DistrictsHealth

ಕೊಪ್ಪದಲ್ಲಿ ಮದುವೆ ಊಟ ಸೇವಿಸಿ 150 ಮಂದಿ ಅಸ್ವಸ್ಥ!

ಕೊಡಗು; ಮದುವೆ ಮನೆಯಲ್ಲಿ ಊಟ ಮಾಡಿದ 150 ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.. ಕೊಡಗು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ ನಡೆದಿದೆ.. ನಿನ್ನೆ ಮಧ್ಯಾಹ್ನ ಮದುವೆಯ ಕಾರ್ಯಕ್ರಮದಲ್ಲಿ ಊಟ ಮಾಡಿದ ಮೇಲೆ ಸಂಜೆ ವೇಳೆಗೆ ಅಸ್ವಸ್ಥಗೊಂಡಿದ್ದಾರೆ.. ಬಹುತೇಕರಲ್ಲಿ ವಾಂತಿ ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ..

ಇದನ್ನೂ ಓದಿ; ಕಂಕುಳಿನ ಕೂದಲು ಮಾರಿ ಲಕ್ಷ ಲಕ್ಷ ಸಂಪಾದಿಸುತ್ತಿರುವ ರೂಪದರ್ಶಿ!

 ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ;

ಅಸ್ವಸ್ಥರನ್ನು ಕುಶಾಲನಗರ ಹಾಗೂ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಕೆಲವರು ಮಡಿಕೇರಿ ಜಿಲ್ಲಾಸ್ಪತ್ರೆಗೂ ದಾಖಲಾಗಿದ್ದಾರೆ.. ಖಾಸಗಿ ಕ್ಲಿನಿಕ್‌ಗಳು ಕೂಡಾ ಫುಲ್‌ ಆಗಿವೆ ಎಂದು ತಿಳಿದುಬಂದಿದೆ.. ಮಡಿಕೇರಿ ಶಾಸಕ ಮಂಥರ್‌ ಗೌಡ ಆಸ್ಪತ್ರೆಗಳಿಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ.. ಸೂಕ್ತ ವೈದ್ಯಕೀಯ ಸೇವೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ..

ಇದನ್ನೂ ಓದಿ; ಇಂದು ಎಲ್ಲೆಲ್ಲಿ ಮತದಾನ..?; ಪ್ರಮುಖ ಅಭ್ಯರ್ಥಿಗಳು ಯಾರು..?

 

Share Post