Lifestyle

ಮನುಷ್ಯರಂತೆ ಮೆತ್ತಗಿದೆ ಈ ದೇವರ ದೇಹ; ಹೊಕ್ಕುಳ ತೀರ್ಥದಿಂದ ಸಂತಾನ ಭಾಗ್ಯ!

ವಿಜ್ಞಾನ, ತಂತ್ರಜ್ಞಾನಗಳು ಏನೇ ಹೇಳಿದರೂ ಮನುಷ್ಯನಿಗೂ ಮೀರಿ ಶಕ್ತಿಯೊಂದಿದೆ.. ಅದು ನಮ್ಮನ್ನು ನಿಯಂತ್ರಿಸುತ್ತಿದೆ ಎಂಬುದನ್ನು ಬಹುತೇಕರು ಒಪ್ಪುತ್ತಾರೆ.. ಹೀಗಾಗಿಯೇ ಯಾರು ಎಷ್ಟೇ ಹೇಳಿದರೆ ದೇವರ ಮೇಲಿನ ನಂಬಿಕೆ, ದೇವರ ಆರಾಧನೆಗೆ ಎಂದಿಗೂ ಕುಂದುಂಟಾಗದಿರುವುದು.. ದೇವರನ್ನು ಬೇರೆ ಬೇರೆ ರೂಪಗಳನ್ನು ನಾವು ಪೂಜಿಸುತ್ತಾ ಬಂದಿದ್ದೇವೆ.. ಒಂದೊಂದು ದೇವರೂ ಒಂದು ವಿಷಯಕ್ಕೆ ಫೇಮಸ್‌.. ಕೆಲ ದೇವರನ್ನು ಪೂಜಿಸಿದರೆ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ.. ಕೆಲ ದೇವರನ್ನು ಪೂಜಿಸಿದರೆ ಸಂತಾನ ಸಮಸ್ಯೆಗೆ ಪರಿಹಾರ ಸಿಗುತ್ತೆ.. ಹೀಗಾಗಿ ಒಂದೊಂದು ದೇವರು ಒಂದೊಂದಕ್ಕೆ ಫೇಮಸ್‌..

ಇದನ್ನೂ ಓದಿ; ಮಾಂಸ ಕತ್ತರಿಸುವ ಕತ್ತಿಗಳಿಂದ ಮಸಾಜ್‌; ಹೀಗೂ ಉಂಟಾ..?

ಸಂತಾನ ಭಾಗ್ಯ ಕರುಣಿಸುವ ಹೇಮಾಚಲ ನರಸಿಂಹ;

ತೆಲಂಗಾಣದ ಭದ್ರಾಚಲಂನಿಂದ ಸ್ವಲ್ಪ ದೂರದಲ್ಲಿ ಹೇಮಾಚಲ ಎಂಬ ಸ್ಥಳದಲ್ಲಿ ಒಂದು ಪುಣ್ಯಕ್ಷೇತ್ರವಿದೆ.. ಇಲ್ಲಿ ಹೇಮಾಚಲ ನರಸಿಂಹಸ್ವಾಮಿ ನೆಲೆಸಿದ್ದಾರೆ.. ಈ ದೇವರನ್ನು ಪೂಜೆ ಮಾಡಿದರೆ ಸಂತಾನವಿಲ್ಲದವರಿಗೆ ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.. ಇನ್ನು ಈ ದೇವರಿಗೆ ವಿಶೇಷ ಮಹತ್ವವಿದೆ.. ಯಾಕಂದ್ರೆ ದೇವರ ಮೂರ್ತಿಯನ್ನು ಮುಟ್ಟಿದರೆ ಜೀವಂತ ಮನುಷ್ಯನಂತೆ ಮೆತ್ತಗೆ ಇರುತ್ತದಂತೆ ಅವರ ದೇಹ.. ಹೀಗಾಗಿಯೇ ಈ ಹೇಮಾಚಲ ನರಸಿಂಹಸ್ವಾಮಿ ವಿಶೇಷ ಶಕ್ತಿಯುಳ್ಳ ದೇವರು ಎಂದು ಭಕ್ತರು ನಂಬಿದ್ದಾರೆ..

ಇದನ್ನೂ ಓದಿ; ನೀವೇಕೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ?; ಸಿಎಂ ಸಿದ್ದರಾಮಯ್ಯ ನೇರ ಪ್ರಶ್ನೆ

ಮನುಷ್ಯರಂತೆ ಮೆತ್ತಗಿರುತ್ತದೆ ದೇವರ ಮೂರ್ತಿ;

ಹೇಮಾಚಲ ನರಸಿಂಹಸ್ವಾಮಿ ದೇವರು ತುಂಬಾನೇ ವಿಶೇಷ. ಯಾಕಂದ್ರೆ, ಈ ಮೂರ್ತಿಯನ್ನು ಮುಟ್ಟದರೆ ಮನುಷ್ಯನ ದೇಹದಂತೆ ಮೆತ್ತಗಿರುತ್ತದಂತೆ.. ಕೂದಲು ಕೂಡಾ ಬೆಳೆಯುತ್ತವಂತೆ.. ನರಸಿಂಹಸ್ವಾಮಿ ಗುಹೆಯೊಂದರಲ್ಲಿ ಕುಳಿತು ಭಕ್ತರಿಗೆ ದರ್ಶನ ಕೊಡುತ್ತಾನೆ.. ಇಲ್ಲಿ ದೇವರ ಮೂರ್ತಿ ಮನುಷ್ಯನ ದೇಹ ಪ್ರಕೃತಿ ಹೊಂದಿದೆ ಎಂದು ಇಲ್ಲಿಗೆ ಭೇಟಿ ನೀಡಿ ಬಂದ ಭಕ್ತರು ಹೇಳುತ್ತಾರೆ.. ಕಾಡಿನ ಮಧ್ಯೆ ಗುಹೆಯೊಂದರಲ್ಲಿ ನೆಲೆಸಿರುವ ಈ ವಿಶಿಷ್ಟ ದೇವರ ದರ್ಶನಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ..

ಇದನ್ನೂ ಓದಿ; ಅಧಿಕ ಬಿಪಿ : ಇವುಗಳನ್ನು ಕುಡಿದರೆ ಬಿಪಿ ಹೆಚ್ಚಾಗುತ್ತದೆ

ಬೆರಳಿಂದ ಒತ್ತಿದರೆ ಒಳಕ್ಕೆ ಹೋಗುತ್ತದೆ;

ಇಲ್ಲಿನ ನರಸಿಂಹಸ್ವಾಮಿ ದೇವರ ದೇಹದ ಮೇಲೆ ಬೆರಳಿನಿಂದ ಒತ್ತಿದರೆ ಚರ್ಮ ಒಳಹೋಗುತ್ತದಂತೆ.. ಬೆರಳನ್ನು ತೆಗೆದರೆ ಅದು ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂದು ಭಕ್ತರು ಹೇಳುತ್ತಾರೆ.. ಆದ್ರೆ ಭಕ್ತರು ದೇವರ ಮೂರ್ತಿಯನ್ನು ಮುಟ್ಟಲು ಅವಕಾಶವಿಲ್ಲವಾದರೂ, ಅರ್ಚಕರು ಇದರ ಅನುಭವವನ್ನೂ ದಿನವೂ ಪಡೆಯುತ್ತಾರೆ.. ಈ ಶಕ್ತಿಯುತ ವಿಗ್ರಹ 10 ಅಡಿ ಎತ್ತರವಿದ್ದು, ಇದು ಮಾನವ ನಿರ್ಮಿಸಿದ ಮೂರ್ತಿಯಲ್ಲ, ಉದ್ಭವ ಮೂರ್ತಿ ಎಂದು ಅರ್ಚಕರು ಹೇಳಿದ್ದಾರೆ..

ಇದನ್ನೂ ಓದಿ; ರಾಮನಗರದಲ್ಲಿ 30 ಕೆಜಿ ಚಿನ್ನ, 10 ಕೆಜಿ ಬೆಳ್ಳಿ, ವಜ್ರಗಳ ಜಪ್ತಿ!

ನಾಭಿಯಿಂದ ಬರುತ್ತೆ ರಕ್ತದಂತಹ ವಸ್ತು!

ಹೇಮಾಚಲದ ಕಾಡಿನ ನಡುವೆ ಗುಹೆಯಲ್ಲಿ ನರಸಿಂಹಸ್ವಾಮಿ ಮೂರ್ತಿ ಗುಹೆ ಗೋಡೆಗೆ ತಾಗಿದಂತೆ ಇದೆ.. ಈ ದೇವರ ನಾಭಿಯಿಂದ ರಕ್ತದಂತಹ ವಸ್ತು ಆಗಾಗ ಹೊರಗೆಬರುತ್ತೆ ಎಂದು ಇಲ್ಲಿ ಭಕ್ತರು ಹೇಳುತ್ತಾರೆ.. ಇನ್ನು ದಿನವೂ ದೇವರ ನಾಭಿಗೆ ಚಂದನದ ಲೇಪನ ಮಾಡುತ್ತಾರೆ.. ನಂತರ ಭಕ್ತರಿಗೆ ಇದೇ ಪ್ರಸಾದವಾಗಿಯೂ ನೀಡಲಾಗುತ್ತದೆ.. ಈ ವಿಶೇಷ ಪ್ರಸಾದವನ್ನು ಸೇವನೆ ಮಾಡಿದರೆ ಗ್ರಹದೋಷ ನಿವಾರಣೆಯಾಗುತ್ತದೆ. ಜೊತೆಗೆ ಸಂತಾನಭಾಗ್ಯ ಲಭಿಸುತ್ತದೆ ಎಂದು ಲಕ್ಷಾಂತರ ಭಕ್ತರು ನಂಬಿದ್ದಾರೆ..

ಇದನ್ನೂ ಓದಿ; 7 ಮಕ್ಕಳನ್ನು ಹೆತ್ತ; ಸಾಕೋಕಾಗಲ್ಲ ಅಂತ ಹೆಂಡತಿ ಸಮೇತ ಎಲ್ಲರನ್ನೂ ಕೊಂದ!

ದೇವರ ಪಾದದಿಂದ ಹರಿಯುವ ಚಿಂತಾಮಣಿ ಧಾರೆ;

ದೇವರ ಪಾದದಿಂದ ಒಂದು ಧಾರೆ ಹರಿಯುತ್ತದೆ.. ಅದಕ್ಕೆ ಚಿಂತಾಮಣಿ ಧಾರೆ ಎಂದು ಕರೆಯಲಾಗುತ್ತದೆ.. ಇದರಲ್ಲಿ ಮುಳುಗಿದರೆ ಅಥವಾ ಈ ಜಲದ ಸೇವನೆ ಮಾಡಿದರೆ ಯಾವುದೇ ಅನಾರೋಗ್ಯವಿರಲಿ ಅಂದು ದೂರವಾಗುತ್ತದೆ ಎಂಬ ನಂಬಿಕೆ ಇದೆ.. ಹೀಗಾಗಿ ಈ ತೀರ್ಥ ಸೇವನೆಗಾಗಿ ನೂರಾರು ಕಿಲೋ ಮೀಟರ್‌ಗಳಿಂದಲೂ ಭಕ್ತರು ಬರುತ್ತಾರೆ..

ಇದನ್ನೂ ಓದಿ; ಚೀನಾದಲ್ಲಿ ಮತ್ತೊಂದು ಹೊಸ ರೋಗ ಪತ್ತೆ; 32,380 ಪ್ರಕರಣಗಳು, 13 ಸಾವು

ಈ ಜಾಗಕ್ಕೆ ತ್ರೇತಾಯುಗದ ನಂಟು!;

ಇನ್ನು ಈ ಪವಿತ್ರವಾದ ಜಾಗಕ್ಕೆ ತ್ರೇತಾಯುಗದ ನಂಟಿದೆ.. ಇಲ್ಲೇ ರಾಮ ಖರದೂಷಣನ ಸಹಿತ ಸಾವಿರಾರು ರಾಕ್ಷಸರನ್ನು ಸಂಹಾರ ಮಾಡಿದ್ದು ಎಂದು ಹೇಳಲಾಗುತ್ತದೆ.. ಹೀಗಾಗೇ ಇದಕ್ಕೆ ಹೇಮಾಚಲ ಎಂಬ ಹೆಸರು ಬಂದು ಎಂದು ಹೇಳುತ್ತಾರೆ. ಇನ್ನೊಂದೆಡೆ ಶತವಾಹನ ದೊರೆ ದಿಲೀಪಕರ್ಣಿ, ನರಸಿಂಹ ದೇವರ ಜೊತೆ ಹೋರಾಡಿದ್ದನೆಂಬ ಪ್ರತೀತಿ ಕೂಡಾ ಇದೆ..  ನಂತರ ದೇವರ ನಿಜಸ್ವರೂಪ ತಿಳಿದ ರಾಜ, ನರಸಿಂಹನನ್ನು ಪೂಜಿಸಲು ಶುರು ಮಾಡುತ್ತಾನೆ.. ದೇವರ ಕೋಪ ತಣಿಸಲು ಅಲ್ಲಿ ಲಕ್ಷ್ಮೀ ದೇವರನ್ನು ಸ್ಥಾಪಿಸಿದನು ಎಂದು ಹೇಳಲಾಗುತ್ತದೆ..

ಇದನ್ನೂ ಓದಿ;ಇಂದು ಬೆಂಗಳೂರಲ್ಲಿ ಅಬ್ಬರಿಸುತ್ತ ಮಳೆ; ಹವಾಮಾನ ಇಲಾಖೆ ಹೇಳಿದ್ದೇನು..?

 

Share Post