ಮೂಲಂಗಿ ಪರೋಟ ಮಾಡುವ ವಿಧಾನ ಹೇಗೆ?
ಮೂಲಂಗಿ ಅಂದರೆ ಸಾಕು ಮುಖ ತಿರುಗಿಸಿಕೊಂಡು ಹೋಗುವವರೆ ಜಾಸ್ತಿ. ಆದರೆ ಅವರಿಗೆ ಮೂಲಂಗಿ ತಿಂದರೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಗೊತ್ತಿಲ್ಲ. ಮೂಲಂಗಿ ತಿನ್ನುವುದಿಲ್ಲ ಅನ್ನುವರಿಗೆ ಇಲ್ಲೋಂದು ಹೊಸಕರ ರೆಸಿಪಿ ಮಾಡಿ ನೋಡಿ..ಅದು ಮೂಲಂಗಿ ಪರೋಟ. ನೀವು ಅಂದುಕೊಂಡತೆ ಮೂಲಂಗಿ ಪರೋಟ ಮಾಡುವುದು ಕಷ್ಟಕರವಲ್ಲ. ಹಾಗಾದ್ರೆ ಮೂಲಂಗಿ ಪರೋಟ ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಮೂಲಂಗಿ ಪರೋಟಾ ಮಾಡಲು ಬೇಕಾಗುವ ಸಾಮಗ್ರಿಗಳು:
ಮೂಲಂಗಿ – 2 ಕಪ್ (ತುರಿದುಕೊಳ್ಳಿ)
ಈರುಳ್ಳಿ – 1
ಬೆಳ್ಳುಳ್ಳಿ ಪೇಸ್ಟ್ – 3 ಚಮಚ
ಜೀರಿಗೆ ಪುಡಿ – 1 ಚಮಚ
ಗರಮ್ ಮಸಾಲಾ -1 ಚಮಚ
ಕಾಳುಮೆಣಸು ಪುಡಿ- 1 ಚಮಚ
ದನಿಯಾ ಪುಡಿ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಗೋಧಿ ಹಿಟ್ಟು- 1 ಕಪ್ ಅರಿಶಿನ ಪುಡಿ- ಸ್ವಲ್ಪ
ಅಡುಗೆ ಎಣ್ಣೆ ಅಥವಾ ತುಪ್ಪ – ಸ್ವಲ್ಪ
ಮೂಲಂಗಿ ಪರೋಟ ಮಾಡುವ ವಿಧಾನ
ಮೊದಲಿಗೆ ಒಂದು ಮೂಲಂಗಿಯನ್ನು ಚನ್ನಾಗಿ ತೊಳೆದುಕೊಂಡು ತುರಿಯಿರಿ. ನಂತರ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ನಂತರ ಒಂದು ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದ ನಂತರ ಅದಕ್ಕೆ ಈರುಳ್ಳಿ ಹಾಕಿ ಹುರಿಯಿರಿ.
ಈರುಳ್ಳಿ ಕಂದು ಬಣ್ಣಕ್ಕೆ ಬಂದಾಗ, ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಗರಮ್ ಮಸಾಲಾ, ಕಾಳುಮೆಣಸು ಪುಡಿ, ದನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಅನ್ನು ಸೇರಿಸಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಬೇಯಿಸಿದ ಮೂಲಂಗಿಗೆ ಒಗ್ಗರಣೆ ಹಾಕಿ ಬೇಯಿಸಿಕೊಳ್ಳಿ. ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹಿಟ್ಟನ್ನು ಹಾಕಿ ಸಾಕಷ್ಟು ನೀರು, ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಕಲಸಿ.
ಅಗಲವಾಗಿ ಇದನ್ನು ಲಟ್ಟಿಸಿಕೊಳ್ಳಿ. ಅದರ ಮಧ್ಯಕ್ಕೆ ಬೇಯಿಸಿದ ಮೂಲಂಗಿಯ ಮಿಶ್ರಣವನ್ನು ಇಡಿ. ತದನಂತರ ಇದನ್ನು ಅರ್ಧಕ್ಕೆ ಮಡಚಿ. ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯನ್ನು ಪುನಃ ಲಟ್ಟಿಸಿ.ಬಾಣಲೆಗೆ ಒಂದು ಚಮಚದಷ್ಟು ಎಣ್ಣೆ ಅಥವಾ ತುಪ್ಪವನ್ನು ಹಾಕಿ.ಪರೋಟಾವನ್ನು ಬಿಸಿಯಾಗಿರುವ ಪ್ಯಾನ್‍ಗೆ ಹಾಕಿ ಬೇಯಿಸಿ. ಬೇಕಾದಲ್ಲಿ ಪರೋಟಾದ ಸುತ್ತಲೂ ಎಣ್ಣೆಯನ್ನು ಹಾಕಿ ಚೆನ್ನಾಗಿ ಬೇಯುವವರೆಗೆ ಎರಡೂ ಬದಿ ಬಿಸಿ ಮಾಡಿದರೆ ಮೂಲಂಗಿ ಪರೋಟ ರೆಡಿ.