BengaluruLifestyle

ತಿರುಮಲ ಮಾದರಿಯ ಇಸ್ಕಾನ್‌ ದೇಗುಲ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್‌

ಬೆಂಗಳೂರು: ಇಸ್ಕಾನ್‌ನ ನೂತನ ರಾಜಾಧಿರಾಜ ಗೋವಿಂದ ದೇವಾಲಯ ಹಾಗೂ ಸಾಂಸ್ಕೃತಿಕ ಸಂಕೀರ್ಣ ಕಟ್ಟಡವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟಿಸಿದರು. ಕನಕಪುರ ರಸ್ತೆಯ ವಸಂತಪುರದಲ್ಲಿ ಈ ನೂತನ ದೇವಾಲಯ ನಿರ್ಮಿಸಲಾಗಿದೆ.

ನಿನ್ನೆಯೇ ರಾಜ್ಯಕ್ಕೆ ಆಗಮಿಸಿದ್ದ ರಾಷ್ಟ್ರಪತಿ ದಂಪತಿ ಇಂದು ಬೆಳಗ್ಗೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ‌ ಬೊಮ್ಮಾಯಿ ಜೊತೆಗಿದ್ದರು. ದರ್ಶನ ನಂತರ, ದೇವಾಲಯ ಆವರಣದ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ತಿರುಮಲ ಮಾದರಿಯಲ್ಲಿ ಈ ದೇವಾಲಯ ನಿರ್ಮಿಸಿರುವುದು ವಿಶೇಷ. ಮುಂದಿನ 48 ದಿನಗಳಲ್ಲಿ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಆಗಸ್ಟ್ 1ರ ನಂತರ ಸಾರ್ವಜನಿಕರ‌ ಪ್ರವೇಶಕ್ಕೆ ದೇವಾಲಯ ಮುಕ್ತವಾಗಲಿದೆ ಎಂದು ಇಸ್ಕಾನ್ ಬೆಂಗಳೂರು ಅಧ್ಯಕ್ಷ ಮಧು ಪಂಡಿತ್ ದಾಸ್ ಹೇಳಿದ್ದಾರೆ.

Share Post