LifestyleNational

ಮಲಗಿದ್ದ ಮಹಿಳೆಯ ಕೂದಲಲ್ಲಿ ಹರಿದಾಡಿದ ಹಾವು!

ಬೆಂಗಳೂರು; ಹಾವು ಅಂದ್ರೇನೇ ಭಯವಾಗುತ್ತೆ.. ಆದ್ರೆ ಇಲ್ಲಿ ಹಾವೊಂದು ಮಲಗಿದ್ದ ಮಹಿಳೆಯ ಕೂದಲೊಳಗೆ ಹರಿದಾಡಿದೆ.. ಆದರೂ ಆಕೆಗೆ ಏನೂ ಗೊತ್ತಾಗಿಲ್ಲ.. ಆದರೆ ಇದರ ವಿಡಿಯೋ ರೆಕಾರ್ಡ್‌ ಆಗಿದ್ದು, ಈಗ ಅದು ಎಲ್ಲೆಡೆ ವೈರಲ್‌ ಆಗುತ್ತಿದೆ..
ಕಾಶಿಕ್ಯಾತ್ರ ಎಂಬ ಇನ್ಸ್ಟಾಗ್ರಾಂ ಖಾತೆಯಿಂದ ಇದರ ವಿಡಿಯೋ ಅಪ್‌ಲೋಡ್‌ ಮಾಡಲಾಗಿದೆ.. ಈ ಘಟನೆ ಎಲ್ಲಿ ನಡೆದಿದೆಯೋ ಗೊತ್ತಿಲ್ಲ.. ಆದ್ರೆ ಮಹಿಳೆ ಎರಡೂ ಕೈಗಳನ್ನು ಮಡಚಿ ಮಲಗಿರುತ್ತಾಳೆ.. ಈ ವೇಳೆ ಹಾವೊಂದು ಆಕೆಯ ಕೂದಲಲ್ಲಿ ಸೇರಿ ಅಲ್ಲೇ ಓಡಾಡುತ್ತೆ.. ಆದರೂ ಆಕೆಗೆ ಏನೂ ಅನಿಸೋದಿಲ್ಲ.. ಹಾಗೆಯೇ ಮಲಗಿರುತ್ತಾಳೆ.. ಈ ವಿಡಿಯೋ ಈಗ ಎಲ್ಲಡೆ ವೈರಲ್‌ ಆಗುತ್ತಿದೆ..

Share Post