರೆ ಜಗ್ಗೇಶ್‌ ಅದ್ಹೇಗೆ ಅವರದೇ ಬಟ್ಟೆಯಲ್ಲಿ ಸ್ಕ್ಯಾನಿಂಗ್‌ ಮಾಡಿಸಿಕೊಂಡರು ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನು ಸ್ಕ್ಯಾನಿಂಗ್‌ ಮಷಿನ್‌ನಲ್ಲಿ ಮೊದಲು ತಲೆ ಒಳಹೋಗಬೇಕು. ನೀವು ಕಾಲು ಮೊದಲು ಒಳಗಿಟ್ಟಿದ್ದೀರಿ. ಇದು ಎಂತಹ ಸ್ಕ್ಯಾನಿಂಗ್‌ ಮಷಿನ್‌ ಎಂದೂ ಕೆಲವರು ಲೇವಡಿ ಮಾಡಿದ್ದಾರೆ.

 

Share Post