LifestyleNational

ಶ್ರೀರಾಮನ ಬಿಲ್ಲು, ಬಾಣದಂತಿರುವ ಗಾಜಿನ ಸೇತುವೆ; ಉದ್ಘಾಟನೆಗೆ ರೆಡಿ

ಬಿಹಾರದ ರಾಜ್‌ಗೀರ್‌ನಲ್ಲಿ ನಿರ್ಮಿಸಲಾದ ಗಾಜಿನ ಸೇತುವೆ ಈಗಾಗಲೇ ಕೋಟ್ಯಂತರ ಜನರನ್ನು ಆಕರ್ಷಿಸುತ್ತಿದೆ.. ಗಾಜಿನ ಸೇತುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.. ಹೀಗಿರುವಾಗಲೇ ಇದೀಗ ಉತ್ತರ ಪ್ರದೇಶದಲ್ಲೂ ಅಂತಹದ್ದೇ ಒಂದು ಗಾಜಿನ ಸೇತುವೆ ನಿರ್ಮಿಸಲಾಗಿದೆ. ಅದು ಉದ್ಘಾಟನೆಗೆ ಸಿದ್ಧವಾಗಿದೆ.. ಇದು ಉತ್ತರ ಪ್ರದೇಶದ ಮೊದಲ ಗಾಜಿನ ಸ್ಕೈವಾಕ್ ಆಗಿದೆ… ಚಿತ್ರಕೂಟದ ತುಳಸಿ (ಶಬರಿ) ಜಲಪಾತದಲ್ಲಿ ಈ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದ್ದು, ಇದರ ವಿಶೇಷತೆಗಳನ್ನು ತಿಳಿಯೋಣ..

ಇದನ್ನೂ ಓದಿ; IPLನಲ್ಲಿ ಸಿಕ್ಸರ್‌ಗಳ ದರ್ಬಾರ್‌; ಇವರೇ ನೋಡಿ ರನ್‌ ಮಾಂತ್ರಿಕರು..!

ಉದ್ಘಾಟನೆಗೆ ಸಿದ್ಧವಾಗಿರುವ ಗಾಜಿನ ಸೇತುವೆ;

ಉತ್ತರ ಪ್ರದೇಶದ ಮೊದಲ ಗಾಜಿನ ಸ್ಕೈವಾಕ್ ಸೇತುವೆ ಶೀಘ್ರದಲ್ಲೇ ಪವಾಸಿಗರಿಗೆ ಮುಕ್ತವಾಗಲಿದೆ.. ಲೋಕಸಭೆ ಚುನಾವಣೆ ನಂತರ ಈ ಗಾಜಿನ ಸೇತುವೆ ಉದ್ಘಾಟನೆಯಾಗಲಿದೆ. ಈ ಸೇತುವೆ ನಿರ್ಮಾಣಕ್ಕೆ ಒಟ್ಟು 3.70 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.. ಈ ಸೇತುವೆಯ ಸುತ್ತಲೂ ಹರ್ಬಲ್ ಗಾರ್ಡನ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಭವಿಷ್ಯದಲ್ಲಿ ಇದು ಪರಿಸರ ಪ್ರವಾಸೋದ್ಯಮದಲ್ಲಿ ದೊಡ್ಡ ಪ್ರವಾಸಿ ತಾಣವಾಗಲಿದೆ ಎಂದು ಹೇಳಲಾಗುತ್ತದೆ. ಇದನ್ನು ನಿರ್ಮಿಸಿದ ಜಲಪಾತವನ್ನು ಶಬರಿ ಜಲಪಾತ ಎಂದು ಕರೆಯಲಾಗುತ್ತದೆ.. ಈಗ ಇದಕ್ಕೆ  ತುಳಸಿ ಜಲಪಾತ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ; ಹಿಂದೆಂದಿಗಿಂತಲೂ ಹೆಚ್ಚಾಯ್ತಾ ಮೋದಿ ವರ್ಚಸ್ಸು..?; ರಾಜ್ಯದಲ್ಲೀಗ ಮೋದಿ ಮೇನಿಯಾ..!

ಶ್ರೀರಾಮನ ಬಿಲ್ಲು, ಬಾಣದ ಆಕಾರ;

ಕೋದಂಡ ಅರಣ್ಯದಲ್ಲಿರುವ ಈ ಜಲಪಾತದ ಮೇಲೆ ರೂ.3.70 ಕೋಟಿ ವೆಚ್ಚದಲ್ಲಿ ಗಾಜಿನ ಸೇತುವೆ ನಿರ್ಮಿಸಲಾಗಿದೆ..  ಶ್ರೀರಾಮನ ಬಿಲ್ಲು ಮತ್ತು ಬಾಣದ ಆಕಾರದಲ್ಲಿರುವ ಈ ಗಾಜಿನ ಸ್ಕೈ ವಾಕ್ ಸೇತುವೆ ಎಲ್ಲರ ಆಕರ್ಷಣೆಯ ಕೇಂದ್ರಬಿಂದು.. ಈ ಗಾಜಿನ ಸೇತುವೆಯನ್ನು 40 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಬಿಲ್ಲು ಮತ್ತು ಬಾಣದ ಆಕಾರದಲ್ಲಿ ನಿರ್ಮಿಸಲಾದ ಈ ಸೇತುವೆಯು ಎರಡು ಕಂಬಗಳ ಬಿಲ್ಲುಗಳ ನಡುವೆ 25 ಮೀಟರ್ ಉದ್ದ ಮತ್ತು 35 ಮೀಟರ್ ಅಗಲವಿದೆ. ಸೇತುವೆಯ ಲೋಡ್ ಸಾಮರ್ಥ್ಯ ಪ್ರತಿ ಚದರ ಮೀಟರ್‌ಗೆ 500 ಕೆಜಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೇತುವೆಯ ಮೇಲೆ ನಡೆದಾಡುವಾಗ ಜನರು ವಿಸ್ಮಯಗೊಳ್ಳುತ್ತಾರೆ.. ಸೇತುವೆಯ ಕೆಳಗೆ ದಟ್ಟವಾದ ಕಾಡು, ಬಂಡೆಗಳು ಮತ್ತು ಗುಡ್ಡಗಳಿಂದ ಬೀಳುವ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ; ಎಂ.ಎಸ್‌.ಧೋನಿ ಮಾಜಿ ಬ್ಯುಸಿನೆಸ್‌ ಪಾರ್ಟನರ್‌ ಅರೆಸ್ಟ್‌!

ಪಾದದ ಕೆಳಗೆ ನೆಲವೇ ಇಲ್ಲದಂತೆ ಭಾಸ;

ರಾಜ್‌ಗಿರ್‌ನ ಗಾಜಿನ ಸೇತುವೆಯ ಮೇಲೆ ನಡೆಯುವಾಗ ಪಾದದ ಕೆಳಗೆ ನೆಲವೇ ಇಲ್ಲದಂತೆ ಭಾಸವಾಗುತ್ತದೆ. ಚೀನಾದ ಹ್ಯಾಂಗ್‌ಝೌನಲ್ಲಿರುವ ಸೇತುವೆಯ ಮಾದರಿಯಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಇದರ ಎತ್ತರ 200 ಅಡಿ. ಇದು ಉತ್ತರ ಪ್ರದೇಶದ ಸೇತುವೆಯ ಉದ್ದಕ್ಕಿಂತ ಎರಡು ಪಟ್ಟು ಹೆಚ್ಚು ಎಂದು ತಿಳಿದುಬಂದಿದೆ.

ಇದನ್ನೂ ಓದಿ; ಹೃದಯಾಘಾತ ಆಗುತ್ತೇನೋ ಎಂಬ ಭಯ ಕಾಡುತ್ತಿದೆಯೇ..?; ಹಾಗಾದ್ರೆ ಅದು ಇದೇ..!

Share Post