HealthSports

ಸಿಕ್ಸರ್‌ ಹೊಡೆದ ನಂತರ ಕುಸಿದು ಬಿದ್ದು ಕ್ರಿಕೆಟ್‌ ಆಟಗಾರ ಸಾವು!; ವಿಡಿಯೋ ಇದೆ..

ಮುಂಬೈ; ಸಿಕ್ಸರ್‌ ಹೊಡೆದು ಖುಷಿಯಲ್ಲಿದ್ದಾಗಲೇ ಕ್ರಿಕೆಟ್‌ ಆಟಗಾರನೊಬ್ಬ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.. ಮುಂಬೈಯ ಮೀರಾ ರೋಡ್​ನ ಕಾಶಿಮೀರಾ ಪ್ರದೇಶದ ಟರ್ಫ್​ನಲ್ಲಿ ಬಾಕ್ಸ್​ ಕ್ರಿಕೆಟ್​ ಆಡುವಾಗ ಈ ದುರ್ಘಟನೆ ನಡೆದಿದೆ… ಬ್ಯಾಟಿಂಗ್‌ ಮಾಡುತ್ತಿದ್ದ ಯುವಕ ಸಿಕ್ಸರ್‌ ಬಾರಿಸಿದ್ದಾರೆ.. ಅದೇ ಖುಷಿಯಲ್ಲಿ ಮತ್ತೊಂದು ಬಾಲ್‌ ಎದುರಿಸಲು ಸಿದ್ಧನಾಗುತ್ತಿದ್ದ.. ಇದೇ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ..

ಕಂಪನಿಯೊಂದು ಈ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.. ಪಂದ್ಯಾವಳಿ ವೇಳೆ ಯುವಕನಿಗೆ ಹಾರ್ಟ್‌ ಅಟ್ಯಾಕ್‌ ಆಗಿದೆ.. ಬ್ಯಾಟಿಂಗ್‌ ಮಾಡುವಾಗಲೇ ಈ ಘಟನೆ ನಡೆದಿದೆ.. ಬ್ಯಾಟ್‌ ಹಿಡಿದು ಮತ್ತೊಂದು ಬಾಲ್‌ ಎದುರಿಸಲು ಸಿದ್ಧವಾಗುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾನೆ.. ಎಲ್ಲರೂ ಗಾಬರಿಯಿಂದ ಓಡಿಬಂದು ನೋಡಿದ್ದಾರೆ.. ಅಷ್ಟರಲ್ಲಾಗದೇ ಆತನ ಪ್ರಾಣಪಕ್ಷಿ ಹಾರಿಹೋಗಿದೆ.. ಈ ದೃಶ್ಯ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ..

Share Post