ಗಂಡು ಮಗುವಿಗೆ ಜನ್ಮ ನೀಡಿದ ಕೊಲೆಯಾದ ರೇಣುಕಾಸ್ವಾಮಿ ಪತ್ನಿ
ಚಿತ್ರದುರ್ಗ; ನಾಲ್ಕು ತಿಂಗಳ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಅಂಡ್ ಗ್ಯಾಂಗ್ ಕೊಲೆ ಮಾಡಿತ್ತು.. ಈ ವೇಳೆ ರೇಣುಕಾಸ್ವಾಮಿ ಗರ್ಬಿಣಿಯಾಗಿದ್ದರು.. ಅವರೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ರೇಣುಕಾಸ್ವಾಮಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬಕ್ಕೆ ಈಗ ಕೊಂಚ ಸಂತೋಷ ತರಿಸಿದೆ.. ರೇಣುಕಾಸ್ವಾಮಿಯೇ ಮತ್ತೆ ಹುಟ್ಟಿ ಬಂದಿದ್ದಾರೆಂದು ರೇಣುಕಾಸ್ವಾಮಿ ಕುಟುಂಬ ಖುಷಿಪಡುತ್ತಿದೆ..
ರೇಣುಕಾಸ್ವಾಮಿ ಕೊಲೆಯಾದಾಗ ಅವರ ಪತ್ನಿ ಸಹನಾ ಐದು ತಿಂಗಳ ಗರ್ಭಿಣಿಯಾಗಿದ್ದರು.. ಇದೀಗ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಜೂನ್ ತಿಂಗಳಲ್ಲಿ ಬೆಂಗಳೂರಿನ ಪಟ್ಟಣಗೆರೆಗೆ ರೇಣುಕಾಸ್ವಾಮಿಯನ್ನು ಕರೆಸಿಕೊಂಡು ಕೊಲೆ ಮಾಡಲಾಗಿತ್ತು.. ನಂತರ ರೇಣುಸ್ವಾಮಿ ದೇಹವನ್ನು ಸುಮನಹಳ್ಳಿ ಬ್ರಿಡ್ಜ್ ಬಳಿ ಬಿಸಾಡಲಾಗಿತ್ತು.. ನಟ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಈ ಕೊಲೆ ನಡೆದಿತ್ತು.. ನಟ ದರ್ಶನ್, ಪವಿತ್ರಾ ಗೌಡ ಸೇರಿ ಹಲವರು ಇನ್ನೂ ಜೈಲಿನಲ್ಲೇ ಇದ್ದಾರೆ..
ಇತ್ತ ರೇಣುಕಾಸ್ವಾಮಿ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿತ್ತು.. ಆದ್ರೆ ಆ ಕುಟುಂಬ ಒಂದು ಸಮಾಧಾನ ಸಿಕ್ಕಿದೆ.. ಜೊತೆಗೆ ಒಂದು ಭರವಸೆ ಮನೆಗೆ ಬಂದಿದೆ.. ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ ಹರಿಗೆಯಾಗಿದೆ.. ರೇಣುಕಾಸ್ವಾಮಿಯೇ ಮತ್ತೆ ಹುಟ್ಟಿಬಂದಿದ್ದಾನೆಂದು ಆ ಕುಟುಂಬ ಖುಷಿಪಡುತ್ತಿದೆ..