Technology

Tokenization | ಆನ್‌ಲೈನ್‌ ಶಾಪಿಂಗ್‌ ಇನ್ನಷ್ಟು ಸುರಕ್ಷಿತ

ನವದೆಹಲಿ : ಆನ್‌ಲೈನ್‌ ಶಾಪಿಂಗ್‌ಗೆ ಆರ್‌ಬಿಐ ಹೊಸ ಪೇಮೆಂಟ್‌ ವಿಧಾನವನ್ನು ಪರಿಚಯಿಸುತ್ತಿದೆ. ಅದೇ Tokenization. ಅಮೆಜಾನ್‌, ಫ್ಲಿಪ್‌ಕಾರ್ಟ್‌, ಮಿಂತ್ರ, ಬಿಗ್‌ ಬಾಸ್ಕೆಟ್‌ನಂತಹ ಸಂಸ್ಥೆಗಳು ಬಹುತೇಕ ಅನ್‌ಲೈನ್‌ ಪೇಮೆಂಟ್‌ಗಳ ಮೇಲೆ ನಿಂತಿದೆ. ಇಲ್ಲಿ ನಾವು ನಮ್ಮ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ವಿವರಗಳನ್ನು ನೀಡುವುದರಿಂದ ಸುರಕ್ಷತೆಯ ಸಮಸ್ಯೆ ಕಾಡುವ ಆತಂಕವಿತ್ತು.

ಈಗ ನಮಗೆ ಈ ಭಯ ಇರುವುದಿಲ್ಲ. ಜನವರಿ 1 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದ್ದು, ನೀವು ಆನ್‌ಲೈನ್‌ನಲ್ಲಿ ಖರೀದಿ ಮಾಡುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗಳ ವಿವರಗಳನ್ನು ಮತ್ತು ಮುಕ್ತಾಯ ದಿನಾಂಕವನ್ನು ನೀಡುವ ಅಗತ್ಯ ಇರುವುದಿಲ್ಲ. Tokenization ನಮ್ಮ ಗೌಪ್ಯ ಮಾಹಿತಿಗಳನ್ನು ಕಾಪಾಡಲು ಸಹಕಾರಿಯಾಗಲಿದೆ.

Tokenization ಎಂದರೇನು ?

ಆನ್‌ಲೈನ್‌ ಅಲ್ಲಿ ನಾವು ನಮ್ಮ ಕಾರ್ಡ್‌ನ ಗೌಪ್ಯ ಮಾಹಿತಿಯನ್ನು ಹಂಚಿಕೊಂಡಾಗ ಹ್ಯಾಕರ್ಸ್‌ಗಳು ಅದನ್ನು ಕದಿಯಲು ಸಾಧ್ಯವಿರುತ್ತದೆ. ಆದರೆ ಟೋಕನೈಸೇಷನ್‌ ಆದಾಗ ನಮ್ಮ ಗೌಪ್ಯ ಮಾಹಿತಿ ಜೊತೆಗೆ ಟೋಕನ್‌ ಸಂಖ್ಯೆಗಳು ಆಡ್‌ ಆಗುತ್ತದೆ. ಇದರಿಂದ ಹ್ಯಾಕರ್ಸ್‌ಗಳಿಗೆ ಕದಿಯುವುದು ಸುಲಭದ ಮಾತಲ್ಲ. ಟೋಕನೈಸ್ ಮಾಡಿದ ಕಾರ್ಡ್ಗಳನ್ನು ನಿರ್ವಹಿಸಲು ಬ್ಯಾಂಕ್ ಪ್ರತ್ಯೇಕ ಇಂಟರ್‌ಫೇಸ್ ನೀಡುತ್ತದೆ. ಗ್ರಾಹಕರು ಯಾವುದೇ ಸಮಯದಲ್ಲೂ ಟೋಕನ್ ಅನ್ನು ಅಳಿಸಲೂ ಸಾಧ್ಯವಾಗಲಿದೆ.

ಜನವರಿ ೧ರಿಂದ ಈ ನಿಯಮ ಜಾರಿಗೆ ಬರಲಿದೆ. ಟೋಕನೈಸೇಷನ್‌ ಸೇವೆ ಸಂಪೂರ್ಣವಾಗಿ ಉಚಿತವಾಗಿರಲಿದೆ. ಇದಕ್ಕೆ ಯಾವುದೇ ಹೆಚ್ಚಿನ ಸುಂಕ ತಗಲುವುದಿಲ್ಲ.

Share Post