BengaluruCrime

ಒಂದೇ ಒಂದು ಕರೆಗೆ ಬೆಚ್ಚಿದ ಟೆಕ್ಕಿ; ಸೈಬರ್ ಕಳ್ಳರಿಂದ 2.4 ಕೋಟಿಗೆ ಕನ್ನ

ಬೆಂಗಳೂರು; ಬೆಂಗಳೂರಿಮ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ.. ಮೊನ್ನೆಯಷ್ಟೇ ವಕೀಲೆಯೊಬ್ಬರಿಗೆ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು 14 ಲಕ್ಷ ರೂಪಾಯಿ ವಂಚನೆ ಮಾಡಿದ್ದರು. ಇದೀಗ ಟೆಕ್ಕಿಯೊಬ್ಬ ಒಂದು ಫೋನ್ ಕರೆ ನಂಬಿ ಬರೋಬ್ಬರಿ 2.24 ಕೋಟಿ ರೂಪಾಯಿ ಕಳೆದುಕೊಂಡಿದ್ದಾನೆ.

ಕಸ್ಟಮ್ಸ್ ಇಂದ ಕರೆ ಎಂದ ಆಸಾಮಿ;

ಏರ್ ಪಾರ್ಸೆಲ್ ಕಸ್ಟಮ್ಸ್ ನಲ್ಲಿ ಸೀಜ್ ಆಗಿದೆ ಎಂದು ಬೆಂಗಳೂರಿನ ಅಮೃತಹಳ್ಳಿಯ ಟೆಕ್ಕಿಯೊಬ್ಬರಿಗೆ ಕರೆ ಬಂದಿದೆ. ಅದರಲ್ಲಿ ನಿಮ್ಮ ಪಾಸ್ ಪೋರ್ಟ್ ಇದ್ದು ಅದು ನಕಲಿಯಾಗಿದೆ. ಜೊತೆಗೆ ಎಟಿಎಂ ಕಾರ್ಡ್ ಗಳು. ಎಂಡಿಎಂಎ ಡಗ್ಸ್ ಇದೆ ಎಂದು ಟೆಕ್ಕಿಗೆ ಬೆದರಿಸಿದ್ದಾರೆ.

ಆರೋಪಿ‌ ಹೇಳಿದಂತೆ ಮಾಡಿದ ಟೆಕ್ಕಿ;

    ಡ್ರಗ್ಸ್ ನಿನ್ನ ಹೆಸರಲ್ಲಿ ಬಂದಿದ್ದು, ಇದು ಆಂಟಿ ನಾರ್ಕೊಟಿಕ್ಸ್ ಬ್ಯೂರೋಗೆ ಗೊತ್ತಾಗಿದೆ ಎಂದು ಕರೆ ಮಾಡಿದಾತ ಹೇಳಿದ್ದಾನೆ. ಇದರಿಂದ ಟೆಕ್ಕಿ ಬೆದರಿದ್ದಾನೆ. ಅನಂತರ ಆನ್ ಲೈನ್ ನಲ್ಲೇ ವಿಚಾರಣೆ ನಡೆಯುತ್ತೆ ಸ್ಕೈಪ್ ಆಪ್ ಡೌನ್ ಲೋಡ್ ಮಾಡಿಕೋ ಎಂದು ಹೇಳಿದ್ದಾನೆ. ಅದರಂತೆ ಟೆಕ್ಕಿ ಮಾಡಿದ್ದಾನೆ. ನಂತರ ಆರೋಪಿ ಹೇಳಿದ್ದನ್ನೆಲ್ಲಾ ಮಾಡಿದ್ದಾನೆ.

ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವಂಚಕ;

    ಸ್ಕೈಪ್ ಆಪ್ ಡೌನ್ ಲೋಡ್ ಮಾಡಿಕೊಂಡ ಮೇಲೆ ಒಬ್ಬ ವಿಡಿಯೋ ಕಾಲ್ ಮಾಡಿದ್ದಾನೆ.. ಆತ ಪೊಲೀಸ್ ಸಮವಸ್ತ್ರದಲ್ಲಿ ಇದ್ದಾನೆ. ನಿಮ್ಮ ಲಾಂಡರಿಂಗ್ ಕೇಸ್ ನಿಮ್ಮ ವಿರುದ್ದ ದಾಖಲಾಗಿದೆ ಎಂದು ಬೆದರಿಸಿದ್ದಾನೆ. ಸಿಬಿಐ‌ ವಿಚಾರಣೆ ನಡೆಯುತ್ತೆ ಎಂದೆಲ್ಲಾ ಹೆದರಿಸಿದ್ದಾನೆ. ಅನಂತರ ಪ್ರಕರ ಇಲ್ಲಿಗೇ ಕ್ಲೋಸ್ ಮಾಡಬೇಕಾದ್ರೆ ಹಣ ಕೊಡಬೇಕು ಎಂದು ಹೇಳಿದ್ದಾನೆ. ಕೆಲ ಅಕೌಂಟ್ ನಂಬರ್ ಗಳನ್ನೂ ಕೊಟ್ಟಿದ್ದಾನೆ.

2 ಕೋಟಿ 45 ಲಕ್ಷ ಟ್ರಾನ್ಸ್ ಫರ್;

ಇದು‌ ನಿಜ ಎಂದೇ ನಂಬಿದ್ದ ಟೆಕ್ಕಿ ಆರೋಪಿಗಳು ಕೊಟ್ಟ 8 ಅಕೌಂಟ್ ಗಳಿಗೆ 2 ಕೋಟಿ 42 ಲಕ್ಷದ 5 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದಾನೆ. ಇದಾದ ಮೇಲೆ ಟೆಕ್ಕಿಗೆ ಇದೆಲ್ಲಾ ಮೋಸದ ಜಾಲ ಎಂದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ದೂರು‌ನೀಡಲಾಗಿದೆ.

 

ಕೆಲ ದಿನಗಳ ಹಿಂದೆ ಲೇಡಿ ವಕೀಲರಿಗೆ ಕೂಡಾ ಇದೇ ರೀತಿ ಮಾಡಿ ದಿನವಿಡೀ ಕ್ಯಾಮರಾ ಮುಂದೆ ವಿವಸ್ತ್ರಗೊಳಿಸಿ ಕೂರಿಸಿದ್ದಲ್ಲದೆ, 14 ಲಕ್ಷ ರೂಪಾಯಿ ಪೀಕಿದ್ದರು.

Share Post