InternationalLifestyle

ಈ ದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು..!

ನವದೆಹಲಿ; ಭಾರತದಲ್ಲಿ ಭ್ರೂಣಲಿಂಗ ಪತ್ತೆ ವಿರುದ್ಧ ಕಾನೂನೇ ಜಾರಿಗೆ ತರಲಾಗಿದೆ.. ಭಾರತದಂತಹ ದೇಶಗಳಲ್ಲಿ ಹೆಣ್ಣು ಮಗು ಬೇಡ ಎನ್ನುವವರು ಜಾಸ್ತಿ ಇದ್ದಾರೆ.. ಈ ಕಾರಣಕ್ಕಾಗಿಯೇ ನಮ್ಮಲ್ಲಿ ಲಿಂಗಾನುಪಾತದಲ್ಲಿ ಪುರುಷರಿಗಿಂಗ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ.. ಆದ್ರೆ, ಪ್ರಪಂಚದ ಕೆಲ ದೇಶಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಗಿದ್ದಾರೆ.. ನಿಮಗೆ ಅಚ್ಚರಿ ಎನಿಸಿದರೂ ನಿಮಗೆ ನಿಜ.. ಅದೂ ಕೂಡಾ ಕೆಲ ದೇಶಗಳಲ್ಲಿ 100 ಮಹಿಳೆಯರಿಗೆ ಕೇವಲ 800 ಪುರುಷರಿದ್ದಾರೆ.. ಇಲ್ಲಿ ಪುರುಷರಿಗೆ ಡಿಮ್ಯಾಂಡ್‌ ಜಾಸ್ತಿ ಇದೆ..

ಇದನ್ನೂ ಓದಿ; ಸಿಗ್ನಲ್‌ ಬಳಿ ತೃತೀಯಲಿಂಗಿಗಳು ಭಿಕ್ಷೆ ಬೇಡುವಂತಿಲ್ಲ; ಹೊಸ ರೂಲ್‌

ದಿನಕ್ಕೆ 3 ಲಕ್ಷ 60 ಸಾವಿರ ಶಿಶುಗಳ ಜನನ;

ಪ್ರಪಂಚದಾದ್ಯಂತ ದಿನಕ್ಕೆ 3 ಲಕ್ಷ 60 ಸಾವಿರ ಶಿಶುಗಳು ಜನಿಸುತ್ತವೆ.. ಗಂಟೆ ಲೆಕ್ಕದಲ್ಲಿ ಹೇಳುವುದಾದರೆ ಗಂಟೆಗೆ 15 ಸಾವಿರ ಶಿಶುಗಳು ಜನಿಸುತ್ತವೆ.. ಆದ್ರೆ ಇದರಲ್ಲಿ ಪುರುಷ ಹಾಗೂ ಮಹಿಳೆಯರ ಅನುಪಾತ ದೇಶದಿಂದ ದೇಶಕ್ಕೆ ಬದಲಾವಣೆ ಇದೆ.. ಬಹುತೇಕ ರಾಷ್ಟ್ರಗಳಲ್ಲಿ ಪುರುಷರ ಸಂಖ್ಯೆ ಹೆಚ್ಚಿದೆ.. ಮಹಿಳೆಯರು ಕಡಿಮೆ ಇದ್ದಾರೆ.. ಇದಕ್ಕೆ ಕಾರಣ ಹೆಣ್ಣು  ಭ್ರೂಣ ಹತ್ಯೆ.. ಹೆಣ್ಣು ಅಂದರೆ ಖರ್ಚು ಎಂದು ಭಾವಿಸಿರುವ ಭ್ರೂಣದಲ್ಲೇ ಹತ್ಯೆ ಮಾಡುತ್ತಿದ್ದಾರೆ.. ಕಾನೂನು ಬಾಹಿರವಾಗಿ ಭ್ರೂಣಲಿಂಗ ಪತ್ತೆ ನಡೆಯುತ್ತಿದೆ.. ಹೀಗಾಗಿ ಹಲವಾರು ದೇಶಗಳಲ್ಲಿ ಲಿಂಗಾನುಪಾತದಲ್ಲಿ ಪುರುಷರ ಸಂಖ್ಯೆ ಜಾಸ್ತಿ ಇದೆ.. ಆದ್ರೆ ಕೆಲ ದೇಶಗಳಲ್ಲಿ ಮಹಿಳೆಯರದ್ದೇ ಮೇಲುಗೈ.. ಅಲ್ಲಿ ಪುರುಷರಿಗಿಂತ ಮಹಿಳೆಯೇ ಹೆಚ್ಚಿದ್ದಾರೆ..

ಇದನ್ನೂ ಓದಿ; ಡಿಕೆಶಿ ಮಿಡ್‌ನೈಟ್‌ ಆಪರೇಷನ್‌; 400 ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

ಇಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು..!;

statisticstimes.com ಅವರು ಒಂದಷ್ಟು ವರದಿಗಳನ್ನು ಆಧರಿಸಿ ಮಹಿಳೆಯರು ಹೆಚ್ಚಿರುವ ದೇಶಗಳ ಪಟ್ಟಿ ಮಾಡಿದ್ದಾರೆ.. ಅದರಲ್ಲಿ ಲಿಂಗಾನುಪಾತದ ವಿವರವನ್ನೂ ನೀಡಿದ್ದಾರೆ..

1. ಅರ್ಮೇನಿಯಾ

ಅರ್ಮೇನಿಯಾ ದೇಶದಲ್ಲಿ ಅತಿಹೆಚ್ಚು ಮಹಿಳೆಯರಿದ್ದಾರೆ. ಇಲ್ಲಿ ಪ್ರತಿ 100 ಮಹಿಳೆಯರಿಗೆ ಕೇವಲ 81.80 ಪುರುಷರಿದ್ದಾರೆ. ಹೀಗಾಗಿ ಪ್ರಪಂಚದಲ್ಲಿ ಹೆಚ್ಚು ಮಹಿಳೆಯರು ಹೊಂದಿರುವ ದೇಶಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ. ಇಲ್ಲಿ ಮಹಿಳಯರದ್ದೇ ಪ್ರಾಬಲ್ಯ ಹೆಚ್ಚು.. ಜೊತೆಗೆ ಪುರುಷರಿಗೆ ಇಲ್ಲಿ ಬೇಡಿಕೆ ಕೂಡಾ ಅಧಿಕವಾಗಿದೆ.

ಇದನ್ನೂ ಓದಿ; ಒಂದೇ ಒಂದು ಕರೆಗೆ ಬೆಚ್ಚಿದ ಟೆಕ್ಕಿ; ಸೈಬರ್ ಕಳ್ಳರಿಂದ 2.4 ಕೋಟಿಗೆ ಕನ್ನ

2. ಗ್ವಾಡೆಲೋಪ್    

ಇನ್ನು ಅರ್ಮೇನಿಯಾದ ನಂತರದ ಸ್ಥಾನದಲ್ಲಿರೋದು ಗ್ವಾಡೆಲೋಪ್‌ ಎಂಬ ದೇಶ.. ಈ ದೇಶದಲ್ಲಿ 100 ಮಹಿಳೆಯರಿಗೆ 82.37 ಪುರುಷರಿದ್ದಾರೆ. ಹೀಗಾಗಿ ಇಲ್ಲಿ ಮದುವೆಯಾಗಲು ಹೆಣ್ಣಿಗೆ ಗಂಡು ಸಿಗುವುದೇ ಕಷ್ಟ.. ಇಲ್ಲಿ ಒಬ್ಬ ಗಂಡು ಇಬ್ಬರು ಮೂವರು ಹೆಂಗಸರನ್ನು ಮದುವೆಯಾಗುವುದಿದೆ.. ಮಹಿಳೆಯರೇ ಖುಷಿಯಿಂದ ಒಪ್ಪಿಕೊಂಡು ಹೀಗೆ ಮದುವೆಯಾಗುತ್ತಾರೆ.

3. ಉಕ್ರೇನ್ 

ಮೂರನೇ ಸ್ಥಾನದಲ್ಲಿ ಉಕ್ರೇನ್‌ ಇದೆ.. ಇಲ್ಲಿ 100 ಮಹಿಳೆಯರಿಗೆ 84.353 ಪುರುಷರಿದ್ದಾರೆ.. ಇಲ್ಲೂ ಕೂಡಾ ಪುರುಷರಿಗೆ ಭಾರಿ ಬೇಡಿಕೆ ಇದೆ..

ಇದನ್ನೂ ಓದಿ; ಯೂರಿಕ್ ಆಮ್ಲದ ಸಮಸ್ಯೆಗೆ ಪರಿಹಾರ ಇಲ್ಲಿದೆ

4. ಚೀನಾ, ಹಾಂಗ್ ಕಾಂಗ್ 

ನಂತರದ ಸ್ಥಾನ ಹಾಂಗ್‌ಕಾಂಗ್‌ದು.. ಹಾಂಗ್ ಕಾಂಗ್ 100 ಮಹಿಳೆಯರಿಗೆ 84.993 ಪುರುಷರೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

5 ಬೆಲಾರಸ್ 

ಬೆಲಾರಸ್ ಐದನೇ ಸ್ಥಾನದಲ್ಲಿದೆ. ಇಲ್ಲಿ 100 ಮಹಿಳೆಯರಿಗೆ 85.197 ಪುರುಷರಿದ್ದಾರೆ.

ಹೀಗೆ ಅತಿ ಹೆಚ್ಚು ಮಹಿಳೆಯರನ್ನು ಹೊಂದಿರುವ ದೇಶಗಳ ಟಾಪ್ 10 ಪಟ್ಟಿಯಲ್ಲಿ, ಯುರೋಪ್‌ನಲ್ಲಿ ನಾಲ್ಕು ದೇಶಗಳು, ಉತ್ತರ ಅಮೆರಿಕಾ ಮತ್ತು ಏಷ್ಯಾದಲ್ಲಿ ತಲಾ ಮೂರು ದೇಶಗಳಿವೆ.

ಇದನ್ನೂ ಓದಿ; ಜೇನು ತುಪ್ಪದಿಂದ ಎಷ್ಟು ಉಪಯೋಗವೋ ಅಷ್ಟೇ ತೊಂದರೆಗಳಿವೆ, ಎಚ್ಚರಿಕೆ!

 

Share Post