Lifestyle

`ನಮ್ಮ ಅತ್ತೆ ಸಾಯಬೇಕು ಸ್ವಾಮಿʼ; ಸೊಸೆಯದ್ದು ಇದೆಂಥಾ ಹರಕೆ?!

ಕಲಬುರಗಿ; ದೇವರ ಹುಂಡಿಗೆ ಭಕ್ತರು ಕಾಣಿಕೆ ಸಮಪರ್ಣೆ ಮಾಡುತ್ತಾರೆ.. ಅದರಲ್ಲಿ ಬರೋ ಹಣವನ್ನೇಷ್ಟೇ ಹಾಕುವುದಿಲ್ಲ. ಏನೇನೋ ಬೇಡಿಕೆಗಳನ್ನು ಬರೆದಿಡುತ್ತಾರೆ.. ದೇವರ ಹುಂಡಿಗಳನ್ನು ತೆಗೆದಾಗ ಇಂತಹ ಕುತೂಹಲದ ವಿಚಾರಗಳು ಬೆಳಕಿಗೆ ಬರುತ್ತವೆ. ಕೆಲವು ಮಹಿಳೆಯರು ತಮ್ಮ ಗಂಡನಿಗೆ ಒಳ್ಳೆ ಬುದ್ಧಿ ಕೊಡು ಎಂದು ಪತ್ರ ಬರೆದು ಹಾಕುವುದಕ್ಕೂ ನಾವು ನೋಡಿದ್ದೇವೆ.. ಆದ್ರೆ ಇಲ್ಲೊಬ್ಬ ಸೊಸೆ ತಮ್ಮ ಅತ್ತೆಯ ಬಗ್ಗೆ ವಿಚಿತ್ರ ಬೇಡಿಕಯನ್ನಿಟ್ಟಿದ್ದಾಳೆ. ದೇವರಿಗೆ 50 ರೂಪಾಯಿ ಕಾಣಿಕೆ ಹಾಕಿರುವ ಸೊಸೆ, ತನ್ನ ಅತ್ತೆಯ ವಿರುದ್ಧ ಹರಕೆ ಹೊತ್ತಿದ್ದಾರೆ. ದೇವರ ಮುಂದೆ ಆಕೆ ಇಟ್ಟ ಬೇಡಿಕೆ ಏನು ನೀವೇ ನೋಡಿ…

ಇದನ್ನೂ ಓದಿ; ಉಗ್ರ ಚಟುವಟಿಕೆಗೆ ಸಂಚು; ಮೂವರನ್ನು ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು!

ನಮ್ಮ ಅತ್ತೆ ಸಾಯಬೇಕು ಸ್ವಾಮಿ;

ನಮ್ಮ ಅತ್ತೆ ಸಾಯಬೇಕು ಸ್ವಾಮಿ; ಮನೆಗಳಲ್ಲಿ ಅತ್ತೆ ಸೊಸೆ ಹಾವು ಮುಂಗಸಿ ರೀತಿ ಆಡುವುದನ್ನು ನಾವು ನೋಡಿರುತ್ತೇವೆ. ಬಹುತೇಕ ಎಲ್ಲಾ ಮನೆಗಳಲ್ಲೂ ಸೊಸೆ ಅಂದ್ರೆ ಅತ್ತೆಗೆ ಆಗೋದಿಲ್ಲ, ಅತ್ತೆ ಅಂದ್ರೆ ಸೊಸೆ ಆಗೋದಿಲ್ಲ.. ಆದರೂ ಕೂಡಾ ಯಾರೂ ಕೂಡಾ ಸಾಯಲಿ ಎಂದು ಶಾಪ ಹಾಕುವುದಿಲ್ಲ. ದೇವರಲ್ಲಿ ಬೇಡಿಕೊಳ್ಳುವುದಿಲ್ಲ. ಆದ್ರೆ ಆ ಅತ್ತೆ ಅದೇನು ಕೊಟ್ಟಿದ್ದಳೋ ಏನೋ, ಸೊಸೆಯೊಬ್ಬಳು ನಮ್ಮ ಅತ್ತೆ ಸಾಯಬೇಕು ಸ್ವಾಮಿ ಎಂದು ಬೇಡಿಕೊಂಡಿದ್ದಾಳೆ. ದೇವರ ಹುಂಡಿಗೆ 50 ರೂಪಾಯಿ ನೋಟಿನ ಕಾಣಿಕೆ ಹಾಕಿದ್ದು, ಅದರ ಮೇಲೆ ನಮ್ಮ ಅತ್ತೆ ಸಾಯಬೇಕು ಸ್ವಾಮಿ ಎಂದು ಬರೆದಿಟ್ಟಿದ್ದಾರೆ.

ಇದನ್ನೂ ಓದಿ; ನದಿಯಾಳದಲ್ಲಿ ಓಡಲಿದೆ ಮೆಟ್ರೋ ರೈಲು; ಪ್ರಧಾನಿ ಮೋದಿ ಉದ್ಘಾಟನೆ!

ಗಾಣಗಾಪುರ ದತ್ತಾತ್ರೇಯ ದೇಗುಲದಲ್ಲಿ ಸಿಕ್ಕಿ ನೋಟು;

ಗಾಣಗಾಪುರ ದತ್ತಾತ್ರೇಯ ದೇಗುಲದಲ್ಲಿ ಸಿಕ್ಕಿ ನೋಟು; ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಎಲ್ಲಾ ದೇಗುಲಗಳಲ್ಲೂ ಹುಂಡಿಯಲ್ಲಿ ಹಣ ಎಣಿಸುತ್ತಾರೆ.. ಅದೇ ರೀತಿ ದೇವಲ ಗಾಣಗಾಪುರದ ಶ್ರೀ ದತ್ತಾತ್ರೇಯ ದೇವರ ಹುಂಡಿಯಲ್ಲಿನ ಹಣವನ್ನೂ ಎಣಿಸಲಾಗಿದೆ. ಈ ವೇಳೆ ಇಂತಹ ವಿಚಿತ್ರ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ. ಹಣ ಎಣಿಸುವವರು ಈ ಬೇಡಿಕೆ ನೋಡಿ, ಹುಬ್ಬೇರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌;

ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌; ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ ಇದೆ. ಈ ದೇವಸ್ಥಾನದಲ್ಲಿನ ಹುಂಡಿಯ ಹಣವನ್ನು ಎಣಿಸಲಾಗಿದೆ. ಈ ವೇಳೆ 50 ರೂಪಾಯಿ ನೋಟು ಎಲ್ಲರ ಗಮನ ಸೆಳೆದಿದೆ. ನೋಟಿನ ಮೇಲೆ ಯಾರೋ ಸೊಸೆ ನಮ್ಮ ಅತ್ತೆ ಸಾಯಬೇಕು ಎಂದು ಬರೆದಿದ್ದಾಳೆ. ತುಂಬಾ ಸುಂದರ ಅಕ್ಷರಗಳಲ್ಲಿ ಇದನ್ನು ಬರೆಯಲಾಗಿದೆ. ಯಾರೋ ಅಕ್ಷರಸ್ಥ ಸೊಸೆಯೇ ಹೀಗೆ ತನ್ನ ಅತ್ತೆ ಸಾವಿಗೆ ಬೇಡಿಕೆ ಇಟ್ಟಿದ್ದಾಳೆ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ;Oral hygiene; ಟೂತ್‌ ಬ್ರಷ್‌ ಎಷ್ಟು ದಿನಕ್ಕೊಮ್ಮೆ ಬದಲಿಸಬೇಕು?; ಬದಲಿಸದಿದ್ದರೆ ಏನಾಗುತ್ತೆ..?

ಈ ನೋಟಿನ ಮೇಲಿನ ಬರಹ ನೋಡಿ ಕೆಲವರು ನಕ್ಕಿದ್ದಾರೆ. ಇನ್ನು ಕೆಲವರು ಎಂತಹ ಸೊಸೆ ನೋಡಿ ಆಕೆ ಎಂದಿದ್ದಾರೆ.. ಇನ್ನೂ ಕೆಲವರು ಆ ಅತ್ತೆ ಈಗ ಇದ್ದಾಳೋ ಇಲ್ಲವೋ ಎಂದು ಹೇಳಿದ್ದಾರೆ. ಇನ್ನು ಈ ನೋಟಿನ ಫೋಟೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು ದಾಖಲಿಸುತಿದ್ದಾರೆ.

ಪ್ರತಿಯೊಬ್ಬ ದೇಗುಲಗಳಲ್ಲೂ ಒಬ್ಬೊಬ್ಬರು ಒಂದೊಂದು ರೀತಿಯ ಕಾಣಿಕೆಗಳನ್ನು ಹಾಕುತ್ತಿರುತ್ತಾರೆ. ಇನ್ನು ಏನೇನೋ ಪತ್ರಗಳನ್ನು ಬರೆದು ಅದರಳೊಗೆ ಹಾಕುತ್ತಿರುತ್ತಾರೆ. ಆದ್ರೆ ಅತ್ತೆಯನ್ನು ಸಾಯಿಸಬೇಕೆಂಬ ಬೇಡಿಕೆ ಇಟ್ಟಿದ್ದು ಇದೇ ಮೊದಲು. ಹೀಗಾಗಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇಲ್ಲಿ ಸೊಸೆ ಕಟ್ಟವಳೋ, ಅತ್ತೆ ಕೆಟ್ಟವಳೋ ಗೊತ್ತಿಲ್ಲ. ಎಷ್ಟೇ ಕೆಟ್ಟವರಾದರೂ ಒಬ್ಬರ ಸಾವು ಬಯಸುವವರು ಮನುಷ್ಯರೇ ಅಲ್ಲ ಅನ್ನೋದು ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ; ಬೇಸಿಗೆಯಲ್ಲಿ ನಿಮ್ಮ ಚರ್ಮ ಸೌಂದರ್ಯ ಕಾಪಾಡಿಕೊಳ್ಳುವುದು ಹೇಗೆ..?

Share Post