Sports

Ind Vs Sa Test : ಮಳೆಯಿಂದ ಎರಡನೇ ದಿನದಾಟಕ್ಕೆ ಅಡ್ಡಿ

ಸೆಂಚೂರಿಯನ್‌ : ಭಾರತ ಮತ್ತು ದ.ಆಫ್ರಿಕ ನಡುವಿನ ಟೆಸ್ಟ್‌ ಪಂದ್ಯ ನೆನ್ನೆ ಆರಂಭವಾಗಿದ್ದು ಭಾರತ ಅತ್ಯುತ್ತಮ ಸ್ಥಾನದಲ್ಲಿದೆ. ಶತಕ ಸಿಡಿಸಿ ಆಡುತ್ತಿರುವ ಕೆ.ಎಲ್‌ ರಾಹುಲ್‌ ಎಲ್ಲರ ಗಮನ ಸೆಳೆದಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಭಾರತ ೨೭೨ ರನ್‌ ಗಳಿಸಿ ಮೂರು ವಿಕೆಟ್‌ ಕಳೆದುಕೊಂಡಿತ್ತು.

ಎರಡನೇ ದಿನದ ಆಟ ಇನ್ನು ಶುರು ಆಗೋದು ಬಾಕಿ ಇದೆ. ಸತತ ಮಳೆಯಿಂದ ಪಂದ್ಯ ಶುರು ಆಗೋದು ತಡವಾಗುತ್ತಿದೆ. ಇದೇ ರೀತಿ ಮಳೆ ಸುರಿದರೆ ಇಂದಿನ ದಿನದ ಆಟ ನಶಿಸಿ ಹೋದರೂ ಅಚ್ಚರಿ ಇಲ್ಲ.

ಶೂನ್ಯ ಸುತ್ತಿದ ಚೇತೇಶ್ವರ ಪೂಜಾರ

ಮೊದಲ ಪಂದ್ಯದ ಮೊದಲ ಬಾಲ್‌ನಲ್ಲಿಯೇ ಔಟಾದ ಚೇತೇಶ್ವರ ಪೂಜಾರ ಬಗ್ಗೆ ಸಾಕಷ್ಟು ಟೀಕೆಗಳು ಬರುತಿವೆ. ಆದರೆ ರಾಹುಲ್‌ ಡ್ರಾವಿಡ್‌ ಮಾತ್ರ ಕೂಲ್‌ ಆಗಿರುವಂತೆ ಚೇತೇಶ್ವರ ಅವರ ಬೆನ್ನು ತಟ್ಟಿದ್ದಾರೆ. ಪೂಜಾರ ರಾಹುಲ್‌ ಅವರಿಗೆ ಮುಗುಳ್ನಗು ಬೀರಿದ್ದಾರೆ. ಈ ವೀಡಿಯೋ ಈಗ ವೈರಲ್‌ ಆಗಿದೆ.

Share Post