EconomyNationalPolitics

Budget-2024‌ Live; ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ. ಘೋಷಣೆ

ನವದೆಹಲಿ; ಕೇಂದ್ರ ಬಜೆಟ್‌ ಅಧಿವೇಶನ ಶುರುವಾಗಿದೆ.. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ಮಾಡುತ್ತಿದ್ದಾರೆ.. ಸುಮಾರು 3 ಗಂಟೆಗಳ ಕಾಲ ಬಜೆಟ್‌ ಮಂಡಿಸುವ ಸಾಧ್ಯತೆ ಇದೆ.. ರಾಜ್ಯಕ್ಕೆ ಹಲವು ಯೋಜನೆಗಳನ್ನು ನಿರೀಕ್ಷಿಸಲಾಗಿದೆ..

  • ನಮ್ಮ ಒಂಬತ್ತು ಆದ್ಯತೆಗಳಲ್ಲಿ ಒಂದು ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ
  • ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿರುವವರಿಗೆ ದೊಡ್ಡ ಸಹಾಯ
  • ಔಪಚಾರಿಕ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಆರಂಭಿಸುವವರಿಗೆ ಸರ್ಕಾರದಿಂದ ಒಂದು ತಿಂಗಳ ವೇತನ
  • ನೇರ ನಗದು ವರ್ಗಾವಣೆ ಮೂಲಕ ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು
  • ಇಪಿಎಫ್​ಒನಲ್ಲಿ ನೋಂದಾಯಿಸಲ್ಪಟ್ಟವರು ಗರಿಷ್ಠ ಮೊತ್ತ 15 ಸಾವಿರ ರೂ. ಭತ್ಯೆ ಪಡೆಯಲಿದ್ದಾರೆ
  • ಇದರಿಂದ 2.10 ಕೋಟಿ ಯುವಕರಿಗೆ ಅನುಕೂಲವಾಗಲಿದೆ
  • ರೈತರು ಮತ್ತು ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 1.52 ಲಕ್ಷ ಕೋಟಿ ರೂ. ಘೋಷಣೆ
  • ಈ ನಿಧಿಯಿಂದ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಹೊಸ ಯೋಜನೆಗಳ ಜಾರಿ
  • ಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ 5 ವರ್ಷಗಳವರೆಗೆ ಕನಿಷ್ಠ 50ರಷ್ಟು ಮಾರ್ಜಿನ್ ನಲ್ಲಿ 80 ಕೋಟಿ ಬಡವರಿಗೆ ಪ್ರಯೋಜನ
  • ಉದ್ಯೋಗ, ಕೌಶಲ್ಯವೃದ್ಧಿ, ಆರ್ಥಿಕತೆ ಬೆಳವಣಿಗೆಗೆ ಪೂರಕ ಬಜೆಟ್ ಇದಾಗಿದೆ.
  • ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗಾಗಿ 1.48 ಲಕ್ಷ ಕೋಟಿ ಮೀಸಲು
  • ಮುಂದಿನ ಒಂದು ವರ್ಷದಲ್ಲಿ 1 ಕೋಟಿ ರೈತರು ನೈಸರ್ಗಿಕ ಕೃಷಿ ವ್ಯಾಪ್ತಿಗೆ
  • ಭಾರತದ ಆರ್ಥಿಕತೆ ಸಾಕಷ್ಟು ವೃದ್ಧಿಯಾಗುತ್ತಿದ್ದು, ನಾವು ಅಭಿವೃದ್ಧಿಯ ಪಥದಲ್ಲಿದ್ದೇವೆ. ದೇಶದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ 5 ವರ್ಷ ವಿಸ್ತರಣೆ ಮಾಡುತ್ತೇವೆ
  • ನರೇಂದ್ರ ಮೋದಿ  ನೇತೃತ್ವದ ಸರ್ಕಾರಕ್ಕೆ ಜನರು ಸತತ ಮೂರನೇ ಬಾರಿ ಆಶೀರ್ವಾದ ಮಾಡಿದ್ದು, ನಾವು ಅದಕ್ಕೆ ಆಭಾರಿಯಾಗಿದ್ದೇವೆ.

 

 

Share Post