CrimeDistricts

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ್ದೇಕೆ..?

ಬೆಂಗಳೂರು; ಮಾರ್ಚ್‌ 1 ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಮತ್ತಷ್ಟು ಚುರುಕುಕೊಂಡಿದೆ.. ಎನ್‌ಐಎ ತಂಡಕ್ಕೆ ಬಗೆದಷ್ಟೂ ಮಾಹಿತಿಗಳು ಸಿಗುತ್ತಿವೆ.. ಆದ್ರೆ ಶಂಕಿತ ಉಗ್ರ ಮಾತ್ರ ಸಿಗುತ್ತಿಲ್ಲ.. ಶಂಕಿತ ಉಗ್ರನ ಎಲ್ಲಾ ಮಾಹಿತ ಕಲೆಹಾಕಿರುವ ಎನ್‌ಐಎ ತಂಡ ತಲೆಮರೆಸಿಕೊಂಡಿರುವ ಶಂಕಿತನನ್ನು ಬಂಧಿಸಲು ಸಜ್ಜಾಗುತ್ತಿದೆ.. ಈ ನಡುವೆ ಶಿವಮೊಗ್ಗದ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ..

ಇದನ್ನೂ ಓದಿ; ನಾನೇ ಸುರಸುಂದರಾಂಗ, ಹುಡುಗಿಯರೆಲ್ಲಾ ನನ್ನೇ ಪ್ರೀತಿಸ್ತಾರೆ; ಹುಡುಗನೊಬ್ಬನ ವಿಚಿತ್ರ ಭ್ರಮಾ ಕಾಯಿಲೆ!

ಮೊಬೈಲ್‌ ಮಾರಿದ್ದಕ್ಕೆ ಸಂಕಷ್ಟ;

ಇನ್ನು ಶಿವಮೊಗ್ಗದ ಮೂಲದ ಮತೀನ್‌ ತಾಹ ಹಾಗೂ ಮುಸಾವೀರ್‌ ಹುಸೇನ್‌ ಎಂಬುವವರೇ ಸ್ಪೋಟದ ರೂವಾರಿಗಳು ಎಂದು ಗೊತ್ತಾಗಿದೆ.. ಈ ಹಿನ್ನೆಲೆಯಲ್ಲಿ ಅವರಿಗಾಗಿ ತಲಾಶ್‌ ನಡೆಸಲಾಗುತ್ತಿದೆ.. ಈ ಇಬ್ಬರಿಗೆ ಸಂಪರ್ಕ ಹೊಂದಿದ್ದವರ ವಿಚಾರಣೆ ನಡೆಸಲಾಗಿದೆ.. ಇದರ ಭಾಗವಾಗಿ ಶಿವಮೊಗ್ಗ ಜಿಲ್ಲೆ ತೀರ್ಥಗಳಲ್ಲಿ ಮೂಲದ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.. ಅದರಲ್ಲೊಬ್ಬ ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್‌ ಕೂಡಾ ಒಬ್ಬ.. ಇನ್ನೊಬ್ಬ ಮೊಬೈಲ್‌ ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಜಾಮಿಲ್‌ ಎಂಬಾತ… ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ ಎಂಬಾತ ಈ ಮೊಬೈಲ್‌ ಅಂಗಡಿ ಮಾಲೀಕ ಮುಜಾಮಿಲ್‌ಗೆ ಮೊಬೈಲ್‌ ಒಂದನ್ನು ಮಾರಾಟ ಮಾಡಿದ್ದ… ಮುಜಾಮಿಲ್‌ ಅದೇ ಮೊಬೈಲ್‌ ನಿಂದ ಬ್ಲಾಸ್ಟ್‌ ಆರೋಪಿಗಳಾದ  ಅಬ್ದುಲ್‌ ಮತೀನ್‌ ತಾಹ, ಮುಸಾವೀರ್‌ ಹುಸೇನ್‌ ಸಂಪರ್ಕ ಹೊಂದಿದ್ದ.. ಮೊಬೈಲ್‌ ಯಾರದು ಎಂದು ಜಾಡು ಹಿಡಿದು ಹೊರಟಾಗ ಅದು ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ದು ಅನ್ನೋದು ಗೊತ್ತಾಗಿದೆ.. ಹೀಗಾಗಿ ಸಾಯಿಪ್ರಸಾದ್‌ ನನ್ನು ವಶಕ್ಕೆ ಪಡೆದು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ..

ಇದನ್ನೂ ಓದಿ; ಹೋಟೆಲ್‌ ಕೋಣೆ, ಆರು ಯುವಕರು, ಒಂದೇ ಹುಡುಗಿ; ಅಲ್ಲಿ ನಡೆದಿದ್ದೇನು..?

10 ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿ ದಾಳಿ;

ಎನ್‌ಐಎ ಅಧಿಕಾರಿಗಳು ಹತ್ತು ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿ ದಾಳಿ ನಡೆಸಿದ್ದರು.. ಹಲವು ಮನೆಗಳು ಹಾಗೂ ಅಂಗಡಿಗ ಮೇಲೆ ದಾಳಿ ನಡೆಸಿದ್ದರು.. ಈ ವೇಳೆ ಇಬ್ಬರು ಯುವಕರನ್ನು ವಿಚಾರಣೆಗೊಳಪಡಿಸಲಾಗಿತ್ತು.. ಬಾಂಬ್ ಇಟ್ಟು ಎಸ್ಕೇಪ್ ಆಗಿರೋ ಮುಸಾವೀರ್ ಕೂಡಾ ತೀರ್ಥಹಳ್ಳಿಯವನು. ಇನ್ನು ಆತನಿಗೆ ಸಹಾಯ ಮಾಡಿದ  ಅಬ್ದುಲ್ ಮತೀನ್ ತಾಹ ಕೂಡಾ ಅದೇ ಊರಿನವನು.. ಈ ಇಬ್ಬರಿಗಾಗಿ ಎನ್‌ಐಎ ಅಧಿಕಾರಿಗಳು ದೇಶದ 18 ಕಡೆಗಳಲ್ಲಿ ತಪಾಸಣೆ ಮಾಡಿದೆ.. ಜೊತೆಗೆ ಇವರನ್ನು ಹಿಡಿದುಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿದೆ..

ಇದನ್ನೂ ಓದಿ; ನಿಮ್ಮ ಸಂಗಾತಿಯ ವರ್ತನೆ ಹೀಗಿದ್ದರೆ ಇನ್ನೊಂದು ಅಫೇರ್‌ ಇದೆ ಎಂದರ್ಥ!

ಇನ್ನು ಬಿಜೆಪಿ ಕಾಯಕರ್ತನ ವಿಚಾರಣೆ ನಡೆಸಿರುವ ಬಗ್ಗೆ ಶಾಸಕ ಆಗರ ಜ್ಞಾನೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.. ಮತಿನ್​ ಎಂಬುವನು ಸಿಮ್ ಖರೀದಿಸಿ ಕೊಟ್ಟ ವಿಳಾಸ, ದಾಖಲೆ ದುರುಪಯೋಗ ಮಾಡಿಕೊಂಡಿದ್ದಾನೆ. ಈ ಹಿನ್ನೆಲೆ ತೀರ್ಥಹಳ್ಳಿಯ ಸಾಯಿ ಪ್ರಕಾಶ್​ನನ್ನು ವಿಚಾರಣೆ ಮಾಡಲಾಗಿದ್ದು, ಸತ್ಯಾಂಶ ಗೊತ್ತಾದ ನಂತರ ನಿನ್ನೆ ಎನ್​ಐಎ ತಂಡ ವಾಪಸ್ ಕಳುಹಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ; ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಲ; ದಲಿತ ಮತಗಳು ʻಕೈʼ ಹಿಡಿದರೆ ಬಿಜೆಪಿಗೆ ನಷ್ಟ!

 

Share Post