ಎದೆ – ಸೊಂಟದ ಸುತ್ತಳತೆ ಕೇಳಿದ್ದರು : ಪರಮೇಶಿ ಪಾನ್‌ವಾಲ ಚಿತ್ರದ ನಾಯಕಿ
ಮುಂಬೈ : ಬಾಲಿವುಡ್ ಬೆಡಗಿ ಸುರ್ವಿನ್ ಚಾವ್ಲಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಈಗ ಮುಂಚಿನಷ್ಟು ಕ್ಯಾಸ್ಟಿಂಗ್ ಕೌಚ್ ಇಲ್ಲ. ಮುಂಬೈನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು.
2003 ರಲ್ಲಿ ನಾನು ಮೊದಲ ಆಡಿಷನ್ ಅಟೆಂಟ್ ಮಾಡಿದಾಗ ನನ್ನ ಎದೆ ಮತ್ತು ಸೊಂಟದ ಸುತ್ತಳತೆ ಎಷ್ಟು ಎಂದು ಕೇಳಿದ್ದರು ಎಂದು ಸುರ್ವಿನ್ ಚಾವ್ಲಾ ಹೇಳಿದ್ದಾರೆ. ಹಿಂದಿ, ಪಂಜಾಬಿ, ಕನ್ನಡ, ತಮಿಳು ಚಿತ್ರಗಳಲ್ಲಿ ನಟಿಸಿದ್ದ ಚಾವ್ಲಾ ಈಗ ಹಿಂದಿಯ ವೆಬ್ ಸಿರೀಸ್ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಶಿವರಾಜ್‌ಕುಮಾರ್ ಜೊತೆ ಪರಮೇಶಿ ಪಾನ್‌ವಾಲ ಸಿನಿಮಾದಲ್ಲಿ ಈ ಬೆಡಗಿ ನಟಿಸಿದ್ದರು.