Lifestyle

ಮನೆಯಲ್ಲೇ ಸರಳವಾಗಿ ತಯಾರು ಮಾಡಿ ಫ್ರೆಂಚ್‌ ಫ್ರೈಸ್‌

ಜಂಕ್‌ ಫುಡ್‌ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ದೊಡ್ಡವರಿಂದ ಮಕ್ಕಳವರೆಗೂ ತುಂಬ ಇಷ್ಟನೇಪಡುವಂತಹ ಜಂಕ್‌ ಫುಡ್‌. ಎಲ್ಲರೂ ಇಷ್ಟಪಟ್ಟು ಆರ್ಡರ್‌ ಮಾಡುವಂತಹದೆ ಫ್ರೆಂಚ್‌ ಫ್ರೈಸ್‌.ಆಲೂಗಡ್ಡೆಯನ್ನು ಎರಡು ಬಾರಿ ಕರಿಯಬೇಕೆಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ.ಮೊದಲನೆಯ ಬಾರಿ ಎಣ್ಣೆಯಲ್ಲಿ ಕರಿದಾಗ ಆಲೂಗಡ್ಡೆ ಮೆತ್ತಗೆ ಸರಿಯಾಗಿ ಬೇಯುತ್ತದೆ.ಎಣ್ಣೆಯಿಂದ ಹೊರ ತೆಗೆದು ೫ ನಿಮಿಷ ಬಿಟ್ಟು ಪುನಃ ಕರಿದಾಗ ಬೆಂದ ಆಲೂಗಡ್ಡೆಗೆ ಒಂದು ಕ್ರಿಸ್ಪೀ ಕೋಟಿಂಗ್ ಸಿಗುತ್ತದೆ. ಹೇಗೆ ಮಾಡೋದು ಅಂತ ತಿಳಿದುಕೊಳ್ಳೊಣ
ಬೇಕಾಗುವ ಸಾಮಾಗ್ರಿಗಳು:
ಆಲೂಗಡ್ಡೆ – ೪ ರಿಂದ ೫
ಅಚ್ಚ ಖಾರದ ಪುಡಿ – ರುಚಿಗೆ ತಕ್ಕಷ್ಟು
ಚಾಟ್ ಮಸಾಲಾ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ಮಾಡುವ ವಿಧಾನಗಳು
ಆಲುಗಡ್ಡೆಯ ಸಿಪ್ಪೆ ತೆಗೆದು ಬೆರಳಿನ ಗಾತ್ರಕ್ಕೆ ಕತ್ತರಿಸಿಕೊಳ್ಳಿ.ಆಲೂಗಡ್ಡೆಯನ್ನು ಐಸ್ ಹಾಕಿ ತಣ್ಣಗಾಗಿಸಿದ ನೀರಿನಲ್ಲಿ ಹಾಕಿ ಅರ್ಧ ಗಂಟೆ ನೆನೆಸಿಡಿ.ನೀರಿನಿಂದ ತೆಗೆದು ಆಲೂಗಡ್ಡೆಯಲ್ಲಿರುವ ತೇವಾಂಶವನ್ನು ಸರಿಯಾಗಿ ಒರೆಸಿ ಬಿಸಿ ಎಣ್ಣೆಗೆ ಹಾಕಿ.ಮಧ್ಯಮ ಉರಿಯಲ್ಲಿ ೧೦ ನಿಮಿಷ ಕರಿಯಿರಿ.ಕರಿದ ಆಲೂಗಡ್ಡೆ ಹೋಳುಗಳನ್ನು ಎಣ್ಣೆಯಿಂದ ತೆಗೆದು ಒಂದು ತಟ್ಟೆಗೆ ಹಾಕಿ.೫ ನಿಮಿಷ ಹಾಗೆ ಬಿಟ್ಟು ಪುನಃ ಬಿಸಿ ಎಣ್ಣೆಗೆ ಹಾಕಿ ಕರಿಯಬೇಕು.ಹೀಗೆ ಮಾಡುವಿದರಿಂದ ಫ್ರೆಂಚ್ ಫ್ರೈಸ್ ತುಂಬಾ ಕ್ರಿಸ್ಪಿಯಾಗಿ ಬರುತ್ತದೆ.ಆದರೆ ಎರಡನೇ ಬಾರಿ ಕರಿಯುವಾಗ ದೊಡ್ಡ ಉರಿಯಲ್ಲಿಟ್ಟುಕೊಂಡು ಕರಿಯಬೇಕು.ಕರಿದು ತೆಗೆದ ಫ್ರೆಂಚ್ ಫ್ರೈಸ್ ಪೂರ್ತಿ ತಣಿಯುವ ಮೊದಲೇ ಅದಕ್ಕೆ ನಿಮ್ಮ ರುಚಿಗೆ ತಕ್ಕಷ್ಟು ಉಪ್ಪು,ಅಚ್ಛ ಖಾರದ ಪುಡಿ ಮತ್ತು ಚಾಟ್ ಮಸಾಲಾ ಪುಡಿ ಹಾಕಿ ಚೆನ್ನಾಗಿ ಟಾಸ್ ಮಾಡಿದರೆ ರುಚಿಯಾದ ಸ್ನ್ಯಾಕ್ ಫ್ರೆಂಚ್ ಫ್ರೈಸ್ ರೆಡಿ.

Share Post