ಮೊರಾರ್ಜಿ ದೇಸಾಯಿ ವಸತಿ ನಿಲಯ ಮಕ್ಕಳಿಗೆ ಕೊರೊನಾ
ಕೋಲಾರ: ಕೊರೊನಾ ಮಹಾಮಾರಿ ಬೆಂಬಿಡದ ಭೂತವಾಗಿದೆ. ಈಗಾಗಲೇ ಈ ವೈರಸ್‌ಗೆ ಬಲಿಯಾದವರ ಸಂಖ್ಯೆಯೆಷ್ಟೋ ಲೆಕ್ಕಕ್ಕಿಲ್ಲ. ಈ ನಡುವೆ ಈ ಕೊರೊನಾ ಮೂರನೇ ಅಲೆ ತಾಂಡವವಾಡ್ತಿದೆ. ಈ ಹಿನ್ನೆಲೆಯಲ್ಲಿ ಕೋಲಾರದ ವಸತಿ ಶಾಲೆಯ ೧೦ ವಿದ್ಯಾರ್ಥಿಗಳಿಗೆ ಕೊರೊನಾ ವಕ್ಕರಿಸಿದೆ. ಮೊರಾರ್ಜಿ ಶಾಲೆಯಲ್ಲಿರುವ ೧೦ ವಿದ್ಯಾರ್ಥಿಗಳಲ್ಲಿ ಕೋವಿಡ್ ಪತ್ತೆಯಾಗಿದ್ದು, ವಿದ್ಯಾರ್ಥಿಗಳನ್ನ ವಸತಿ ಶಾಲೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಯಾಜಲಹಳ್ಳಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯನ್ನು ಕಂಟೋನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಲಾಗ್ತಿದೆ.
ಕಾಫಿತೋಟದ ೨೩ ಮಂದಿಗೆ ಕೊರೊನಾ
ತೋಟದಲ್ಲಿ ಕೆಲಸ ಮಾಡುವ ೨೩ ಮಂದಿ ಕಾರ್ಮಿಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹನಬಾಳು ಗ್ರಾಮದಲ್ಲಿ ಕೆಲಸ ಮಅಡುವ ೨೩ ಮಂದಿ ಕಾರ್ಮಿಕರಿಗೆ ಸೋಂಕು ತಗುಲಿದೆ. ತೋಟದಲ್ಲಿ ಕೆಲಸ ಮಾಡುವವರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು. ಕಳೆದ ವಾರವಷ್ಟೇ ಇಬ್ಬರು ಅವರ ಊರಿಗೆ ಹೋಗಿ ಬಂದಿದ್ರು ಎನ್ನಲಾಗಿದೆ. ಕಾರ್ಮಿಕರ ಗಂಟಲು ದ್ರವವನ್ನು ಜಿನೋಮಿಕ್ ಸೀಕ್ವೆನ್ಸ್‌ಗಾಗಿ ಬೆಂಗಳೂರಿಗೆ ಸ್ಯಾಂಪಲ್ಸ್ ಕಳುಹಿಸಲಾಗಿದೆ. ಇನ್ನು ಸ್ಥಳಕ್ಕೆ ಡಿಎಚ್‌ಒ ಸತೀಶ್ ಕುಮಾರ್ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.