InternationalLifestyleSports

ಕ್ರಿಕೆಟ್‌ ಆಟಗಾರ್ತಿಯರ ಸಲಿಂಗ ಪ್ರೀತಿ!; ರಿಂಗ್‌ ಬದಲಿಸಿಕೊಂಡ ಆಮಿ ಹಾಗೂ ಪೈಪಾ!

ನವದೆಹಲಿ; ಇತ್ತೀಚೆಗೆ ಸಲಿಂಗ ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿವೆ.. ಗಂಡು-ಗಂಡು, ಹೆಣ್ಣು-ಹೆಣ್ಣು ಮದುವೆಯಾಗುವ ಘಟನೆಗಳು ನಡೆಯುತ್ತಿವೆ.. ಅದಕ್ಕೆ ಹೊಸದೊಂದು ಉದಾಹರಣೆಯಾಗಿ ಮಹಿಳಾ ಕ್ರಿಕೆಟಿಗರಿಬ್ಬರು ರಿಂಗ್‌ ಬದಲಾಯಿಸಿಕೊಂಡು ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ.. ಈ ವಿಚಾರ ಈಗ ಹೆಚ್ಚು ಚರ್ಚೆಯಾಗುತ್ತಿದೆ..

ಇದನ್ನೂ ಓದಿ; ಇಂದು ಕೇಂದ್ರ ಬಜೆಟ್‌; ಕರ್ನಾಟಕಕ್ಕೆ ಸಿಗುತ್ತಾ ಬಂಪರ್‌ ಕೊಡುಗೆಗಳು..?

ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಆಮಿ ಜೋನ್ಸ್‌ ಹಾಗೂ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿ ಪೈಪಾ ಕ್ಲಿಯರಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಆಟ ಆಡುವಾಗ ಇವರಿಬ್ಬರ ಪರಿಚಯವಾಗಿದ್ದು, ಇದು ಪ್ರೀತಿಯಾಗಿ ಬದಲಾಗಿದೆ.. ಇಬ್ಬರೂ ಮದುವೆಯಾಗಲಿ ನಿರ್ಧಾರ ಮಾಡಿದ್ದಾರೆ.. ಈ ವಿಚಾರವನ್ನು ಆಮಿ ಜೋನ್ಸ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.. ನಾವಿಬ್ಬರೂ ಎಂಗೇಜ್‌ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.. ಇಬ್ಬರೂ ಷಾಂಪೇನ್​​ ತುಂಬಿದ ಗ್ಲಾಸ್​ ಹಿಡಿದುಕೊಂಡಿರುವ ಫೋಟೋ ಪೋಸ್ಟ್‌ ಮಾಡಿದ್ದು, ‘‘ಚಿಯರ್ಸ್​ ಟು ಫಾರೆವರ್​​’’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ; ಮೆಟ್ರೋದಲ್ಲಿ ಯುವತಿಯ ಅಶ್ಲೀಲ ನೃತ್ಯ ಪ್ರದರ್ಶನ; ವಿಡಿಯೋ ವೈರಲ್‌

Share Post