CrimeNational

ಸಿಗ್ನಲ್‌ ಬಳಿ ತೃತೀಯಲಿಂಗಿಗಳು ಭಿಕ್ಷೆ ಬೇಡುವಂತಿಲ್ಲ; ಹೊಸ ರೂಲ್‌

ಪುಣೆ; ತೃತೀಯಲಿಂಗಿಗಳು ಅಥವಾ ಮಂಗಳಮುಖಿಯರು ಸಿಗ್ನಲ್‌ನಲ್ಲಿ, ರೈಲು, ಬಸ್ಸುಗಳಲ್ಲಿ ಭಿಕ್ಷೆ ಬೇಡುವಂತಿಲ್ಲ ಎಂದು ಮಹಾರಾಷ್ಟ್ರದ ಪುಣೆಯ ಪೊಲೀಸರು ಹೊಸ ರೂಲ್ಸ್‌ ಜಾರಿ ಮಾಡಿದ್ದಾರೆ. ಟ್ರಾಫಿಕ್ಸ್‌ ಸಿಗ್ನಲ್‌ನಲ್ಲಿ ಭಿಕ್ಷೆ ನೀಡುವಂತೆ ಪೀಡಿಸುತ್ತಾರೆ.. ಕೊಡದಿದ್ದರೆ ಕೆಟ್ಟ ಪದಗಳಿಂದ ನಿಂದಿಸುತ್ತಾರೆ ಎಂದು ಜನರು ದೂರುಗಳು ನೀಡಿದ್ದರು.. ಈ ಹಿನ್ನೆಲೆಯಲ್ಲಿ ಸಿಗ್ನಲ್‌ಗಳಲ್ಲಿ ತೃತೀಯ ಲಿಂಗಿಗಳ ಭಿಕ್ಷಾಟನೆಗೆ ಬ್ರೇಕ್‌ ಹಾಕಲಾಗಿದೆ.

ಇದನ್ನೂ ಓದಿ; ಡಿಕೆಶಿ ಮಿಡ್‌ನೈಟ್‌ ಆಪರೇಷನ್‌; 400 ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆ

ಗಂಭೀರವಾಗಿ ಪರಿಗಣಿಸಿದ ಪುಣೆ ಪೊಲೀಸರು;

ಪುಣೆಯ ಪೊಲೀಸ್‌ ಕಮೀಷನ್‌ ಅಮಿತೇಶ್‌ ಕುಮಾರ್‌ ಅವರು ಈ ಹೊಸ ಆದೇಶ ನೀಡಿದ್ದಾರೆ.. ಟ್ರಾಫಿಕ್ ಸಿಗ್ನಲ್‌ಗಳ ಬಳಿ  ತೃತೀಯಲಿಂಗಿಗಳು ಜಮಾಯಿಸಬಾರದು. ಜೊತೆಗೆ ಪ್ರಯಾಣಿಕರಿಂದ ಬಲವಂತವಾಗಿ ಹಣಕ್ಕೆ ಒತ್ತಾಯಿಸಬಾರದು ಎಂದು ಆದೇಶ ನೀಡಲಾಗಿದೆ. ತೃತೀಯ ಲಿಂಗಿಗಳು ಭಿಕ್ಷೆ ನೀಡುವಂತೆ ಪೀಡಿಸುವುದು, ಜನರನ್ನು ನಿಂದಿಸುವುದು ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕ ದೂರುಗಳು ಕೇಳಿಬಂದಿವೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಈ ರೂಲ್ಸ್‌ ಮಾಡಲಾಗಿದೆ ಎಂದು ಪೊಲೀಸ್‌ ಇಲಾಖೆ ಹೇಳಿದೆ..

ಇದನ್ನೂ ಓದಿ; ಡಿಕೆಶಿ ದರ್ಪದ ಮಾತಿಗೆ ವಿನಮ್ರತೆಯಿಂದ ಉತ್ತರ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಆಹ್ವಾನವಿಲ್ಲದೆ ಎಲ್ಲಿಗೂ ಹೋಗಿ ಪೀಡಿಸಬಾರದು!;

ಇನ್ನು ಮನೆಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದರೂ ಅಲ್ಲಿಗೆ ತೃತೀಯಲಿಂಗಿಗಳು ಎಂಟ್ರಿ ಕೊಡುತ್ತಾರೆ.. ಮದುವೆ ಮಂಟಪಗಳಿಗೂ ನುಗ್ಗುತ್ತಾರೆ.. ಸಾವಿರಾರು ರೂಪಾಯಿ ನೀಡುವಂತೆ ಬೇಡಿಕೆ ಇಡುತ್ತಾರೆ.. ಈ ಬಗ್ಗೆಯೂ ಪುಣೆ ಪೊಲೀಸರಿಗೆ ಅನೇಕ ದೂರುಗಳು ಬಂದಿವೆ.. ಈ ಹಿನ್ನೆಲೆಯಲ್ಲಿ ಪೊಲೀಸರು ಇದಕ್ಕೂ ಬ್ರೇಕ್‌ ಹಾಕಿದ್ದಾರೆ.. ಜನರು ಕರೆದರೆ ಮಾತ್ರ ಹೋಗಬೇಕು. ತಾವೇ ಹೋಗಿ ಬಲವಂತವಾಗಿ ಹಣ ಕೀಳುವ ಹಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ; ಒಂದೇ ಒಂದು ಕರೆಗೆ ಬೆಚ್ಚಿದ ಟೆಕ್ಕಿ; ಸೈಬರ್ ಕಳ್ಳರಿಂದ 2.4 ಕೋಟಿಗೆ ಕನ್ನ

ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ;

ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.. ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುಣೆ ಪೊಲೀಸರು ಹೇಳಿದ್ದಾರೆ.. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 (ಸಾರ್ವಜನಿಕ ಸೇವಕರು ಘೋಷಿಸಿದ ಆದೇಶಕ್ಕೆ ಅವಿಧೇಯತೆ), 143, 144, 147, 159, 268, 384, 385, 503, 504, 506, ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಸಂಬಂಧಿತ ಸೆಕ್ಸನ್​ಗಳ ಅಡಿಯಲ್ಲಿ ಕೇಸ್‌ ದಾಖಲಿಸಲಾಗುವುದು ಪುಣೆ ಪೊಲೀಸ್‌ ಕಮೀಷನರ್‌ ಅಮಿತೇಶ್‌ ಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ; ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮೇಲೆ ಹಲ್ಲೆ

 

Share Post